ಉದಯವಾಹಿನಿ, ಕನ್ನಡ ಸಿನಿಮಾ ರಂಗದ ಪ್ರತಿಭಾವಂತ ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು ತುಳುನಾಡಿನ ದೈವಾರಾಧನೆಯಲ್ಲಿ ಅಪಾರ ನಂಬಿಕೆ ಹೊಂದಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ತುಳುನಾಡಿನ ಪವಿತ್ರ ದೈವಾರಾಧನೆಯ ನೇಮೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ‘ಸ್ವಾಮಿ ಎನ್ನ ಅಪ್ಪೆ ಪಿಲ್ಚಂಡಿ’ ಎಂದು ಪ್ರಾರ್ಥಿಸಿದ್ದಾರೆ.
ಕನ್ನಡ ಸಿನಿಮಾ ರಂಗದ ಪ್ರತಿಭಾವಂತ ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು ತುಳುನಾಡಿನ ದೈವಾರಾಧನೆಯಲ್ಲಿ ಅಪಾರ ನಂಬಿಕೆ ಹೊಂದಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ತುಳುನಾಡಿನ ಪವಿತ್ರ ದೈವಾರಾಧನೆಯ ) ನೇಮೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ‘ಸ್ವಾಮಿ ಎನ್ನ ಅಪ್ಪೆ ಪಿಲ್ಚಂಡಿ’ ಎಂದು ಪ್ರಾರ್ಥಿಸಿದ್ದಾರೆ.
ರಾಜ್ ಬಿ ಶೆಟ್ಟಿ ಅವರು ನೇಮೋತ್ಸವದಲ್ಲಿ ಪಾಲ್ಗೊಂಡು ದೈವದ ಮುಂದೆ ಶರಣಾಗಿ ಪ್ರಾರ್ಥಿಸುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ರಾಜ್ ಬಿ ಶೆಟ್ಟಿ ಅವರು ಸರಳ ಭಕ್ತರಂತೆ ದೈವದ ಎದುರು ನಿಂತು, ದೈವದ ಜೊತೆಗೆ ಪ್ರಾರ್ಥಿಸುತ್ತಿರುವುದು ಕಂಡುಬಂದಿದೆ. ಇದು ಅವರಿಗೆ ತುಳುನಾಡಿನ ಆಚರಣೆ, ನಂಬಿಕೆ ಮತ್ತು ಸಂಸ್ಕೃತಿಯಲ್ಲಿ ಅವರಿಗಿರುವ ಅಪಾರ ಗೌರವವನ್ನು ಪ್ರತಿಬಿಂಬಿಸಿದೆ.
ಸ್ವಾಮಿ ಎನ್ನ ಅಪ್ಪೆ ಪಿಲ್ಚಂಡಿ’ ಎಂದರೇನು?
ರಾಜ್ ಬಿ ಶೆಟ್ಟಿ ಅವರು ನೇಮೋತ್ಸವದಲ್ಲಿ ಪಾಲ್ಗೊಂಡು ದೈವದ ಮುಂದೆ ಶರಣಾಗಿ ಪ್ರಾರ್ಥಿಸುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಕ್ಯಾಪ್ಶನ್ ಆಗಿ ‘ಸ್ವಾಮಿ ಎನ್ನ ಅಪ್ಪೆ ಪಿಲ್ಚಂಡಿ’ ಎಂದು ಬರೆದುಕೊಂಡಿದ್ದಾರೆ. ತುಳು ಭಾಷೆ ಬರುವವರಿಗೆ ಈ ವಾಕ್ಯ ಸರಳವಾಗಿ ಅರ್ಥವಾಗುತ್ತದೆ. ಆದರೆ ತುಳುವೇತರರಿಗೆ ಈ ವಾಕ್ಯ ಅರ್ಥವಾಗದ ಕಾರಣ ಕಾಮೆಂಟ್‌ನಲ್ಲೇ ಏನಿದರ ಅರ್ಥ ಎಂದು ಕೆಲವರು ತಮ್ಮ ತುಳು ಸ್ನೇಹಿತರನ್ನು ಟ್ಯಾಗ್ ಮಾಡಿ ಕೇಳಿದ್ದಾರೆ.
