
ಉದಯವಾಹಿನಿ ಮುದ್ದೇಬಿಹಾಳ ; ಈ ಗ್ರಾಮದಲ್ಲಿ ಈ ಗ್ರಾಮಸ್ಥರು ವಾಸಿಸುವ ಸ್ಥಳಕ್ಕೆ ರಸ್ತೆಯೇ ನಿರ್ಮಾಣ ಆಗಿಲ್ಲ ,ಕಾಲು ದಾರಿಯಲ್ಲಿ ತಿರುಗುವ ಇವರಿಗೆ ಮಳೆಗಾಲ ಬಂದರೆ ನರಕ ಸದೃಶ ದರ್ಶನವಾಗುತ್ತದೆ ಮಕ್ಕಳು ಹಿರಿಯರು ಕೆಸರಲ್ಲಿ ತಿರಗಬೇಕು ,ಯಾರಾದರೂ ಮೃತಪಟ್ಟರೇ ಗೌರವಯುತ ಅಂತ್ಯಸಂಸ್ಕಾರಕ್ಕೂ ಪರದಾಡಬೇಕಿದೆ ಈ ಗ್ರಾಮಸ್ಥರುಮುದ್ದೇಬಿಹಾಳ ತಾಲ್ಲೂಕಿನ ಕೊನೆಯ ಗ್ರಾಮ ಆಲಕೊಪ್ಪರ ಗ್ರಾಮದ ಕಥೆ ಮತ್ತು ವ್ಯಥೆ ಇದು ಆಲಕೊಪ್ಪರ ಗ್ರಾಮದಿಂದ ಗುಂಡಕರಜಗಿ ಹೋಗುವ ಸಂಪರ್ಕ ರಸ್ತೆ ಈ ಗ್ರಾಮ ಕಣ್ಣುಬಿಟ್ಟಾಗಿನಿಂದ ನಿರ್ಮಾಣ ಆಗಿಲ್ಲ ಆಲಕೊಪ್ಪರ ಗ್ರಾಮದ ರೈತಾಪಿ ಜನರು ಇತ್ತೀಚೆಗೆ ನೀರಾವರಿ ಆದಾಗಿನಿಂದ ಹೊಲಗಳಲ್ಲಿ ಮನೆಯನ್ನು ಮಾಡಿಕೊಂಡು, ಶೇಡ್ ಹಾಕಿಕೊಂಡು ಅಲ್ಲಿಯೇ ವಾಸಿಸುತ್ತಿದ್ದಾರೆ ಹೀಗೆ ವಾಸಿಸುವ ಕುಟುಂಬಗಳ ಸಂಖ್ಯೆ 20 ರಿಂದ 30 ಒಟ್ಟು ನೂರು ಜನಕ್ಕೂ ಹೆಚ್ಚು ಜನರು ಮಕ್ಕಳು ಹಿರಿಯರೂಂದಿಗೆ ಜೀವನ ಸಾಗಿಸುತ್ತಿದ್ದಾರೆ, ಇವರುಗಳು ವಾಸಿಸುವ ಹೊಲಗಳು ಆಲಕೊಪ್ಪರದಿಂದ ಗುಂಡಕರಜಗಿ ಗ್ರಾಮವನ್ನು ಸಂಪರ್ಕಿಸುವ ರಸ್ತೆಯಾಗಿದೆ
ಸ್ವಾತಂತ್ರ್ಯ ಪೂರ್ವದಿಂದಲೂ ಈ ರಸ್ತೆ ಎತ್ತಿನ ಬಂಡಿ ಹೋಗುವ ರಸ್ತೆ ಆಗಿದೆ ಆದರೆ ಈಗ ಸಮಸ್ಯೆ ಏನು ಉದ್ಬವಿಸಿದೆ ಎಂದರೆ ಸತತವಾಗಿ ಸುರಿಯುವ ಮಳೆಯಿಂದ ಎರೆಮಣ್ಣಿನ ಕಾಲು ದಾರಿ ಈಗ ಸಂಪೂರ್ಣ ಕೆಸರುಮಯವಾಗಿದೆ ಮಕ್ಕಳು ಶಾಲೆಗೆ ಹೋಗಲು ನಾಲ್ಕೈದು ಕಿಮೀ ಈ ಕೆಸರು ರಸ್ತೆಯಲ್ಲಿ ನಡೆದುಕೊಂಡು ಬರಬೇಕು ರೈತರು ಬೆಳೆದ ಬೆಳೆ ರಾಶಿಯನ್ನು ಸಹ ಇಂತಹ ಕೆಸರಲ್ಲಿ ತರಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ
ಹಾವು ಕಡಿತ ಸಕಾಲಕ್ಕೆ ಸಿಗದ ಚಿಕಿತ್ಸೆ ಮಹಿಳೆ ಸಾವು; ಆಲಕೊಪ್ಪರದ ಮಹಿಳೆ ಕಮಲವ್ವ ಕೆಲ್ಲೂರ ( ಚಲವಾದಿ) ಮಹಿಳೆ ಇತ್ತೀಚೆಗೆ ಹಾವು ಕಡಿತದಿಂದ ಸಾವನ್ನಪ್ಪಿದರು ಹೊಲದಲ್ಲಿ ವಾಸಿಸುವ ಕಮಲವ್ವ ಅವರಿಗೆ ಹಾವು ಕಚ್ಚಿದಾಗ ಅವರನ್ನು ಅಲ್ಲಿಂದ ಮೂರನಾಲ್ಕು ಕಿಮೀ ಇರುವ ಆಲಕೊಪ್ಪರ ಗ್ರಾಮದೂಳಗೆ ಕರೆತರಲು ಆಗಲಿಲ್ಲ ಅಂಬ್ಯಲೆನ್ಸ ಹೋಗದಂತ ರಸ್ತೆ ಪರಿಸ್ಥಿತಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ಈ ಮಹಿಳೆ ಅಸುನಿಗಬೇಕಾಯಿತು ಎಂದು ಮಹಿಳೆಯ ಮೈದುನ ಶಂಕ್ರಪ್ಪ ಕೆಲ್ಲೂರ ( ಚಲವಾದಿ ) ಹೇಳುತ್ತಾರೆ.
ನಮ್ಮಗೋಳು ಕೇಳೂರು ಯಾರು?
ಆಲಕೊಪ್ಪರ ಗ್ರಾಮದ ಹೊಲಗಳಲ್ಲಿ ವಾಸಿಸುವ ಮುದಕಪ್ಪ ಹುಬ್ಬಳ್ಳಿ, ರಾಜೇಶ ಹುಬ್ಬಳ್ಳಿ, ಭೀಮಣ್ಣ ವಡ್ಡರ “ಹೂಲದಾಗ ಇಪ್ಪತ್ತು ಮೂವತ್ತು ಮನಿ ಅದಾವರ್ರೀ 100 ಮಂದಿ ನಾವು ಮತ ಹಾಕೋರು ಅದೀವಿ ಮತ್ತ ಇಪ್ಪತ್ತು ಮಕ್ಕಳು ಸಣ್ಣು ಮಕ್ಕಳು ಊರಾನ ಸಾಲಿಗಿ ಹೋಗ್ತಾವು ರಸ್ತೆ ಮೊದಲ ಸರಿ ಇಲ್ಲ ಅದಾರಗ ಈ ರಸ್ತಾದಗ ಕರೆಗೆ ನೀರು ಹರಿದು ಹೋಗ್ತದ ಅದಾರಗ ಮಕ್ಕಳು ಸಾಲಿಗಿ ಹೋಗಬೇಕು, ಮಳಿ ಬಂತಂದರ ಹೂಲದಾಗ ಇದ್ದರೂ ಹೂಲದಾಗ, ಸಾಲ್ಯಾಗ ಇದ್ದೂರು ಸಾಲ್ಯಾಗ ಇರಬೇಕು, ಹೂಲದಾಗ ಮಾಡಿದ ರಾಶಿ ತಗೂಂಡು ಹೋಗಾಕ ಗಾಡಿ ಬರೂದಿಲ್ಲ, ಟ್ಯಾಕ್ಟರದವರೂ ರಾಡಿ ನೋಡಿ ಬರೂದಿಲ್ಲ ಅಂತಾರ, ಹೂಲದಾಗ ಕೆಲಸ ಮಾಡಾಕ ಮಂದಿ ಬರದ ಕಾರಣ ಬಿತ್ತೂ ಹೋಲಗಳು ಬೀಳ ಬಿಳಾಕತ್ತಾವ ರ್ರೀ ,ಬೈಕ್ ಸೈತಿ ಹೋಗದಂತ ಪರಿಸ್ಥಿತಿ ಐತಿ ,ಮಳಿ ಬಂದರ ನಮಗ ನಕರ ಆಗ್ತದ ದಯವಿಟ್ಟು ನಾವು ಮತದಾರರ ಅದೀವಿ ದಯವಿಟ್ಟು ಈ ರಸ್ತೆ ನಿರ್ಮಾಣ ಮಾಡಿಕೊಡಬೇಕು” ಎಂದು ತಮ್ಮ ಅಳಲನ್ನು ತೂಡಿಕೂಂಡರು ಆಲಕೊಪ್ಪರದಿಂದ ಗುಂಡಕರಜಗಿ ಸಂಪರ್ಕ ಮಾಡುವ ಈ ರಸ್ತೆ ನಿರ್ಮಾಣ ಮಾಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ತಿಳಿಸಿದರು ಯಾರೊಬ್ಬರು ನಮ್ಮ ಕಷ್ಟ ಏನೆಂದು ಕೇಳಿಲ್ಲ ವಾಸ್ತವಿಕ ಸಮಸ್ಯೆ ಕಣ್ಣಾರೆ ನೋಡಿ ನಮಗೆ ರಸ್ತೆ ನಿರ್ಮಾಣ ಮಾಡಿಕೊಡಬೇಕು ಇದಕ್ಕೆ ಒಂದು ವಾರ ಗಡವು ನೀಡ್ತವೆ ರಸ್ತೆ ನಿರ್ಮಾಣ ಮಾಡದೆ ಹೋದರೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂಬ ಎಚ್ಚರಿಕೆಯನ್ನು ಗ್ರಾಮಸ್ಥರಾದ ಮಲ್ಲಪ್ಪ ಬೆಲ್ಲದ,ಬಸವರಾಜ ಸಂಕನಾಳ, ಭೀಮರಾಯ ಬಿರಾದಾರ, ಬನ್ನೆಪ್ಪ ವಡ್ಡರ,ಅಶೋಕ ವಡ್ಡರ,ಮುದಕಪ್ಪ ಹುಬ್ಬಳ್ಳಿ, ಅನ್ನಪ್ಪಗೌಡ ಆಹೇರಿ,ಶಂಕ್ರಪ್ಪ ಕೆಲ್ಲೂರ, ಸಾಬಣ್ಣ ದಳವಾಯಿ,ಪವಾಡೆಪ್ಪ ಕೆಲ್ಲೂರ ,ರಾಜೇಶ ಹುಬ್ಬಳ್ಳಿ, ಬಸಪ್ಪ ದಳವಾಯಿ, ಶಾಂತಗೌಡ ಬಿರಾದಾರ
ನೀಡುತ್ತಾರೆ
ಆಲಕೊಪ್ಪರ ದಿಂದ ಗುಂಡಕರಜಗಿ ಹೋಗುವ ರಸ್ತೆ ಇಲ್ಲ ಕೆಸರು ರಸ್ತೆಯಲ್ಲಿ ತಿರುಗಿ ನಮ್ಮ ಕಾಲು ಹೋಗಿದ್ಧಾವ, ಹೋದ ವರ್ಷ ಒಬ್ಬರಿಗೆ ಇದೆ ಕೆಸರಾಗ ಹಾವು ಕಡಿದು 50 ಸಾವಿರ ಹೋದ್ವು ದವಾಖಾನಿಗಿ ಈ ವರ್ಷ ಒಬ್ಬ ಹೆಣ್ಮಗಳು ಹಾವು ಕಡಿದು ಸತ್ತೆ ಹೂದ್ಲು ,ನಮಗು ರಸ್ತೆ ಮಾಡ್ರೀ ಅಂತ ಹೇಳಿ ಹೇಳಿ ಸಾಕಾಗಿದೆ ರಸ್ತೆ ಮಾಡದಿದ್ದರ ಆಲಕೊಪ್ಪರ ಮುಖ್ಯ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡುತ್ತೇವೆ ; ಬಸವರಾಜ ಸಂಕನಾಳ
ನಾನು 7 ನೇ ತರಗತಿ ಓದ್ತಾ ಇದ್ದಿನಿ ರ್ರೀ ನಮ್ಮ ಮನಿ ಹೋಲದಾಗ ಅದಾವು ನಾವು ಕೆಸರಾಗ ಸಾಲಿಗಿ ಬರಬೇಕು, ಜೋರು ಮಳಿ ಬಂತಂದ್ರ ಸಾಲಿಯೂಳಗ ಉಳಿತ್ತಿವಿ,ನನಗ ಓದಬೇಕು ತುಂಬಾ ಆಸೆ ಇದೆ ದಯವಿಟ್ಟು ರಸ್ತೆ ಮಾಡಿ ಕೂಡ್ರೀ ಕೈ ಮುಗುತಿನಿ ; ರಕ್ಷಿತಾ ಕೆಲ್ಲೂರ ( 7 ತರಗತಿ ವಿದ್ಯಾರ್ಥಿನಿ)
ಆಲಕೊಪ್ಪರ ಗ್ರಾಮದ ಈ ಸಮಸ್ಯೆಯನ್ನು ಗ್ರಾಪಂಯಿಂದಲೇ ಪರಿಹರಿಸ ಬಹದು ಸದ್ಯ ಮಳೆಯಿಂದ ಸಮಸ್ಯೆ ಉಲ್ಬಣವಾಗಿದ್ದು ನಡೆಯಲು ಆಗದಂತ ರಸ್ತೆಯಲ್ಲಿ ಮರ್ಮ ಹಾಕಿ ಅದರ ಮೇಲೆ ಗರಸು ಹಾಕಿ ತಾತ್ಕಾಲಿಕ ರಸ್ತೆ ಸುಧಾರಣೆ ಮಾಡಬಹುದು ನಂತರ ಶಾಶ್ವತ ರಸ್ತೆ ನಿರ್ಮಾಣ ಕ್ಕೆ ಮುಂದಾಗಬಹುದಾಗಿದೆ.
