
ಉದಯವಾಹಿನಿ ಕೊಲ್ಹಾರ. ಅನೇಕ ದೂರುಗಳ ಬಂದ ಹಿನ್ನೆಲೆಯಲ್ಲಿ ಪಟ್ಟಣದ ಆಧಾರ್ ನೋಂದಣಿ ಕೇಂದ್ರ ಸೀಲ್ ಮಾಡಿರುವ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆಯಿತು.ಬಿಎಸ್ಎನ್ಎಲ್ ಕಚೇರಿ ಹತ್ತಿರದ ಆಧಾರ್ ನೊಂದಣಿ ಕೇಂದ್ರದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿಗೆ ೨೦೦ ರೂಪಾಯಿಗಳನ್ನು ಪಡೆಯಲಾಗುತ್ತಿದೆ ಎಂಬ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಆಧಾರ್ ನೋಂದಣಿ ಕೇಂದ್ರಕ್ಕೆ ತಹಶೀಲ್ದಾರ್ ರೇಣುಕಾ ಎಂ ಭೇಟಿ ನೀಡಿ ಪರಿಶೀಲನೆ ನಡೆಸಿದರು ನೋಂದಣಿ ಸಿಬ್ಬಂದಿ ತಹಶೀಲ್ದಾರ್ ಅವರ ಜೊತೆಗೆ ಸಮರ್ಪಕವಾಗಿ ಉತ್ತರಿಸಿದೆ ಉದ್ಧಟತನದಿಂದ ವರ್ತಿಸುವುದು ಕಂಡುಬಂದಿತು. ಸಿಬ್ಬಂದಿಯ ದುರ್ವರ್ತನೆ ಕಂಡು ತಾಲ್ಲೂಕ ದಂಡಾಧಿಕಾರಿಗಳು ಕಪಾಳಮೋಕ್ಷ ಮಾಡಲು ಹೋದ ಘಟನೆ ಕೂಡ ಜರುಗಿತು.ಆಧಾರ್ ನೋಂದಣಿ ಕೇಂದ್ರದಲ್ಲಿ ತಿದ್ದುಪಡಿಗೆ ನಿಯಮಕ್ಕಿಂತ ಹೆಚ್ಚಿನ ಮೊತ್ತ ಪಡೆಯಲಾಗುತ್ತಿದೆ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಪರೀಶೀಲನೆ ನಡೆಸಲಾಗಿದೆ. ಮೇಲ್ನೋಟಕ್ಕೆ ಆರೋಪ ಸತ್ಯ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಂಡು ಮುಂದಿನ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಹೇಳಿದರು.ತಹಶೀಲ್ದಾರ್ ರೇಣುಕಾ ಎಂ
ಸಾರ್ವಜನಿಕರಿಂದ ನಿಯಮಕ್ಕಿಂತ ಹೆಚ್ಚಿನ ಮೊತ್ತ ಪಡೆಯಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ನಾವುಗಳು ಕೂಡ ನೈಜ ವಸ್ತುಸ್ಥಿತಿ ವಿಚಾರಿಸಿ, ತಾಲ್ಲೂಕ ದಂಡಾಧಿಕಾರಿಗಳ ಗಮನಕ್ಕೆ ತರಲಾಗಿ ತಾಲ್ಲೂಕ ದಂಡಾಧಿಕಾರಿಗಳು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ.ನಿಂಗು ಗಣಿ ಪ ಪಂ ಸದಸ್ಯರು ಮತ್ತು, ಈರಯ್ಯ ಗಣಕುಮಾರ.ಅಭಿವೃದ್ಧಿ ಹಿತಚಿಂತಕರ ವೇದಿಕೆ ಕೊಲ್ಹಾರ.
