ಉದಯವಾಹಿನಿ, ಏ.5ರಂದು ಸಿಎಸ್‌ಕೆ ಹಾಗೂ ಆರ್‌ಸಿಬಿ ನಡುವೆ ನಡೆದ ಪಂದ್ಯದ ವೇಳೆ `ದೋಸೆ, ಇಡ್ಲಿ, ಚಟ್ನಿ’ ಹಾಡು ಪ್ರಸಾರ ಮಾಡಿದ್ದಕ್ಕಾಗಿ ಆರ್‌ಸಿಬಿ ವಿರುದ್ಧ ಬಿಸಿಸಿಐಗೆ ಸಿಎಸ್‌ಕೆ ದೂರು ನೀಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ವೇಳೆ `ದೋಸೆ, ಇಡ್ಲಿ, ಚಟ್ನಿ’ ಹಾಡನ್ನು ಪ್ರಸಾರ ಮಾಡಿದ್ದು ಸರಿಯಾಗಿರಲಿಲ್ಲ. ಅಲ್ಲದೇ ಚೆನ್ನೈ ತಂಡದ ಆಟಗಾರರ ಬಗ್ಗೆ ಟೀಕೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಿಎಸ್‌ಕೆ ವ್ಯವಸ್ಥಾಪಕ ನಿರ್ದೇಶಕ ಕಾಸಿ ವಿಶ್ವನಾಥನ್ ಅವರು ಈ ಬಗ್ಗೆ ಮಾತನಾಡಿ, ಪಂದ್ಯದ ವೇಳೆ ಸಾಮಾನ್ಯವಾಗಿ ಸಕಾರಾತ್ಮಕ ವಾತಾವರಣ ಸೃಷ್ಟಿಸಲು ಹಾಡು ಪ್ರಸಾರ ಮಾಡುತ್ತಾರೆ. ಜೊತೆಗೆ ತವರಿನಲ್ಲಿ ಆಡುವ ತಂಡಗಳಿಗೆ ಹಾಡುಗಳು ಬೆಂಬಲ ನೀಡುತ್ತವೆ. ಆದರೆ ಎದುರಾಳಿ ತಂಡಗಳನ್ನು ಟೀಕಿಸುವಂತಿರಬಾರದು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಕಿದ ಹಾಡು ವಿಭಿನ್ನ ರೀತಿಯಲ್ಲಿತ್ತು. ನಮ್ಮ ಆಟಗಾರರ ವಿರುದ್ಧ ಕೆಲ ಕಾಮೆಂಟ್ ಮಾಡಿದ್ದಾರೆ. ಇದನ್ನು ಪರಿಗಣಿಸಿ, ಪರಿಶೀಲಿಸಲು ಬಿಸಿಸಿಐಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!