ಉದಯವಾಹಿನಿ, ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಕೇವಲ 1 ರನ್‌ನಿಂದ ಅರ್ಧಶತಕ ಮಿಸ್ ಮಾಡಿಕೊಂಡಿದ್ದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಕೊಹ್ಲಿ ಕ್ಯಾಚ್ ನೀಡಿ ಫಿಫ್ಟಿ ವಂಚಿತರಾಗಿ ಪೆವಿಲಿಯನ್ ಕಡೆ ನಡೆದಿದ್ದನ್ನು ಕಂಡು ಪತ್ನಿ ಅನುಷ್ಕಾ ಶರ್ಮಾ ನಿರಾಸೆಗೊಂಡರು.
ಬೆಂಗಳೂರಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಆರ್‌ಸಿಬಿ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಕೊಡುಗೆಯಿದೆ. ಕೊಹ್ಲಿ 34 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 49 ರನ್ ಕಲೆಹಾಕಿದರು. ಕೊಹ್ಲಿ ತಮ್ಮ 66ನೇ ಐಪಿಎಲ್ ಅರ್ಧಶತಕಕ್ಕೆ ಸಜ್ಜಾಗಿದ್ದರು. ಆದರೆ, 49 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ, ಮಾಜಿ ಆರ್‌ಸಿಬಿ ನಾಯಕ ಆವೇಶ್ ಖಾನ್ ಬೌಲಿಂಗ್‌ನಲ್ಲಿ ನಿಕೋಲಸ್ ಪೂರನ್ ಅವರಿಗೆ ಕ್ಯಾಚ್ ನೀಡಿದರು. ನಟಿ ಮತ್ತು ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಕ್ರೀಡಾಂಗಣದಲ್ಲಿದ್ದರು. ಕೊಹ್ಲಿ ಕೇವಲ 1 ರನ್‌ನಿಂದ ಅರ್ಧಶತಕ ವಂಚಿತರಾಗಿ ಹೊರಬಂದಿದ್ದನ್ನು ಕಂಡು ಪತ್ನಿ ನಿರಾಸೆ ಭಾವ ವ್ಯಕ್ತಪಡಿಸಿದರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಲ್‌ಎಸ್‌ಜಿ ವೇಗವನ್ನು ಪಡೆಯಲಿಲ್ಲ. ಮಿಚೆಲ್ ಮಾರ್ಷ್ (32 ಎಸೆತಗಳಲ್ಲಿ 40) ಮತ್ತು ಆಯುಷ್ ಬಡೋನಿ (24 ಎಸೆತಗಳಲ್ಲಿ 38) ಮಾತ್ರ ಗಮನಾರ್ಹ ಕೊಡುಗೆ ನೀಡಿದರು. ತಂಡವು 146 ರನ್‌ಗಳಿಗೆ ಆಲೌಟ್ ಆಯಿತು. ಈ ಆವೃತ್ತಿಯಲ್ಲಿ ಎಸ್‌ಎಲ್‌ಜಿ ದಾಖಲಿಸಿದ ಅತ್ಯಂತ ಕಡಿಮೆ ಮೊತ್ತ ಇದು. ಆರ್‌ಸಿಬಿ ಪರ ಉತ್ತಮ ಬೌಲಿಂಗ್ ಪ್ರದರ್ಶನ ಇತ್ತು. ಭುವನೇಶ್ವರ್ ಕುಮಾರ್ (3/27) ಮತ್ತು ಕೃನಾಲ್ ಪಾಂಡ್ಯ (2/38) ಕೂಡ ಉತ್ತಮ ಪ್ರದರ್ಶನ ನೀಡಿದರು. ಜೋಶ್ ಹ್ಯಾಜಲ್‌ವುಡ್ ಒಂದು ವಿಕೆಟ್ ಪಡೆದರು
