ಉದಯವಾಹಿನಿ, ಈ ಬಾರಿಯ ಐಪಿಎಲ್‌ನಲ್ಲಿ ಹೈದರಾಬಾದ್ತಂ ಐದು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಸತತ ಎರಡು ಸೋಲಿನ ನಂತರ ಹೈದರಾಬಾದ್ ತಂಡವು ಮತ್ತೆ ಚೇತರಿಸಿಕೊಂಡಿದ್ದು, ಕಳೆದ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ್ ರಾಯಲ್ಸ್ ಸೋಲಿಸಿ ಕಮ್ಬ್ಯಾಕ್ ಮಾಡಿದೆ. ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ತಂಡದ ಟಾಪ್ ಬೌಲರ್ ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ ಫಿಟ್ನೆಸ್ ಟೆಸ್ಟ್ ಪಾಸ್ ಆಗಿ ಭಾರತಕ್ಕೆ ಮರಳಿದ್ದಾರೆ. ಇದರಿಂದ ಇಷ್ಟು ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದ ಇಶಾನ್ ಕಿಶನ್ ನಾಯಕತ್ವ ಕಳೆದುಕೊಳ್ಳಲಿದ್ದಾರೆ.
ಕಳೆದ ಪಂದ್ಯದಲ್ಲಿ ಇಬ್ಬರು ಅನ್ಕ್ಯಾಪ್ಡ್ ಬೌಲರ್‌ಗಳು ನಿರೀಕ್ಷೆಗೂ ಮೀರಿ ಅದ್ಭುತ ಪ್ರದರ್ಶನ ತೋರಿ ಹೈದರಾಬಾದ್‌ಗೆ ಅಚ್ಚರಿ ಜಯ ತಂದುಕೊಟ್ಟಿದ್ದರು. ಇದೀಗ ಬೌಲಿಂಗ್ ಪಡೆಗೆ ಆನೆಬಲ ಹೆಚ್ಚಿಸುವ ಮತ್ತೊಂದು ಬೌಲರ್ ಆರೆಂಜ್ ಆರ್ಮಿಗೆ ಸೇರಿಕೊಂಡಿದ್ದಾರೆ. ಈ ಮೂರನೇ ಬೌಲರ್ ಬೇರೆ ಯಾರೂ ಅಲ್ಲ, ಪ್ಯಾಟ್ ಕಮ್ಮಿನ್ಸ್. ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಪ್ಯಾಟ್ ಕಮ್ಮಿನ್ಸ್. ಅವರು ಇಂದು ತಂಡದೊಂದಿಗೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಐಪಿಎಲ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ಮತ್ತೆ ತಂಡಕ್ಕೆ ಮರಳಿರುವುದರಿಂದ ಇಶಾನ್ ಕಿಶನ್ ನಾಯಕತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ. ಏಕೆಂದರೆ ಪ್ಯಾಟ್ ಕಮ್ಮಿನ್ಸ್ ಹೈದರಾಬಾದ್ ತಂಡವನ್ನು ಕಳೆದ ಎರಡು ಸೀಸನ್ಗಳಿಂದ ಮುನ್ನಡೆಸುತ್ತಿದ್ದಾರೆ. ಆದರೆ, ಇಂದಿನ ಪಂದ್ಯದಲ್ಲಿ ಮಾತ್ರ ಇಶಾನ್ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
