ಉದಯವಾಹಿನಿ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ದೈತ್ಯ ಬ್ಯಾಟರ್‌ ಟಿಮ್‌ ಡೇವಿಡ್‌ ಇಂದು (ಶನಿವಾರ) ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಕೇವಲ 26 ರನ್‌ ಹೊಡೆದರೂ ವಿಶೇಷ ಸಾಧನೆ ಮಾಡಿದ್ದಾರೆ.ಐಪಿಎಲ್‌ನಲ್ಲಿ ಅತೀ ವೇಗವಾಗಿ 1,000 ರನ್‌ ಪೂರೈಸಿದ 2ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಡೇವಿಡ್‌ 7 ಎಸೆತಗಳಲ್ಲಿ 16 ರನ್‌ ಬಾರಿಸಿದ್ದಾಗ ಈ ಸಾಧನೆ ಮಾಡಿದರು. ಈ ಇನ್ನಿಂಗ್ಸ್‌ನಲ್ಲಿ 17 ಎಸೆತಗಳನ್ನ ಎದುರಿಸಿದ ಡೇವಿಡ್‌ 26 ರನ್‌ಗಳನ್ನಷ್ಟೇ ಗಳಿಸಿದರು. ಐಪಿಎಲ್‌ನಲ್ಲಿ ವೇಗವಾಗಿ 1,000 ರನ್‌ ಬಾರಿಸಿದ ಸಾಧನೆ ಆಟಗಾರರ ಪೈಕಿ ಕೆಕೆಆರ್‌ ಆಟಗಾರ ಆಂಡ್ರೆ ರಸೆಲ್ ಅಗ್ರಸ್ಥಾನದಲ್ಲಿದ್ದಾರೆ. ರಸೆಲ್‌ 545 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರೆ, ಟಿಮ್‌ ಡೇವಿಡ್‌ 560 ಎಸೆಗಳಲ್ಲಿ 1,000 ರನ್‌ ಬಾರಿಸಿದ್ದಾರೆ. ಇನ್ನು ಟ್ರಾವಿಸ್‌ ಹೆಡ್‌ (575 ಎಸೆತ) ಫಿಲ್‌ ಸಾಲ್ಟ್‌ (575 ಎಸೆತ), ಹೆನ್ರಿಚ್‌ ಕ್ಲಾಸೆನ್‌ (594 ಎಸೆತ), ವೀರೇಂದ್ರ ಸೇವ್ಹಾಗ್‌ (604 ಎಸೆತ), ಗ್ಲೆನ್‌ ಮ್ಯಾಕ್ಸ್‌ವೆಲ್‌ (610 ಎಸೆತ) ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ.
ಇನ್ನೂ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ, 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 175 ರನ್‌ ಗಳಿಸಿದೆ.

 

Leave a Reply

Your email address will not be published. Required fields are marked *

error: Content is protected !!