ಉದಯವಾಹಿನಿ ಸಿಂಧನೂರು: ನಗರದ ರಾಯಚೂರು ರಸ್ತೆಯಲ್ಲಿರುವ ಎ.ಆರ್ ಕೆ ಆರ್ಥೋಪೆಡಿಕ್ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆದಿದ್ದ ವ್ಯಕ್ತಿಯೋರ್ವ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಕುಟುಂಬಸ್ಥರು ಹಾಗೂ ಗೆಳೆಯರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆಯನ್ನು ಸಿಂಧನೂರು ನಗರ ಪೋಲಿಸರು ಸ್ವಯಂ ಪ್ರಕರಣ ದಾಖಲಿಸಿ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಂಡು, ಸಾವೀಗೀಡಾದ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಲು ನಮ್ಮ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ-ಟಿಯುಸಿಐ ಆಗ್ರಹಿಸುತ್ತದೆ.ಈ ವಿಷಯ ತಿಳಿದ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರೇಡ್ ಯಾನಿಯನ್ ಸೆಂಟರ್ ಆಫ್ ಇಂಡಿಯಾ-ಟಿಯಸಿಐ ರಾಜ್ಯ ಸಂಚಾಲಕ ಎಂ ಗಂಗಾಧರ್ ಅವರ
ಸಿರುಗುಪ್ಪ ನಗರದ ವಾರ್ಡ್ ನಂ.29 ರ‌ ನಿವಾಸಿ ರಾಜಾಸಾಬ್ (35) ಮೃತ ದುರ್ದೈವಿ. ರಾಜಾಸಾಬ್ ಎನ್ನುವ ಕಾರ್ಮಿಕ ಸಿಂಧನೂರು ನಗರದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಆತನ ಕೈಯಿಗೆ (ತಗಡು) ಕಬ್ಬಿಣದ ವಸ್ತು ಬಡಿದಿದ್ದು ಚಿಕಿತ್ಸೆಗಾಗಿ ನಗರದ ಎಆರ್ ಕೆ ಆರ್ಥೋಪೆಡಿಕ್ ಆಸ್ಪತ್ರೆಗೆ ಬೇಕರಿ ಮಾಲೀಕ ಹಾಗೂ ಆತನ ಸ್ನೇಹಿತರು ದಿನಾಂಕ : 31.07.2023 ಸೋಮವಾರ ಬೆಳಗ್ಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿನ ಚಿಕಿತ್ಸೆ ಫಲಕಾರಿಯಾಗದೇ ಸದರಿ ಆಸ್ಪತ್ರೆಯ ಅಂಬ್ಯುಲೆನ್ಸನಲ್ಲಿ ಬಳ್ಳಾರಿಗೆ ಕರೆದೊಯ್ಯುವಾಗ ದಾರಿಯ ಮದ್ಯದಲ್ಲಿಯೇ ಬೇಕರಿ ಕಾರ್ಮಿಕ ಸಾವನ್ನಪ್ಪಿದ್ದಾನೆ.ವೈದ್ಯರ ನಿರ್ಲಕ್ಷ್ಯತನದಿಂದ ಸಾವಿಗೀಡಾದ ಪ್ರಕರಣದ ಕುರಿತು ತನಿಖೆ ನಡೆಸಲು ಮಾನ್ಯ ಪೋಲಿಸರು ತನಿಖೆ ನಡೆಸುವಂತೆ ನಮ್ಮ ಸಂಘಟನೆ ಒತ್ತಾಯಿಸುತ್ತದೆ.ಸಿಂಧನೂರು ನಗರದಲ್ಲಿ ಕೆಲ ಖಾಸಗೀ ಆಸ್ಪತ್ರೆಗಳು ಚಿಕೆತ್ಸೆಯ ನೆಪದಲ್ಲಿ ಬಡವರ ಪ್ರಾಣದ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು. ಬರಿ ಒಂದು ಕಬ್ಬಿಣದ ತಗಡು ಕೈಗೆ ಹರಿದು ಗಾಯವಾದ ಕಾರಣದಿಂದ ಸಾವಿಗೀಡಾಗಿದ್ದನೆಂದರೇ ನಂಬಲು ಆಸಾದ್ಯ !? ಇದು ವೈದ್ಯರ ಬೇಜವಬ್ದಾರಿ, ನಿರ್ಲಕ್ಷ್ಯತನದಿಂದ ಕಾರ್ಮಿಕ ಮೃತಪಟ್ಟಿರುತ್ತಾನೆಂದು ನಮಗೆ ಅನುಮಾನ ! ಸೂಕ್ತ ವೈದ್ಯಕೀಯ ದಾಖಲೆ ಪರಿಶೀಲನೆ ಹಾಗೂ ಮರಣೋತ್ತರ ಪರಿಕ್ಷೆಯ ತನಿಖೆಯಿಂದ ಸತ್ಯ ಹೊರಬರಬೇಕಿದೆ.ಕಾರಣ ಬೇಕರಿಯಲ್ಲಿ ಕೆಲಸ ಮಾಡುವ ಕಾರ್ಮಿಕನ ಸಾವಿಗೆ ಕಾರಣರಾದ ಎಆರ್ ಕೆ ಆರ್ಥೋಪೆಡಿಕ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ಮೇಲೆ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಜರುಗಿಸಿ ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು ಆಗ್ರಹವಾಗಿದೆ ಎಂ.ಗಂಗಾಧರ ರಾಜ್ಯ ಸಮಿತಿ ಸದಸ್ಯರು ಟಿಯುಸಿಐ ಸಿಂಧನೂರು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದರು

Leave a Reply

Your email address will not be published. Required fields are marked *

error: Content is protected !!