ಉದಯವಾಹಿನಿ, ಬಾಲಿವುಡ್‌ನ ಕ್ಲಾಸಿಕ್ ಹಿಟ್ ಚಿತ್ರ ‘ಖಳನಾಯಕ್’ ಈಗ ಹೊಸ ರೂಪದಲ್ಲಿ ಮರಳಿ ಬರುತ್ತಿದ್ದು, ‘ಖಳನಾಯಕ್ ರಿಟರ್ನ್ಸ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ಶುಕ್ರವಾರ ಅನಾವರಣಗೊಂಡಿದ್ದು, ಸಂಜಯ್ ದತ್ ಅವರ ಭರ್ಜರಿ ಮಾಸ್ ಲುಕ್ ಅಭಿಮಾನಿಗಳಲ್ಲಿ ದೊಡ್ಡ ಸಂಚಲನ ಮೂಡಿಸಿದೆ.
ಟೀಸರ್‌ನಲ್ಲಿ ಸಂಜಯ್ ದತ್ ತೀಕ್ಷ್ಯ ಕಣ್ಣುಗಳು, ಗಂಭೀರ ಮುಖಭಾವ ಮತ್ತು ಆಕ್ರಮಣಕಾರಿ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. 1993ರ ಮೂಲ ಸಿನಿಮಾದಲ್ಲಿ ಜನಪ್ರಿಯವಾದ ‘ಬಲ್ಲು’ ಪಾತ್ರದ ನೆನಪುಗಳನ್ನು ಈ ಲುಕ್ ಮತ್ತೆ ಜೀವಂತಗೊಳಿಸಿದೆ. ಹಿನ್ನೆಲೆ ಸಂಗೀತ ಹಾಗೂ ದೃಶ್ಯಗಳ ವಿನ್ಯಾಸವೂ ಹಳೆಯ ‘ಖಳನಾಯಕ್’ ಕಾಲದ ನೆನಪನ್ನು ಮರುಕಳಿಸುವಂತಿದೆ.
ಸಂಜಯ್ ದತ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಟೀಸರ್ ಹಂಚಿಕೊಂಡು “ಯಾವುದೇ ಕಥೆ ಮುಗಿಯುವುದಿಲ್ಲ. ಅದು ಮತ್ತೆ ಆರಂಭವಾಗುತ್ತದೆ” ಎಂದು ಬರೆದುಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ಪೋಸ್ಟರ್‌ಗಳನ್ನು ಸಹ ಬಿಡುಗಡೆ ಮಾಡಲಾಗಿದೆ. “ಪ್ರತಿ ಕಥೆಗೆ ಅದರ ಸಮಯ ಬರುತ್ತದೆ” ಎಂಬ ಟ್ಯಾಗ್‌ಲೈನ್ ಕುತೂಹಲ ಹೆಚ್ಚಿಸಿದೆ.
ಮೂಲ ‘ಖಳನಾಯಕ್’ ಚಿತ್ರವನ್ನು ಸುಭಾಷ್ ಫೈನಿರ್ದೇಶಿಸಿದ್ದರು ಮತ್ತು ಅದು ಬಾಲಿವುಡ್‌ನ ಕಲ್ಟ್ ಹಿಟ್ ಆಗಿತ್ತು. ಸಂಜಯ್ ದತ್ ಜೊತೆಗೆ ಜಾಕಿ ಶ್ರಾಫ್ ಹಾಗೂ ಮಾಧುರಿ ದೀಕ್ಷಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈಗ ಸೀಕ್ವೆಲ್‌ನಲ್ಲಿ ಹಳೆಯ ತಾರಾಗಣ ಮುಂದುವರಿಯುತ್ತದೆಯೇ ಅಥವಾ ಹೊಸ ಕಲಾವಿದರು ಸೇರುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
