ಉದಯವಾಹಿನಿ, ಶ್ರೇಯಸ್ ಅಯ್ಯರ್, ಪ್ರಭಸಿಮ್ರಾನ್ ಅಬ್ಬರದ ಆಟಕ್ಕೆ ಪಂಜಾಬ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಭರ್ಜರಿ 264 ರನ್ ಗಳಿಸಿತು. ಸವಾಲಿನ ಮೊತ್ತ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 18.5 ಓವರ್‌ನಲ್ಲಿಯೇ 265 ರನ್‌ಗಳಿಸಿ ಭರ್ಜರಿ ಗೆಲುವು ಸಾಧಿಸಿದೆ.
ಮೊದಲ 10 ಓವರ್‌ಗಳಲ್ಲಿ 150 ಗಡಿಯಲ್ಲಿದ್ದ ಪಂಜಾಬ್ 6,7,8ನೇ ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಸ್ವಲ್ಪವೂ ಉತ್ಸಾಹ ಕಳೆದುಕೊಳ್ಳದ ಪಂಜಾಬ್ಸ್ ಕಿಂಗ್ಸ್ 7 ಎಸೆತ ಇರುವಾಗಲೇ 265 ರನ್ ಬಾರಿಸಿದರು. ಚೇಸಿಂಗ್ ಶುರು ಮಾಡಿದ ಪಂಜಾಬ್ ಭರ್ಜರಿ ಆರಂಭವನ್ನೇ ನೀಡಿತು. ಪ್ರಭಸಿಮ್ರಾನ್ ಸಿಂಗ್ ಹಾಗೂ ಪ್ರಿಯಾಂಶ್ ಆರ್ಯ ಸಿಕ್ಸ್, ಬೌಂಡರಿ ಸುರಿಮಳೆ ಸುರಿಸಿ, ಡೆಲ್ಲಿ ಬೌಲರ್‌ಗಳನ್ನು ಚೆಂಡಾಡಿದರು. ಪ್ರಭಸಿಮ್ರಾನ್ ಸಿಂಗ್ 26 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸ್ ಬಾರಿಸಿ 76 ರನ್ ಬಾರಿಸಿದರು. ಪ್ರಿಯಾಂಶ್ ಆರ್ಯ 17 ಎಸೆತಗಳಲ್ಲಿ 43,
ಶ್ರೇಯಸ್ ಅಯ್ಯರ್ 36 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸ್ 71 ರನ್, ಕೂಪರ್ ಕೊನೋಲಿ 10 ಎಸೆತಗಳಲ್ಲಿ 27 ರನ್, ನೆಹಲ್ ವಾದ್ರಾ 15 ಎಸೆತಕ್ಕೆ 25 ರನ್ ಗಳಿಸಿದರು. ಡೆಲ್ಲಿ ಪರ ಬೌಲಿಂಗ್ ಮಾಡಿದ್ದ ಕುಲ್‌ದೀಪ್ ಯಾದವ್ 2, ಅಕ್ಷರ್ ಪಟೇಲ್ ಹಾಗೂ ವಿಪ್ರಜ್ ನಿಗಮ್ ತಲಾ ಒಂದು ವಿಕೆಟ್ ಕಿತ್ತರು.
ವಿಫಲವಾದ ಕೆಎಲ್ ರಾಹುಲ್ ರೆಕಾರ್ಡ್ ಆಟ:
ಭರ್ಜರಿ ಆರಂಭ ನೀಡಿದ್ದ ಕೆಎಲ್ ರಾಹುಲ್ 67 ಎಸೆತಕ್ಕೆ 16 ಬೌಂಡರಿ, 9 ಸಿಕ್ಸ್ ಬಾರಿಸಿ 152 ರನ್‌ಗಳಿಸಿದರು. 200 ರನ್‌ಗಳಿಗೂ ಹೆಚ್ಚು ರನ್ ಜೊತೆಯಾಟವಾಡಿ ಬೃಹತ್ ಗೆಲುವಿನ ಗುರಿ ನೀಡುವಲ್ಲಿ ಸಹಕಾರಿಯಾದರು. ನಿತೀಶ್ ರಾಣಾ 44 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸ್ 91 ರನ್, ನಿಸ್ಸಂಕಾ 7 ಎಸೆತಗಳಲ್ಲಿ 11 ರನ್ ಬಾರಿಸಿದರು. ಪಂಜಾಬ್ ಪರ ಬೌಲಿಂಗ್ ಮಾಡಿದ್ದ ಅರ್ಶದೀಪ್ ಸಿಂಗ್ ಹಾಗೂ ಕ್ಸೇವಿಯರ್ ಬಾರ್ಟ್ಲೆಟ್ ತಲಾ ಒಂದೊಂದು ವಿಕೆಟ್ ಪಡೆದರು.
