ಉದಯವಾಹಿನಿ,  ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದ ಬಳಿಕ ಯುವ ಆಟಗಾರ ಪ್ರಿಯಾಂಶ್ ಆರ್ಯ ಅವರಿಗೆ ಪಂಜಾಬ್ ಕಿಂಗ್ಸ್ ತಂಡದ ತಂಡದ ಮಾಲಕಿ ನಟಿ ಪ್ರೀತಿ ಜಿಂಟಾ ಅವರು ತಮಾಷೆಯಾಗಿ ಪಂಚ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 264 ರನ್‌ಗಳ ಟಾರ್ಗೆಟ್‌ ಚೇಸ್‌ ಮಾಡಿದ ಬಳಿಕ ಮೈದಾನಕ್ಕೆ ಬಂದ ಪ್ರೀತಿ ಜಿಂಟಾ, ಹರ್ಷದ ಸಂಭ್ರಮದಲ್ಲಿ ಪ್ರಿಯಾಂಶ್ ಆರ್ಯ ಅವರ ಹೊಟ್ಟೆಗೆ ತಮಾಷೆಯಾಗಿ ಗುದ್ದಿದರು. ಇದಕ್ಕೆ ಪ್ರಿಯಾಂಶ್‌ ಮೇಡಂ ನನಗೆ ನೋವಾಯ್ತು ಎಂದು ನಗುತ್ತಾ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಕಾಮೆಂಟರಿ ಮಾಡುತ್ತಿದ್ದ ಭಾರತದ ಮಾಜಿ ಆಟಗಾರ ರವಿಶಾಸ್ತ್ರಿ ಅವರು, “ಓಹ್, ಅದು ಉತ್ತಮವಾದ ಪಂಚ್ ಆಗಿತ್ತು” ಎಂದು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಬೀಸಿದ ಡೆಲ್ಲಿ 2 ವಿಕೆಟ್‌ ನಷ್ಟಕ್ಕೆ 264 ರನ್‌ ಹೊಡೆಯಿತು. ಕನ್ನಡಿಗ ಕೆಎಲ್‌ ರಾಹುಲ್‌ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದು ಔಟಾಗದೇ 152 ರನ್‌(67 ಎಸೆತ, 16 ಬೌಂಡರಿ, 9 ಸಿಕ್ಸ್‌) ಹೊಡೆದಿದ್ದರು.ಕಠಿಣ ಸವಾಲನ್ನು ಬೆನ್ನಟ್ಟಿದ ಪಂಜಾಬ್‌ ಇನ್ನೂ 7 ಎಸೆತ ಬಾಕಿ ಇರುವಂತೆಯೇ 4 ವಿಕೆಟ್‌ ನಷ್ಟಕ್ಕೆ 265 ರನ್‌ ಹೊಡೆದು ಗೆಲುವು ಸಾಧಿಸಿತು.

Leave a Reply

Your email address will not be published. Required fields are marked *

error: Content is protected !!