ಉದಯವಾಹಿನಿ ಹೊಸಕೋಟೆ : ವಿದ್ಯಾರ್ಥಿಗಳು ಅಟೋಟ ಸ್ಪರ್ಧೆಗಳಲ್ಲಿ ಆಟಗಾರರು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಕ್ರೀಡಾಸ್ಫೂರ್ತಿ ಮೆರೆಯಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು. ತಾಲೂಕಿನ ಶಿವನಾಪುರ ಸರಕಾರಿ ಪ್ರೌಢಶಾಲಾಆವರಣದಲ್ಲಿ ನಡೆದ ಹೋಬಳಿ ಮಟ್ಟದಕ್ರೀಡಾಕೂಟಕ್ಕೆ ಚಾಲನೇ ನೀಡಿಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕ್ರೀಡೆಎನ್ನುವುದು ಮನಸ್ಸಿನ ಮಟ್ಟವನ್ನು ಅಭಿವೃದ್ಧಿಪಡಿಸಿ, ಶಕ್ತಿಯನ್ನು ಹೆಚ್ಚಿಸುವ ವ್ಯಾಯಾಮವಾಗಿದೆ.ಕ್ರೀಡೆಗಳಲ್ಲಿ ಭಾಗವಹಿಸುವುದರಿಂದದೇಹದಎಲ್ಲ ಭಾಗಗಳು ಸಂಪೂರ್ಣವಾಗಿಕಾರ್ಯನಿರ್ವಹಿಸುತ್ತದೆ.ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಆಟೋಟಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಂದಿನ ವಿದ್ಯಾರ್ಥಿಗಳು ಕ್ರೀಡೆಗಿಂತ ಮೊಬೈಲ್ ವೀಕ್ಷಣೆಯಲ್ಲೆ ಹೆಚ್ಚು ಸಮಯ ಕಳೆಯುವುದು ಹವ್ಯಾಸವಾಗಿಸಿಕೊಂಡಿದ್ದಾರೆ, ಇದು ಮಾನಸಿಕ ಖಿನ್ನತೆಗೆಕಾರಣವಾಗುತ್ತದೆ.ಆಟೋಟ ಸ್ಪರ್ಧೆಗಳಲ್ಲಿ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆಎಂದರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕರಾದಕಲ್ಕೆರೆಕೆ.ಎಸ್. ಮಹದೇವಯ್ಯ ಹಾಗೂ ಎಂ.ಮAದೀಪ್‌ಗೌಡ ಶಿವನಾಪುರ ಗ್ರಾಪಂ.ವ್ಯಾಪ್ತಿಗೆ ಒಳಪಡುವ ಸರಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಶಾಲಾ ಬ್ಯಾಗ್‌ಕೊಡುಗೆಯಾಗಿ ನೀಡಿದರು.ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಮುನಿಶಾಮಣ್ಣ, ರಾಜ್ಯಒಕ್ಕಲಿಗರ ಸಂಘದ ನಿರ್ದೇಶಕರಾಜಶೇಖರಗೌಡ, ಎಪಿಎಂಸಿ ಮಾಜಿಅಧ್ಯಕ್ಷಧರ್ಮೇಶ್, ಮಾಜಿಜಿಪಂ ಸದಸ್ಯಕಲ್ಲಪ್ಪ, ಟಿಎಪಿಸಿಎಂಎಸ್ ಮಾಜಿಅಧ್ಯಕ್ಷಎಲ್.ಎನ್.ಟಿ. ಮಂಜುನಾಥ್, ಬಿಇಒ ಮುನಿಲಕ್ಷö್ಮಯ್ಯ, ಸಮಾಜ ಸೇವಕ ಪಿ. ಕಲ್ಲಪ್ಪ, ಎಸ್‌ಎಫ್ ಸಿಎಸ್ ನಿರ್ದೇಶಕದೊಡ್ಡಮನೆರಮೇಶ್, sಸದಸ್ಯರಾದತಮ್ಮಣ್ಣಗೌಡ, ಚಂದ್ರಶೇಖರ್, ಎಸ್.ಪಿ.ರಾಜಣ್ಣ, ರವಿಚಂದ್ರ, ಎನ್.ಎನ್. ಮಂಜುನಾಥ್, ಶಿಕ್ಷಕ ವೃಂದ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!