ಉದಯವಾಹಿನಿ, ಬೀದರ್ : ಸೇವೆಯಲ್ಲಿ ಕರ್ತವ್ಯನಿಷ್ಠೆಯೊಂದಿಗೆ ಕಾರ್ಯನಿರ್ವಹಿಸಿ ಸರಳ ವ್ಯಕ್ತಿತ್ವದಲ್ಲಿ ಸಾರ್ಥಕತೆ ಕಂಡುಕೊಂಡು ನಿವೃತ್ತಿ ಹೊಂದುತ್ತಿರುವ ನೌಕರರ ಜೀವನ ಸುಖಮಯವಾಗಿರಲಿ ಎಂದು ಎಇಇ ಅನೀಲಕುಮಾರ ಹೇಳಿದರು.ನಗರದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಭಾಗ ಮತ್ತು ಉಪವಿಭಾಗದ ಕಾರ್ಯಾಲಯದಲ್ಲಿ ನಿವೃತ್ತರಾದ ಎಸ್ ಡಿಎ ಶಂಕ್ರಪ್ಪ ಗೋಣಿ, ಜೆಇ ತುಕಾರಾಮ, ಕಲಿತ ಸಹಾಯಕ ಘುಡುಸಾಬ, ಆಪರೇಟರ್ ಕಂಟೆಪ್ಪ, ವಾಟರಮ್ಮಾನ ಎಸಪ್ಪಾ ಅವರಿಗೆ ನಡೆದ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.
ಇಲಾಖೆಯಲ್ಲಿ ಸೇವೆ ಸಲ್ಲಿಸಿದವರನ್ನು ಇಲಾಖೆಯು ಎಂದೂ ಮರೆಯುವುದಿಲ್ಲ. ತಮಗೆ ವಹಿಸಿದ ಕೆಲಸವನ್ನು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಪ್ರೀತಿ-ವಿಶ್ವಾಸ ಗಳಿಸಿದ್ದಾರೆ. ಪಂಚ ಪಾಂಡವರ ರೀತಿಯಲ್ಲಿ ಉತ್ತಮ ವಾಗಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಶಂಕರಪ್ಪ ಗೋಣಿ ಅವರು ಸೇವಾವಧಿಯಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದು, ಆಡಳಿತ ನಿರ್ವಹಣೆಯಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆ ಮೆರೆದಿದ್ದಾರೆ ಎಂದು ಹೇಳಿದರು.ಎಇಇ ಸಂಗಮೇಶ ಮಾತನಾಡಿ,ಸರ್ವರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಸಾರ್ಥಕ ಸೇವೆ ಸಲ್ಲಿಸಿದ ಘುಡುಸಾಬ ಅವರ ಸೇವೆ ಇಲಾಖೆಗೆ ತೃಪ್ತಿ ತಂದಿದೆ. ಅವರ ಮುಂದಿನ ನಿವೃತ್ತಿ ಜೀವನವನ್ನು ಸಮಾಜಮುಖೀ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮವಾಗಿ ಸಾಗಲಿ ಎಂದು ಶುಭ ಹಾರೈಸಿದರು.
ಹಲವು ಗಣ್ಯರು ಆಗಮಿಸಿ ನಿವೃತ್ತರಿಗೆ ಸನ್ಮಾನಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಇಇ ಇಸಾಖ್ ಅಹ್ಮದ್ ಖುರೇಷಿ, ನಿವೃತ್ತ ಪಿಎಸ್ಐ ಯುಸೋಫ ಸೌದಾಗರ, ಶ್ರೀಮತಿ ಕುಂದನಬಾಯಿ, ದೀಪಕ್ ವಾಲಿ, ರಾಜು ಚಿಂತಾಮಣಿ, ಸಂಜು ವಿ ಡಾಕುಳಗಿ, ಎಂ. ಡಿ. ನಿಸಾರ್ ಅಹಮ್ಮದ್, ಲಂಕೇಶ್ ಸೋಲಪುರೆ, ಎಂ.ಡಿ. ಮೇರಾಜೋದ್ದಿನ್, ವಿಜಯಕುಮಾರ್, ಜೇಬಾ ಮರಿಯಮ್, ಲಕ್ಷ್ಮಿ, ಸಂಧ್ಯಾರಾಣಿ, ಮಧುಸೂದನ್, ವಿರೇಶ ಜೀರ್ಗಾ, ವೈಭವ್ ಗೋಣಿ, ಎಂ.ಎಂ ಮುಖಿಮ್, ಜಗನ್ನಾಥ, ರೇವಣಸಿದ್ದಪ್ಪಾ, ಕಲ್ಯಾಣರಾವ, ಜಗನ್ನಾಥ ಪಾಟೀಲ, ಅಜೀಜೋದ್ದೀನ್, ಶಿವಲಿಂಗಯ್ಯ ಸ್ವಾಮಿ, ಸಿರಾಜೋದ್ದಿನ್, ಪ್ರದೀಪ ಕಾಂಬೆಳೆ, ಶರಣಪ್ಪ ಅಡಸಾರೆ, ಅರ್ಜುನ ಮೆತ್ರೆ ಸೇರಿದಂತೆ ನಿವೃತ್ತರ ಕುಟುಂಬಸ್ಥರು ಇದ್ದರು.

Leave a Reply

Your email address will not be published. Required fields are marked *

error: Content is protected !!