ಉದಯವಾಹಿನಿ, ಜೈಪುರ: ಶುಭಮನ್‌ ಗಿಲ್‌, ಸಾಯಿ ಸುದರ್ಶನ್‌ ಆಕರ್ಷಕ ಬ್ಯಾಟಿಂಗ್‌, ರಶೀದ್‌ ಖಾನ್‌ ಸ್ಪಿನ್‌ ಜಾದುಗೆ ರಾಜಸ್ಥಾನ್‌ ರಾಯಲ್ಸ್‌ ಮಂಕಾಯಿತು. ತವರಲ್ಲೇ ರಾಜಸ್ಥಾನ್‌ ಬಗ್ಗುಬಡಿದ ಗುಜರಾತ್‌ 77 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 229 ರನ್‌ ಗಳಿಸಿತು. ಗುರಿ ಬೆನ್ನತ್ತಿದ ರಾಜಸ್ಥಾನ್‌ ಕೇವಲ 152 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು.
ಗೆಲುವಿನ ಹಾದಿಗೆ ಮರಳಿರುವ ಗುಜರಾತ್‌ ಬ್ಯಾಟಿಂಗ್‌ನಲ್ಲಿ ಕಮಾಲ್‌ ಮಾಡುತ್ತಿದೆ. ಆರಂಭಿಕರಾದ ಸಾಯಿ ಸುದರ್ಶನ್‌ ಮತ್ತು ಶುಭಮನ್‌ ಗಿಲ್‌ ಇಂದಿನ ಪಂದ್ಯದಲ್ಲಿ ಉತ್ತಮ ಆರಂಭವನ್ನೇ ನೀಡಿದರು. ಸುದರ್ಶನ್‌ 36 ಬಾಲ್‌ಗೆ 55 ರನ್‌ ಗಳಿಸಿದರು. ಗಿಲ್‌ 44 ಬಾಲ್‌ಗೆ 3 ಸಿಕ್ಸರ್‌ ಮತ್ತು 9 ಫೋರ್‌ಗಳ ಅಮೋಘ ಆಟದಿಂದ 84 ರನ್‌ ಪೇರಿಸಿದರು. ವಾಷಿಂಗ್ಟನ್‌ ಸುಂದರ್‌ 37 ರನ್‌ ಗಳಿಸಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು.

ನಂತರ ಬ್ಯಾಟಿಂಗ್‌ ಮಾಡಿದ ಸ್ಟ್ಯಾಂಡ್-ಇನ್ ನಾಯಕ ಯಶಸ್ವಿ ಜೈಸ್ವಾಲ್ ನೇತೃತ್ವದ ಆರ್‌ಆರ್ 16.3 ಓವರ್‌ಗಳಲ್ಲಿ ಕೇವಲ 152 ರನ್‌ಗಳಿಗೆ ಆಲೌಟ್ ಆಯಿತು. ರಶೀದ್ ಖಾನ್ ನಾಲ್ಕು ವಿಕೆಟ್‌ಗಳೊಂದಿಗೆ ಗುಜರಾತ್‌ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು. ಜೇಸನ್ ಹೋಲ್ಡರ್ ಮೂರು ವಿಕೆಟ್‌ ಹಾಗೂ ಕಗಿಸೊ ರಬಾಡ ಎರಡು ವಿಕೆಟ್‌, ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಪಡೆದರು.

15 ವರ್ಷದ ವೈಭವ್ ಸೂರ್ಯವಂಶಿ ಟಿ20 ಇತಿಹಾಸದಲ್ಲಿ 100 ಸಿಕ್ಸರ್‌ಗಳನ್ನು ಬಾರಿಸಿದ ಅತ್ಯಂತ ವೇಗದ ಆಟಗಾರರಾದರು. ಆದರೆ, 16 ಎಸೆತಗಳಲ್ಲಿ 36 ರನ್‌ಗಳಿಸಿ ನಿರ್ಗಮನದ ನಂತರ ಬ್ಯಾಟಿಂಗ್ ಕ್ರಮಾಂಕದ ಕುಸಿತ ಕಂಡುಬಂದಿತು. ವೈಭವ್‌ ಬಿಟ್ಟರೆ ಆರ್‌ಆರ್‌ನ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಇದು ಗುಜರಾತ್ ಟೈಟಾನ್ಸ್‌ಗೆ ಸತತ ನಾಲ್ಕನೇ ಗೆಲುವು ತಂದುಕೊಟ್ಟಿತು. ಐಪಿಎಲ್ 2026 ಪಾಯಿಂಟ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಜಿಗಿಯಿತು.

Leave a Reply

Your email address will not be published. Required fields are marked *

error: Content is protected !!