ಉದಯವಾಹಿನಿ, ಆಸ್ಟ್ರೇಲಿಯಾ ಅರಂಭಿಕ ಜಾಶ್ ಇಂಗ್ಲಿಸ್ (Josh Inglis) 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಮೊದಲಾರ್ಧದಲ್ಲಿ ಲಖನೌ ಸೂಪರ್ ಜಯಂಟ್ಸ್‌ (LSG) ತಂಡಕ್ಕೆ ಲಭ್ಯವಿರಲಿಲ್ಲ. ಮುಂಬೈ ಇಂಡಿಯನ್ಸ್ ವಿರುದ್ಧ ಉತ್ತಮ ಆರಂಭ ಪಡೆದಿದ್ದರೂ, ಅದನ್ನು ದೊಡ್ಡ ಇನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದರು. ಆ ಪಂದ್ಯದ ಸಮಯದಲ್ಲಿ ಅವರು ಗಾಯದ ಸಮಸ್ಯೆಗೆ ಒಳಗಾಗಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಇನಿಂಗ್ಸ್‌ ಆರಂಭಿಸಿದ ಇಂಗ್ಲಿಸ್, ಮೊದಲ ಓವರ್‌ನಿಂದಲೇ ಬೌಲರ್‌ಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು.

ಲಖನೌ ಸೂಪರ್ ಜಯಂಟ್ಸ್ ಪರ ಆಡುತ್ತಿರುವ ಜಾಶ್‌ಶ್ ಇಂಗ್ಲಿಸ್ 5ನೇ ಓವರ್‌ನಲ್ಲೇ ಅರ್ಧಶತಕ ಬಾರಿಸಿದರು. ಅವರು ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಐಪಿಎಲ್‌ ಟೂರ್ನಿಯಲ್ಲಿ ಬ್ಯಾಟ್ಸ್‌ಮನ್ ಗಳಿಸಿದ ಮೂರನೇ ಅತಿ ವೇಗದ ಅರ್ಧಶತಕವಾಗಿದೆ. ನಿಕೋಲಸ್ ಪೂರನ್ ಕ್ರಮವಾಗಿ 15 ಮತ್ತು 16 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ತಂಡದ ದಾಖಲೆಯನ್ನು ಹೊಂದಿದ್ದಾರೆ. ಇದಲ್ಲದೆ, ಇದು ಚೆಪಾಕ್ ಕ್ರೀಡಾಂಗಣದಲ್ಲಿ ಐಪಿಎಲ್‌ನಲ್ಲಿ ಯಾವುದೇ ಬ್ಯಾಟ್ಸ್‌ಮನ್ ಮಾಡಿದ ವೇಗದ ಅರ್ಧಶತಕವಾಗಿದೆ.

ಲಖನೌ ಸೂಪರ್ ಜಯಂಟ್ಸ್ ಪರ ಅತಿ ವೇಗದ ಅರ್ಧಶತಕಗಳು
15 ಎಸೆತಗಳು – ನಿಕೋಲಸ್ ಪೂರನ್ vs ಆರ್‌ಸಿಬಿ, ಬೆಂಗಳೂರು, 2023

16 ಎಸೆತಗಳು – ನಿಕೋಲಸ್ ಪೂರನ್ vs ಎಂಐ, ಮುಂಬೈ, 2026

17 ಎಸೆತಗಳು – ಜಾಶ್ ಇಂಗ್ಲಿಸ್ vs ಸಿಎಸ್‌ಕೆ, ಚೆನ್ನೈ, 2026

18 ಎಸೆತಗಳು – ನಿಕೋಲಸ್ ಪೂರನ್ vs ಎಸ್‌ಆರ್‌ಹೆಚ್, ಹೈದರಾಬಾದ್, 2025

19 ಎಸೆತಗಳು – ನಿಕೋಲಸ್ ಪೂರನ್ vs ಎಂಐ, ಮುಂಬೈ, 2024

Leave a Reply

Your email address will not be published. Required fields are marked *

error: Content is protected !!