ಉದಯವಾಹಿನಿ, ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ 73 ರನ್‌ ಗಳಿಸಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ ಮ್ಯಾಚ್‌ನಲ್ಲಿ ಆಗಿದ್ದ ಗಾಯದ ಗುರುತನ್ನು ಪ್ರದರ್ಶಿಸಿದ್ದಾರೆ. ಹೊಟ್ಟೆ ಭಾಗದಲ್ಲಿ ಇರುವ ದೊಡ್ಡ ಗಾಯದ ಗುರುತಿರುವ ಫೋಟೊ ತೆಗೆದು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೃಣಾಲ್‌ಗೆ ಆಗಿರುವ ಗಾಯ ಕಂಡು ಆರ್‌ಸಿಬಿ ಫ್ಯಾನ್ಸ್‌ ನೋವು ವ್ಯಕ್ತಪಡಿಸಿದ್ದಾರೆ. ಬೇಗ ಗುಣಮುಖರಾಗಿ ಎಂದು ಆಶಿಸಿದ್ದಾರೆ.

ಪಂದ್ಯದಲ್ಲಿ ಮುಂಬೈ ನೀಡಿದ್ದ 167 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟುವ ಸಮಯದಲ್ಲಿ ಕೃಣಾಲ್ 46 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್‌ಗಳೊಂದಿಗೆ 73 ರನ್ ಗಳಿಸಿದ್ದರು. ಸೆಳೆತದಿಂದಾಗಿ ಅಪಾರ ನೋವಿದ್ದರೂ ಧೈರ್ಯದಿಂದ ಹೋರಾಡಿ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಮ್ಯಾಚ್‌ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಪಾಂಡ್ಯ ಗಾಯದ ಗುರುತಿನ ಫೋಟೊ ಹಂಚಿಕೊಂಡಿದ್ದಾರೆ. ‘ಕೆಲವು ಗಾಯಗಳು ಹೋರಾಟಕ್ಕೆ ಪುರಾವೆ’ ಎಂದು ಕ್ಯಾಪ್ಷನ್‌ ಬರೆದುಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!