
ಉದಯವಾಹಿನಿ ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಸುಂಕದಕಟ್ಟೆ ವಾರ್ಡಿನ ತರಕಾರಿ ಮಾರುಕಟ್ಟೆ ಹತ್ತಿರ ಇರುವ ಉದ್ಯಾನ (ಪಾರ್ಕ್) ಅಭಿವೃದ್ಧಿ ಕಾಮಗಾರಿಗೆ ಕ್ಷೇತ್ರದ ಶಾಸಕ ಎಸ್ ಮುನಿರಾಜು ಅವರು ಚಾಲನೆ ನೀಡಿದರು. ನಂತರ ಅವರು ಬೀದಿ ಬದಿ ವ್ಯಾಪಾರಿಗಳಿಗೆ ಭೇಟಿ ಮಾಡಿ ಪಾದಚಾರಿ ರಸ್ತೆ ಮೇಲೆ ವ್ಯಾಪಾರ ಮಾಡುತ್ತಿದ ವ್ಯಾಪಾರಿಗಳಿಗೆ ತರಾಟೆ ತೆಗೆದುಕೊಂಡರು ರಸ್ತೆ ಮಧ್ಯೆವರೆಗೆ ಒತ್ತುರಿ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸ್ಥಳಕ್ಕೆ ಕರಸಿ ಅಧಿಕಾರಿ ಗಳಿಗೆ ತೆರವು ಕಾರ್ಯಾಚರಣೆ ಶೀಘ್ರದಲ್ಲಿ ಕೈಗೊಳ್ಳಬೇಕು ಎಂದು ಶಾಸಕ ಎಸ್ ಮುನಿರಾಜು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಈ ಸಂದರ್ಭದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರದಾನ ಕಾರ್ಯದರ್ಶಿ ಹಾಗೂ ಸುಂಕದಕಟ್ಟೆ ಪ್ರಭಾವಿ ಯುವ ಮುಖಂಡ ಹೆಚ್ ಆರ್ ಪ್ರಕಾಶ್, ಹೆಗ್ಗನಹಳ್ಳಿ ವಾರ್ಡಿನ ಬಿಜೆಪಿ ಅಧ್ಯಕ್ಷ ಮಂಜುನಾಥ್ ಸಪ್ತಗಿರಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಆರ್ ಎಸ್ ಎಸ್ ಮುಖಂಡ ರಂಗಸ್ವಾಮಿ, ಡಾ.ನಾಗೇಶ್ , ಟೆಂಟ್ ಮಂಜುನಾಥ್, ರಾಮು, ಬಿಜೆಪಿ ಹಿರಿಯ ಮುಖಂಡರಾದ ನಿಂಗಪ್ಪ, ತಿಮ್ಮೇಗೌಡ, ಬೇಟೆಗೌಡ, ಮಂಜುನಾಥ್,ವಿಜಯ ಕುಮಾರ್,ಸುಚ್ಚಿತ್, ಸ್ವಾಮಿ,ಸೋಮು ಬಿಬಿಎಂಪಿ ಅಧಿಕಾರಿಗಳು ಸಿಬ್ಬಂದಿ ವೃಂದ, ಗುತ್ತಿಗೆದಾರರು ಸುಂಕದಕಟ್ಟೆ ಹೆಗ್ಗನಹಳ್ಳಿ ವಾರ್ಡಿನ ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಇದ್ದರು.
