
ಉದಯವಾಹಿನಿ, ಔರಾದ್ : ಕನ್ನಡ ಭೂಮಿಯಲ್ಲಿ ಹುಟ್ಟಿರುವ ಪ್ರತಿಯೊಬ್ಬರೂ ತಾಯಿ ಭುವನೇಶ್ವರಿ ಸೇವೆ ಮಾಡಲು ಕಂಕಣ ಭದ್ಧರಾಗಬೇಕಾಗಿದೆ. ಗಡಿಭಾಗದಲ್ಲಿ ಕನ್ನಡ ಉಳಿಯಬೇಕಾದರೆ, ಕನ್ನಡದ ಮಹತ್ವವನ್ನು ಅರಿಯುವುದು ಅನಿವಾರ್ಯ, ಪ್ರತಿಯೊಬ್ಬರೂ ಕನ್ನಡ ಕಟ್ಟಲು ಕೈಜೋಡಿಸಬೇಕಾಗಿದೆ ಎಂದುು ಸಾಹಿತಿ ಬಲಭೀಮ ಕುಲಕರ್ಣಿ ಹೇಳಿದರು.
ತಾಲ್ಲೂಕಿನ ಗಡಿ ಗ್ರಾಮವಾದ ವನಮಾರಪಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿರುವ ಸಾಹಿತ್ಯ ಸೊಬಗು ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮದ ಯುವ ಮುಖಂಡರಾದ ನಾಗನಾಥ ಮೋರ್ಗೆ ಶಾಲೆಯಲ್ಲಿ ನಿರ್ಮಿಸಲಾದ ಕೈತೋಟದಲ್ಲಿರುವ ಸಸಿಗಳಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು
ಅಧ್ಯಕ್ಷತೆ ವಹಿಸಿದ ಕಸಪಾ ತಾಲೂಕು ಅಧ್ಯಕ್ಷರಾದ ಡಾ. ಶಾಲಿವಾನ ಉದಗಿರೆ ಮಾತನಾಡಿ, ಗಡಿ ಗ್ರಾಮಗಳಲ್ಲಿರುವ ಕನ್ನಡ ಶಾಲೆ ಉಳಿಸಿದರೆ ಮಾತ್ರ ಕನ್ನಡ ಉಳಿಸಿ ಬೆಳೆಸಲು ಸಾಧ್ಯ ಎಂದು ಕಾರ್ಯಕ್ರಮದ
ಇದೇ ಸಂದರ್ಭದಲ್ಲಿ ಹೊಸದಾಗಿ ಈ ಶಾಲೆಗೆ ವರ್ಗಾವಣೆಯಾಗಿ ಬಂದಿರುವ ಶಿಕ್ಷಕರಿಗೆ ಸ್ವಾಗತವನ್ನು ಕೋರಲಾಯಿತು.
ಮಹಮ್ಮದ್ ನೈಮೋದಿನ, ಗೋವಿಂದ ಪಾಟೀಲ, ಪ್ರವೀಣಕುಮಾರ, ವೆಂಕಟ ಕೋಳಿ, ರಮೇಶ ಡೋನೆ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಂಜು, ಗ್ರಾಮದ ಹಿರಿಯರಾದ ಬಾಬುರಾವ ಬಿರಾದಾರ, ಮುಖ್ಯೋಪಾಧ್ಯಾಯ ಮಹಾದೇವ ಬಾಾಲಕರ ದಿಗಂಬರ ಪಾಂಚಾಳ, ವೆಂಕಟರಾವ ಭಾಲ್ಕೆ, ಮಹೇಶ ಪೂಜಾರಿ,ಶಾಲಾ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
