ಉದಯವಾಹಿನಿ ಮುದ್ದೇಬಿಹಾಳ ; ಅಂಗನವಾಡಿ ಕಾರ್ಯಕರ್ತೆಯರನ್ನು ಬಿ.ಎಲ್ ಓ ಕರ್ತವ್ಯದಿಂದ ಬಿಡುಗಡೆಗೂಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸೇವಾ ಸಂಘದ ನೂರಾರು ಕಾರ್ಯಕರ್ತೆಯರು ರಾಜ್ಯಾಧ್ಯಕ್ಷೆ ನೀಲಮ್ಮ ಬೋರಾವತ್ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಹಶಿಲ್ದಾರ ಮೂಲಕ ಮನವಿ ಪತ್ರವನ್ನು ಶುಕ್ರವಾರ ನೀಡಿದರುಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷೆ ನೀಲಮ್ಮ ಬೋರಾವತ್ ಅಂಗನವಾಡಿ ಕರ್ತವ್ಯದೂಂದಿಗೆ ಸರಕಾರ ಕಾರ್ಯಕರ್ತೆಯರಿಗೆ ಮತಗಟ್ಟೆಯ ಅಧಿಕಾರಿ ಎಂದು ಬಿಎಲ್ ಓ ಜವಾಬ್ದಾರಿ ನೀಡಿದ್ದು ಇದರಿಂದ ಅಂಗನವಾಡಿ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಲು ಆಗುತ್ತಿಲ್ಲ 0 ದಿಂದ 6 ವರ್ಷದ ಮಕ್ಕಳ ಬೆಳವಣಿಗೆ, ಮಕ್ಕಳಿಕೆ ಲಸಿಕೆ, ಗರ್ಭಿಣಿ ಬಾಣಂತಿಯರಿಗೆ ಮಾತೃಪೂರ್ಣ ಒದಗಿಸಲು ಕಷ್ಟವಾಗುತ್ತಿದೆ ಆದ ಕಾರಣ ಅಂಗನವಾಡಿ ಕಾರ್ಯಕರ್ತೆಯರನ್ನು ಬಿ ಎಲ್ ಓ ಕರ್ತವ್ಯದಿಂದ ವಿಮುಕ್ತಗೂಳಿಸಬೇಕೆಂದು ಸಿಎಂ ಸಿದ್ದರಾಮಯ್ಯನವರಿಗೆ ಸಂಬಂಧಿಸಿದ ಇಲಾಖೆಯ ಸಚಿವರಿಗೆ ಒತ್ತಾಯಿಸುತ್ತೇವೆ ಎಂದರು.ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ; ಮುದ್ದೇಬಿಹಾಳ ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳಾದ ಶುದ್ದ ಕುಡಿಯುವ ನೀರು, ವಿದ್ಯುತ್, ಶೌಚಾಲಯ, ಮಕ್ಕಳು ಕುಳಿತುಕೊಳ್ಳಲು ಬೆಂಚು ,ನೆಲಹಾಸಿಗೆ ಒದಗಿಸಬೇಕು ಮತ್ತು ಅಂಗನವಾಡಿ ಕಟ್ಟಡಕ್ಕೆ ನಿವೇಶನ ಒದಗಿಸುವಂತೆ ಪಟ್ಟಣ ಪಂಚಾಯತಿ ಅಧಿಕಾರಿಗಳು, ಪುರಸಭೆ ಮುಖ್ಯಾಧಿಕಾರಿಗಳಿಗೆ ಸಹ ಪ್ರತ್ಯೇಕ ಮನವಿ ಪತ್ರವನ್ನು ಅಂಗನವಾಡಿ ಕಾರ್ಯಕರ್ತೆಯರು ನೀಡಿದರು. ಈ ವೇಳೆ ಶೋಭಾ ಘಾಟಗೆ, ವಿ ಐ ಪಾಟೀಲ್, ಎ ಹೆಚ್ ಮುಂದಿನಮನಿ,ಸುಧಾ ಮುಕಿಹಾಳ, ಶಿವುಬಾಯಿ ಅಂಗಡಗೇರಿ,ಗೌರಮ್ಮ ಕರ್ಜಗಿ,ಗುರುಬಾಯಿ ಲಮಾಣಿ,ಮೀನಾಕ್ಷಿ ಲಮಾಣಿ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!