
ಉದಯವಾಹಿನಿ,ಚಿಂಚೋಳಿ :ತಾಲ್ಲೂಕಿನ ಶಾಧಿಪೂರ ಗ್ರಾಪಂ.ಎರಡನೇ ಅವಧಿಗೆ ಅಧ್ಯಕ್ಷರ ಉಪಾಧ್ಯಕ್ಷರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಭಾರತಿ ರಾಜಕುಮಾರ ಪವ್ಹಾರ ಉಪಾಧ್ಯಕ್ಷರಾಗಿ ಅನೀತಾಬಾಯಿ ಭಜು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸುಧಾರಾಣಿ ತಿಳಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಕೆ ಆಗಿದ್ದವು ಅಧ್ಯಕ್ಷ ಸ್ಥಾನಕ್ಕೆ ಭಾರತಿ ರಾಜಕುಮಾರ 15ಮತಗಳು ಪಡೆದು ಗೆಲುವು ಸಾಧಿಸಿದರೆ ಪ್ರತಿಸರ್ಧಿ 7ಮತಗಳು ಮಾತ್ರ ಪಡೆದರು,ಉಪಾಧ್ಯಕ್ಷ ಸ್ಥಾನಕ್ಕೆ ಅನೀತಾಬಾಯಿ ಭಜು 12ಮತಗಳು ಪಡೆದು ಜಯಶಾಲಿಯಾದರೆ ಪ್ರತಿಸರ್ಧಿ 9ಮತಗಳು ಮಾತ್ರ ಪಡೆದರು ಎಂದು ತಿಳಿಸಿದರು.
ಬೆಂಬಲಿಗರು ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ್ದರು.ಈ ಸಂದರ್ಭದಲ್ಲಿಅಶೋಕ ಪವ್ಹಾರ,ಮಾಜಿ ಅಧ್ಯಕ್ಷ ರಾಮಲು,ಸಂತೋಷ ಪವ್ಹಾರ,ಸುಧಾಕರ,ಪಿಡಿಒ ಶ್ರೀಪತರಾವ,ಅನೇಕರಿದ್ದರು.ಗಡಿಕೇಶ್ವಾರ ಗ್ರಾ.ಪಂ:-ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರೇಣುಕಾ ಪ್ರಕಾಶ ರಂಗನೂರ,ಉಪಾಧ್ಯಕ್ಷರಾಗಿ ಸಬೇರಾಬೇಗಂ ಮದೀನಾಸಾಬ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ಪಿಡಿಓ ರಾಜೇಶ್ವರಿ,ಸಿದ್ದು ರಂಗನೂರ ಸೇರಿದಂತೆ ಅನೇಕರಿದ್ದರು.
ಸಾಲೇಬೀರನಳ್ಳಿ:- ತಾಲ್ಲೂಕಿನ ಸಾಲೇಬೀರನಳ್ಳಿ ಗ್ರಾಮ ಪಂಚಾಯತ್ ನಲ್ಲಿ ನಡೆದ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಾಜೇಶ್ವರಿ ಪ್ರಭು ಉಪಾಧ್ಯಕ್ಷರಾಗಿ ರಾಜಶೇಖರ ಗುಂಡಪ್ಪ ದಂಡಿನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧೀಕಾರಿ ಗುರುಪ್ರಸಾದ್ ಕವಿತಾಳ ತಿಳಿಸಿದ್ದಾರೆ.ನಂತರ ಬೆಂಬಲಿಗರು ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ್ದರು.ಈ ಸಂದರ್ಭದಲ್ಲಿ ಪ್ರಭುಲಿಂಗ ಲೇವಡಿ,ಹಣಮಂತ ರಾಜಗೀರಾ,ಶಿವಾಜಿ,ಝರಣಪ್ಪ,ಅಶೋಕ,ಗೋ ಪಾಲ,ಶಿವಶರಣಪ್ಪಾ,ವೀರಾರೆಡ್ಡಿ,ಮೀನಾ ಕ್ಷಿ,ರೇಣುಕಾ,ಸುರೇಖಾ,ಠಾಕೂರ್,ಪಿಡಿ ಓ ವಾಹೇದ್ ಅಲಿ,ಅನೇಕರಿದ್ದರು.
ಶಾಧಿಪೂರ ಗ್ರಾಪಂ.ಅಧ್ಯಕ್ಷರ ಹಿನ್ನಲೆ
ಚಿಂಚೋಳಿ: ತಾಲ್ಲೂಕಿನ ಶಾಧಿಪೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ರಾಜಕುಮಾರ ಚಾಪ್ಲಾನಾಯಕ ತಾಂಡಾ (MBA) ಪದವಿ ಪಡೆದಿದ್ದಾರೆ.
ರಾಜ್ ಪವ್ಹಾರ ಸರ್ಕಾರಿ ಸೇವೆಯ ರೈಲ್ವೆ ಇಲಾಖೆಯಲ್ಲಿ ನರ್ಸಿಂಗ್ ಸುಪರಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತಾರೆ,ಸಹೋದರ ಅಶೋಕ ಪವ್ಹಾರ ತೆಲಂಗಾಣ ರಾಜ್ಯದ ಹೈದರಾಬಾದನಲ್ಲಿ ಸಿಪಿಐ ಆಗಿ ಕಾರ್ಯನಿರ್ವಹಿಸುತ್ತಾರೆ,ಸಹೋದರಿ ಸೋನಾಲೀಕಾ ಎಲ್ಎಲ್ಎಮ್ ವ್ಯಾಸಂಗ ಮಾಡಿದ್ದು,ದೊಡ್ಡ ಸಹೋದರ ರವಿಕುಮಾರ ರೈತನಾಗಿದ್ದು,ಅಣ್ಣನ ಮಗ ರಾಹುಲ್ ಎಂಬಿಬಿಎಸ್ ಮಾಡಿದ್ದು,ಮತ್ತೊಬ್ಬ ರೋಹಿತ್ ಐಐಟಿ ನಲ್ಲಿ ಜಮ್ಮು ಕಾಶ್ಮೀರದಲ್ಲಿದ್ದಾನೆ,ಮಗಳು ಕೋಮಲಾ ಹೈದ್ರಾಬಾದನ ಅಪೋಲೋ ಆಸ್ವತ್ರೆಯಲ್ಲಿ ಕೆಲಸ ಮಾಡುತ್ತಿದ್ದು,ದೊಡ್ಡ ಅಕ್ಕ ಶಾಂತಬಾಯಿ ಮಾಜಿ ಜಿಪಂ ಸದಸ್ಯರಾಗಿದ್ದು,ಚಿಕ್ಕ ಸಹೋದರಿ ಸರಿತಾ ಸರ್ಕಾರಿ ಸೇವೆ,ತಾಯಿ ಅಂಬಿಬಾಯಿ ಮಾಜಿ ಗ್ರಾಪಂ.ಅಧ್ಯಕ್ಷರಾಗಿದ್ದು,ತಂದೆ ಹರಿಸಿಂಗ್ 1968 ಇಸವಿಯಲ್ಲಿ ವಿಧ್ಯಾರ್ಹತೆ ಪಡೆದು ಈ ಭಾಗಕ್ಕೆ ಹೆಸರುವಾಸಿಯಾಗಿದ್ದಾರೆ.
:- ಅಶೋಕ ಪವ್ಹಾರ ಚಾಪ್ಲಾನಾಯಕ ತಾಂಡಾ ಹೈದ್ರಾಬಾದ್ ಸಿಪಿಐ
