
ಉದಯವಾಹಿನಿ,ದೇವದುರ್ಗ: ಪರಿಣಾಮಕಾರಿ ಮಿಷನ್ ಇಂಧ್ರಧನುಷ್ ಅಭಿಯಾನ ಲಸಿಕಾ ಕಾರ್ಯಕ್ರಮಕ್ಕೆ ಆ.7ರಂದು ಸೋಮವಾರ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಶಾಸಕಿ ಕರೆಮ್ಮ ಗೋಪಾಲಕೃಷ್ಣ ಚಾಲನೆ ನೀಡಲಿದ್ದಾರೆ ಎಂದು ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ ತಿಳಿಸಿದರು. ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ಶನಿವಾರ ತಾಲೂಕ ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮ ಯಾಶ್ವಸಿ, ಗುರಿ ಮುಟ್ಟಲು ವೈದ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶ್ರಮಿಸಬೇಕು ಎಂದರು. ಮೂರು ಹಂತದಲ್ಲಿ ಲಸಿಕಾ ಅಭಿಯಾನ ನಡೆಯಲಿದೆ. ಯಾವುದೇ ಕೊರತೆ ಉಂಟಾಗದಂತೆ ಮುನ್ನಚ್ಚರಿಕೆ ವಹಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕ ವೈದ್ಯಧಿಕಾರಿ ಡಾ.ಬನದೇಶ್ವರ ಮಾತನಾಡಿ, ಆ.7ರಿಂದ 17ವರೆಗೆ ಮೊದಲನೇ ಹಂತ. ಸೆ.11ರಿಂದ 16ವರೆಗೆ ಎರಡನೇ ಹಂತ, ಅಕ್ಟೋಬರ್ 9ರಿಂದ 14ವರೆಗೆ ಮೂರನೇ ಹಂತದಲ್ಲಿ ಲಸಿಕಾ ಅಭಿಯಾನ ನಡೆಯಲಿದೆ. 0ರಿಂದ 5ವರ್ಷದೊಳಗಿ ಲಸಿಕಾ ವಂಚಿತ ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ. ಎರಡು ವರ್ಷ ಮಕ್ಕಳು, 2.199ಸಾವಿರ, 2ರಿಂದ 5ವರ್ಷದೊಳಗಿನ 402 ಮಕ್ಕಳ ಗುರಿ ಹೊಂದಿದೆ. 150 ತಂಡ ರಚನೆ ಮಾಡಿದ್ದು, ಅದರಲ್ಲಿ 25 ಮೊಬೈಲ್ ತಂಡ, 140 ತಾಂಡಾ, ದೊಡ್ಡಿಗಳು ಗುರುತಿಸಲಾಗಿದೆ. 211 ಸ್ಥಳಗಳು ಇದ್ದು, 40 ಜನ ಕಿರಿಯ ಸಹಾಯಕ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು. ಅದರಲ್ಲಿ 316 ಜನ ಗರ್ಭಿಣಿ ಹೊಂದಿದ್ದಾರೆ. ಪರಿಣಾಮಕಾರಿ ಮಿಷನ್ ಇಂಧ್ರಧನಷ್ ಲಸಿಕಾ ಅಭಿಯಾನ ಕುರಿತು ಈಗಾಗಲೇ ಜಾಗೃತಿ ಮೂಡಿಸಲಾಗಿದೆ. ಪ್ರತ್ಯೇಕ ತಂಡ ರಚನೆ ಮಾಡಿದ್ದು, ಪಟ್ಟಣ ಸೇರಿ ತಾಲೂಕಿನಾದ್ಯಂತ ಅಭಿಯಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ ಎಂದು ಹೇಳಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳ ಸಹಾಯಕ ಬಹಳ ಅಗತ್ಯವಿದೆ ಎಂದರು. ಆ.7ರಂದು ಸೋಮವಾರ ಆರೋಗ್ಯ ಕುಟುಂಬ ಇಲಾಖೆ ಸಚಿವರು ರಾಯಚೂರು ಜಿಲ್ಲೆಯಲ್ಲಿ ಉದ್ಘಾಟನೆ ನೆರವೇರಸಲಿದ್ದಾರೆ. ಸ್ಥಳೀಯ ಶಾಸಕಿ ಕರೆಮ್ಮ ಗೋಪಾಲಕೃಷ್ಣ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡುವ ಹಿನ್ನೆಲೆ ಆಹ್ವಾನಿಸಲಾಗಿದೆ ಎಂದು ಹೇಳಿದರು. ಲಸಿಕಾ ಅಭಿಯಾನ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳ ತಂಡ ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸಭೆಯಲ್ಲಿ ತಿಳಿಸಿದರು. ಇದೇ ಸಂದರ್ಭದಲ್ಲಿ ಅರಕೇರಾ ತಹಶೀಲ್ದಾರ ಯಲ್ಲಪ್ಪ ಸುಭೇದಾರ್, ಡಾ.ಅಯ್ಯಣ್ಣಗೌಡ ಬಲ್ಲಟಗಿ, ಡಾ.ನಿರ್ಮಲ, ಹಿರಿಯ ಮೇಲ್ವಿಚಾರಕಿ ಲಕ್ಷ್ಮೀರಾಠೋಡ್, ಆರೋಗ್ಯ ಇಲಾಖೆ ಸಿಬ್ಬಂದಿ ಶಿವಪ್ಪ ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದರು.
