
ಉದಯವಾಹಿನಿ, ಬೆಂಗಳೂರು: ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಜಾಲಿ ಟ್ರಿಪ್ ಅಂತ ಹೋಗಿದ್ರು. ಆದ್ರೆ ವಿಧಿ ಅವರಿಗೆ ವಿರುದ್ಧವಾಗಿತ್ತು ಅನ್ಸುತ್ತೆ. ಇದ್ದಕ್ಕಿದ್ದಂತೆ ಇಹಲೋಕ ತ್ಯಜಿಸಿದ್ದಾರೆ. ಮಲಗಿದ್ದವರು ಮತ್ತೆ ಎದ್ದೇ ಇಲ್ಲ. ಅಮ್ಮ ಟ್ರಿಪ್ ಮುಗಿಸಿ, ಗಿಫ್ಟ್ ತರ್ತಾರೆ ಅಂತ ಕಾಯ್ತಿದ್ದ ಮಗನಿಗೆ ಅಮ್ಮ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ.
ಹೆಂಡತಿಯ ಜೊತೆಗೆ ಒಂದೆರಡು ದಿನ ಜಾಲಿ ಟ್ರಿಪ್ ಹೋಗೋಣಾ ಅಂತ ಹೋಗಿದ್ದ ವಿಜಯ್ ರಾಘವೇಂದ್ರ ಅವರಿಗೆ ಥೈಲ್ಯಾಂಡ್ ನಲ್ಲಿ ಏನು ಮಾಡಬೇಕು ಎಂಬ ಧೈರ್ಯ ಬರಯತ್ತಿಲ್ಲ. ನಗುಮುಖದ, ಸದಾ ಗಂಡ – ಮಗನ ಖುಷಿಗಾಗಿ ಸಮಯ ಮೀಸಲಿಟ್ಟಿದ್ದ ಹೆಂಡತಿ ಇಂದು ಮೌನವಾಗಿ ಮಲಗಿದ್ದಾರೆ. ಅದನ್ನ ವಿಜಯ್ ರಾಘವೇಂದ್ರ ನೋಡಿ ಅರಗಿಸಿಕೊಳ್ಳುವುದಾದರೂ ಹೇಗೆ..?
ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ 2007ರಲ್ಲಿ ಮದುವೆಯಾಗಿದ್ದರು. 15 ವರ್ಷದ ದಾಂಪತ್ಯ ಜೀವನ ಮುಗಿಸಿ, 16ನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರದ್ದು ಲವ್ ಮ್ಯಾರೇಜ್ ಅಲ್ಲ, ಹಿರಿಯರು ನೋಡಿ ಮಾಡಿದ ಮದುವೆ. ಬಹಳ ಅನ್ಯೋಯವಾಗಿದ್ದವರು. ಮುದ್ದಾದ ಮಗ ಇದ್ದಾನೆ. ವಿಜಯ್ ಹಾಗೂ ಸ್ಪಂದನಾ ಇದ್ದಂತ ಅನ್ಯೋನ್ಯತೆಗೆ ನೋಡಿದವರೆಲ್ಲ ಇಬ್ಬರದ್ದು ಲವ್ ಮ್ಯಾರೇಜ್ ಇರಬೇಕು ಎಂದುಕೊಂಡಿದ್ದರು. ವಿಜಯ್ ರಾಘವೇಂದ್ರ ಅವರಿಗೆ ಮ್ಯಾರೇಜ್ ಬಳಿಕದ ಜೀವನದ ಕನಸು ದೊಡ್ಡಮಟ್ಟದ್ದಾಗಿತ್ತು. ಜಗಳವಾಡಬಾರದು, ಸಂತೋಷದಿಂದ ಇರಬೇಕು ಹೀಗೆ ಹಲವು ಆಸೆಗಳಿದ್ದವು. ಅದರಂತೆ ಸ್ಪಂದನಾ ಅವರನ್ನು ಮದುವೆಯಾದ ಮೇಲೆ ಆ ಆಸೆಗಳನ್ನು ಹೇಳಿದ್ದರಂತೆ. ಇನ್ನು ವಿಜಯ್ ರಾಘವೇಂದ್ರ ಹಲವು ಬಾರಿ ಕಾಫಿ ಡೇಗಳಲ್ಲಿ ಸ್ಪಂದನಾ ಅವರನ್ನು ನೋಡಿದ್ದರಂತೆ.
ಮೂರನೇ ಬಾರಿ ಭೇಟಿಯಾದಾಗ ಮಾತನಾಡಿಸಿದ್ದರಂತೆ. ತಂದೆಯ ಬಳಿ ಸ್ಪಂದನಾ ಬಗ್ಗೆ ಹೇಳಿದಾಗ, ಚಿನ್ನೇಗೌಡ ಅವರು, ಬಿಕೆ ಶಿವರಾಂ ಬಳಿ ಮಾತನಾಡಿ, ಗುರುಹಿರಿಯರ ಆಶೀರ್ವಾದದೊಂದಿಗೆ ಮದುವೆ ಮಾಡಿಸಿದ್ದಾರೆ. ಆದರೆ ವಿಧಿ ಅವರ ಬದುಕಿನ ನೆಮ್ಮದಿಯನ್ನೇ ಇಂದು ಕಿತ್ತುಕೊಂಡಿದೆ.
