
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ಸಲಗರ ಬಸಂತಪೂರ ಗ್ರಾಮ ಪಂಚಾಯತನ ಎರಡನೇ ಅವಧಿಗೆ ನಡೆದ ಅಧ್ಯಕ್ಷರ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸರಸ್ವತಿಬಾಯಿ ನಾರಾಯಣ ಉಪಾಧ್ಯಕ್ಷರಾಗಿ ಸರೋಜಾಬಾಯಿ ಶಶಿಕಾಂತ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಜಕುಮಾರ ತಿಳಿಸಿದ್ದಾರೆ.
ಗ್ರಾಪಂ.ನಲ್ಲಿ ಒಟ್ಟು 18ಜನ ಸದಸ್ಯರಿದ್ದು ಎಲ್ಲರೂ ಹಾಜರಾಗಿದ್ದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದು ನಾಮಪತ್ರ ಸಲ್ಲಿಕೆ ಆಗಿರುವುದರಿಂದ ಅವಿರೋಧವಾಗಿ ಘೋಷಿಸಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ಅಧ್ಯಕ್ಷರ ಘೋಷಣೆ ಆಗುತ್ತಿದ್ದಂತೆ ಬೆಂಬಲಿಗರು ಅಭಿಮಾನಿಗಳು ಹೂಮಾಲೆ ಹಾಕಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಪಿಡಿಓ ರೇವಣಸಿದ್ದಯ್ಯ,ಮಾಜಿ ಅಧ್ಯಕ್ಷ ವಿಜಯಾ ಹಣಮಂತರಡ್ಡಿ,ನಿರ್ಮಲ,ಬಳಿರಾಮ,ತಾರಸಿಂ ಗ್,ರತ್ನಾಬಾಯಿ,ದಶರಥ,ಶಿವಶಂಕರಯ್ಯ, ಭೀಮಶಾ,ದ್ರೋಪತಿ,ನಾಗಪ್ಪ,ರಾಜಕುಮಾರ, ಅನುಸೋಯಬಾಯಿ,ನೀಲಕಂಠ,ನಾಗಪ್ಪ,ಓಂನಾ ಥ,ಪುರಂದಾಸ,ನಾರಾಯಣ,ಭೋಜು,ವಿಠ್ ಠಲರಡ್ಡಿ,ನರಸಿಂಹರಾವ,ಪ್ರಲ್ಹಾದರಡ್ ಡಿ,ಶಾಮರಾವ ಪವ್ಹಾರ,ಬೋಜರಾವ,ರವಿ,ತೇಜುನಾಯಕ,ಗೇ ಮು ರಾಠೋಡ್,ಪ್ರಭು,ಅನೇಕರಿದ್ದರು.
