ಉದಯವಾಹಿನಿ,ಶಿಡ್ಲಘಟ್ಟ:ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಡಿ ಬಿ ವೆಂಕಟೇಶ್ ಹಾಗೂ ಲಕ್ಷ್ಮಿದೇವಮ್ಮ ಉಪಾಧ್ಯಕ್ಷರಾಗಿ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಹಿಂದುಳಿದ ವರ್ಗ ‘ಬ’ ಅಧ್ಯಕ್ಷ, ಪರಿಶಿಷ್ಟ ಪಂಗಡ ಮಹಿಳೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿತ್ತು. ಜೆಡಿಎಸ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿತ ಸಮಯದಲ್ಲಿ ತಲಾ ಒಂದೊಂದೆ ನಾಮಪತ್ರ ಸಲ್ಲಿಕೆ ಆದ ಕಾರಣ 17 ಜನ ಸದಸ್ಯರ ಪೈಕಿ 13 ಸದಸ್ಯರು ಹಾಜರಿದ್ದ ಸಭೆಯಲ್ಲಿ ಈ ಇಬ್ಬರು ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ಸಂತೋಷ್ ಘೋಷಣೆ ಮಾಡಿದರು.ನೂತನ ಅಧ್ಯಕ್ಷ ಡಿ ಬಿ ವೆಂಕಟೇಶ್ ಮಾತನಾಡಿ, ಸದಸ್ಯರ ಒಮ್ಮತದಿಂದ ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಪಂಚಾಯತಿ ಮಟ್ಟದ ಮೂಲಭೂತ ಸೌಕರ್ಯಗಳಾದ ನೀರು, ಸ್ವಚ್ಛತೆ, ಬೀದಿದೀಪ, ನೈರ್ಮಲ್ಯವನ್ನು ಕಾಪಾಡುವುದರೊಂದಿಗೆ ಸಾರ್ವಜನಿಕರಿಗೆ ಸಮಗ್ರ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತೇನೆ ಎಂದು ಅಭಿಪ್ರಾಯ ಪಟ್ಟರು.ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ವಜ್ರೇಶ್, ಮಾಜಿ ಗ್ರಾ ಪಂ ಉಪಾಧ್ಯಕ್ಷ ಹಾಗೂ ಸದಸ್ಯ ಧರ್ಮೇದ್ರ,ವಿಎಸ್ ಮಂಜುನಾಥ್,ವಿ ಎಂ ಮಂಜುನಾಥ್, ಭಾರತಿ ರೆಡ್ಡಪ್ಪ, ಕಾಂತಮ್ಮ,ಸುಶ್ಮಿತ ದೇವರಾಜ್,ಮಾಜಿ ಗ್ರಾಪಂ ಬಿ ಎಂ ವೆಂಕಟರೆಡ್ಡಿ,ದೊಡ್ಡತೇಕಹಳ್ಳಿ ಗ್ರಾ ಪಂ ಸದಸ್ಯ ಸಿ ವೆಂಕಟೇಶಪ್ಪ ಹಾಗೂ ಸದಸ್ಯರು ಮುಖಂಡರು ಮತ್ತಿತರರು ಇದ್ದರು.
ಪಂಚಾಯತ್ ರಾಜ್ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ಗ್ರಾಮ ಪಂಚಾಯತಿಯ ಶಿಕ್ಷಣದ ಅವಸ್ಥೆ, ಆರೋಗ್ಯ, ಬೀದಿ ದೀಪ,ನಿರ್ಮಲೀಕರಣ, ಸ್ವಚ್ಚತೆ ಹಾಗೂ ಸಾರ್ವಜನಿಕ ಕಾರ್ಯಗಳನ್ನು ಬಡ ಬಗ್ಗರಿಗೆ ಸರಿಯಾದ ರೀತಿಯಲ್ಲಿ ಒದಗಿಸಿಕೊಡಬೇಕು.
 ತಾ ಪಂ ಮಾಜಿ ಅಧ್ಯಕ್ಷ ಬಿ ವಿ ನಾರಾಯಣಸ್ವಾಮಿ,

Leave a Reply

Your email address will not be published. Required fields are marked *

error: Content is protected !!