
ಉದಯವಾಹಿನಿ ಪೀಣ್ಯ ದಾಸರಹಳ್ಳಿ : ಈಗಿನ ಪರಿಸ್ಥಿತಿಯಲ್ಲಿ ಸಾವಿರಾರು ವಿವಿಧ ಸಂಘಟನೆಗಳ ಕಾರ್ಯ ಚಟುವಟಿಕೆ ಬೇರೆ ನಮ್ಮ ಪ್ರಜಾ ಶಕ್ತಿ ಸೇವಾ ಸಂಘದ ಜನಪರ ಕೂಲಿ ಕಾರ್ಮಿಕರ ಬಡವರ ಪರ ಪ್ರಾಮಾಣಿಕ ಕೆಲಸ ಮಾಡಿರಿ ಎಂದು ಪ್ರಜಾ ಶಕ್ತಿ ಸೇವಾ ಸಂಘದ ನೂತನ ಪದಾಧಿಕಾರಿಗಳಿಗೆ ಸಂಸ್ಥಾಪಕ ಕಾರವನಹಳ್ಳಿ ಜಿ ಬೇಟಪ್ಪ ರಾವಣ್ ಕರೆ ನೀಡಿದರು.
ಪೀಣ್ಯ 2ನೇ ಹಂತದ ರಾಜಗೋಪಾಲನಗರ ಮುಖ್ಯ ರಸ್ತೆಯಲ್ಲಿರುವ ಕರ್ನಾಟಕ ನ್ಯೂಸ್ ಪ್ರೆಸ್ ಕ್ಲಬ್ ಆವರಣದಲ್ಲಿ ನೂತನ ರಾಜ್ಯಾಧ್ಯಕ್ಷ ಉಮೇಶ್ ಗೌಡ ಹೆಗ್ಗನಹಳ್ಳಿ ಅವರ ನೇತೃತ್ವದಲ್ಲಿ ಪದಾಧಿಕಾರಿಗಳ ನೇಮಕ ಆದೇಶ ಪ್ರಮಾಣ ಪತ್ರ ನೀಡುವ ಕಾರ್ಯ ಕ್ರಮ ಆಯೋಜಿಸಲಾಗಿತ್ತು.ನೂತನ ರಾಜ್ಯ ಪದಾಧಿಕಾರಿಗಳಿಗೆ ಆದೇಶ ಪ್ರಮಾಣ ಪತ್ರ ನೀಡಿ ನ್ಯಾಯಕ್ಕಾಗಿ ಹೋರಾಟ ಮತ್ತು ಪ್ರಜಾ ಶಕ್ತಿ ಸೇವಾ ಸಂಘದ ರಾಜ್ಯದಲ್ಲಿ ಹಳ್ಳಿಯಿಂದ ಹಿಡಿದು ಹೋಬಳಿ ತಾಲೂಕು ಜಿಲ್ಲಾ ಮಟ್ಟದಲ್ಲಿ ಪ್ರತಿಯೋಬ್ಬ ಪದಾಧಿಕಾರಿಗಳು ಕೆಲಸ ಮಾಡಿ ಸಂಘಕ್ಕೆ ಕೀರ್ತಿ ತರುವ ಕೆಲಸ ಮಾಡಿರಿ ಎಂದು ಬೇಟಪ್ಪ ರಾವಣ್ ಆದೇಶ ಪ್ರಮಾಣ ಪತ್ರ ನೀಡಿ ಮಾತನಾಡಿದರು.
ನೂತನ ರಾಜ್ಯಾಧ್ಯಕ್ಷ ಉಮೇಶ್ ಗೌಡ ಸರ್ವರಿಗೂ ಅಭಿನಂದಿಸಿದರು. ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಭಾಗ್ಯ ಅವರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ನ್ಯೂಸ್ ಪ್ರೆಸ್ ಕ್ಲಬ್ ಅಧ್ಯಕ್ಷ ಅಯ್ಯಣ್ಣ ಮಾಸ್ಟರ್, ಭೀಮ ಸಂದೇಶ ಪತ್ರಿಕೆಯ ಸಂಪಾದಕ ವೈ ಜಿ ನರಸಿಂಹ ಮೂರ್ತಿ, ಶ್ರೀಕಾಂತ್, ಚಾಲಕರ ಘಟಕದ ರಾಜ್ಯಾಧ್ಯಕ್ಷ ಉಮೇಶ್ ರಾವ್, ಫಕೀರಪ್ಪ, ವಿಜಯಲಕ್ಷ್ಮೀ, ಮಂಜುನಾಥ್, ರವಿ, ಗುರುರಾಜ್, ಶೋಭಾ, ಶಿಲ್ಪಾ, ಕಲ್ಯಾಣಿ, ಗಿರೀಜಾ, ಮಹೇಶ್ವರಿ, ಸುಜಾತ ಸೇರಿದಂತೆ ಪ್ರಜಾ ಶಕ್ತಿ ಸೇವಾ ಸಂಘದ ರಾಜ್ಯ, ಜಿಲ್ಲಾ, ತಾಲೂಕ ಮಟ್ಟದ ಪದಾಧಿಕಾರಿಗಳು ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು.
