
ಉದಯವಾಹಿನಿ ಕೊಲ್ಹಾರ: ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿರುವ ತಾಲೂಕಿನ ಆರಾಧ್ಯ ದೇವತೆ ಬೀಬಿ ಫಾತೀಮಾ ಜಿರಾತ್ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಭಕ್ತರ ನಡುವೆ ಜರುಗಿತು.ಪವಾಡಕ್ಕೆ ಹೆಸರಾಗಿರುವ ಬಳೂತಿ ಗ್ರಾಮದ ಬೀಬಿ ಫಾತೀಮಾ ದೇವತೆಯ ಜಿರಾತ್ ಕಾರ್ಯಕ್ರಮ ಪ್ರತಿವರ್ಷದಂತೆ ಈ ವರ್ಷವೂ ಕೂಡ ಮೊಹರಂ ಹಬ್ಬ ಜರುಗಿದ ಹತ್ತನೆಯ ದಿನದಂದು ಜರುಗುತ್ತದೆ ಅಂತೆಯೇ ಸೋಮವಾರ ಶ್ರದ್ಧಾ ಭಕ್ತಿಯಿಂದ ಜಿರಾತ್ ಕಾರ್ಯಕ್ರಮ ಜರುಗಿತು.ಕೊಲ್ಹಾರ ತಾಲೂಕು ಸಹಿತ ಅವಳಿ ಜಿಲ್ಲೆಯಿಂದ ಆಗಮಿಸಿದ ಸುಮಾರು ೨೫ ಸಾವಿರ ಭಕ್ತಾಧಿಗಳ ಸಮ್ಮುಖದಲ್ಲಿ ಬೀಬಿ ಫಾತೀಮಾ ದೇವತೆಯ ಡೋಲಿ ಮೆರವಣಿಗೆ ವಿವಿಧ ತರದ ಹೂವಿನ ಅಲಂಕಾರ ದೊಂದಿಗೆ ನಡೆಯಿತು. ಗ್ರಾಮದ ಹಿಂದೂ ಮುಸ್ಲಿಂ ಬಾಂಧವರು ಎರಡು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಜಿರಾತ್ ಆಚರಿಸುವ ಮೂಲಕ ನಾಡಿಗೆ ಭಾವೈಕ್ಯತೆಯ ಸಂದೇಶ ಸಾರಿದರು, ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವ ಭಕ್ತಾದಿಗಳಿಗೆ ಈ ವರ್ಷ 35 ಕ್ವಿಂಟಲ್ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಭಕ್ತರಿಗೆ ಬೇಡಿದ ವರವನ್ನು ಕೊಡುವ ದೇವತೆ: ಭಕ್ತರಿಗೆ ಬೆಡಿದ ವರವನು ಕೊಟ್ಟು ಉದ್ಧರಿಸುವ ದೇವತೆ ಎಂದು ಸುಪ್ರಸಿದ್ಧಿ ಬಳೂತಿಯ ಬೀಬಿ ಫಾತೀಮಾ ದೇವತೆಗಿದೆ.
ಹಿನ್ನೆಲೆ: ಪ್ರತಿವರ್ಷ ಬಳೂತಿ ಗ್ರಾಮದಲ್ಲಿ ವಾಡಿಕೆಯಂತೆ ಮೊಹರಂ ಆಚರಣೆಗೆ ನಡೆಯುತ್ತಿತ್ತು, ಸುಮಾರು ವರ್ಷಗಳ ಹಿಂದೆ ಬಿಬಿ ಫಾತೀಮಾ ದೇವತೆಯ ಹಳೆಯ ಡೋಲಿಯ ಬದಲಿಗೆ ಹೊಸ ಡೋಲಿಯನ್ನು ಪ್ರತಿಷ್ಠಾಪಿಸಿ ಹಳೆ ಡೋಲಿಯನ್ನ ಕೃಷ್ಣಾ ನದಿಯಲ್ಲಿ ವಿಸರ್ಜಿಸಲಾಗಿತ್ತು ಆ ವರ್ಷದಿಂದ ಗ್ರಾಮದಲ್ಲಿ ಅನೇಕ ಅವಘಡಗಳು ನಡೆಯಲಾರಂಭಿಸಿದವು, ಗ್ರಾಮಸ್ಥರು ಅನೇಕ ತರಹದ ತೊಂದರೆಗಳಿಗೆ ಸಿಲುಕುವಂತಾಗಿ ಗ್ರಾಮದ ಹಿರಿಯರು ಒಟ್ಟಾಗಿ ತೊಂದರೆಗಳಿಗೆ ಕಾರಣ ಹುಡುಕಲಾಗಿ ಬಿಬಿ ಫಾತೀಮಾ ದೇವತೆಯ ಹಳೆಯ ಡೋಲಿಯಿಂದಾಗಿ ಇಂತಹ ಅವಘಡಗಳು ಸಂಭವಿಸುತ್ತಿವೆ ಎಂಬ ಉತ್ತರದಿಂದ ಗ್ರಾಮಸ್ಥರು ಹಳೆಯ ಡೋಲಿ ವಿಸರ್ಜಿಸಿದ ಸ್ಥಳಕ್ಕೆ ತೆರಳಿ ನೋಡಲಾಗಿ ಡೋಲಿಗೆ ಅಲ್ಪವು ಹಾನಿಯಾಗದೆ ವಿಸರ್ಜಿಸಿದ ಸ್ಥಳದಲ್ಲೇ ನೀರಿನಿಂದ ಮೇಲೆದ್ದು ತೇಲುವುದನ್ನು ಕಂಡು ಗ್ರಾಮಸ್ಥರು ಶ್ರದ್ಧಾ ಭಕ್ತಿಯಿಂದ ದೇವತೆಯ ಡೋಲಿಯನ್ನು ಮರಳಿ ಗ್ರಾಮಕ್ಕೆ ತಂದು ಮೊಹರಂ ಜಿಯಾರತ್ ಆಚರಣೆ ಪ್ರಾರಂಭಿಸಿದರು. ಅಂದಿನಿಂದ ಗ್ರಾಮಕ್ಕೆ ಒಳಿತಾಗುತ್ತಾ ಬರುತ್ತಿದೆ ಪ್ರತಿವರ್ಷ ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ಜಿರಾತ್ ಆಚರಿಸಿಕೊಂಡು ಬರಲಾಗುತ್ತಿದೆ.
ಈ ಜಾತ್ರಾ ಮಹೋತ್ಸವದಲ್ಲಿ ಊರಿನ ಹಿರಿಯರು ಹಾಗೂ ಯುವಕರು ಸುತ್ತ ಮುತ್ತಲಿನ ಆಗಮಿಸಿದ ಭಕ್ತಾದಿಗಳ ಮುಖಂಡರು ನಡುವೆ ಜರಗಿತು. ಅವಳಿ ಜಿಲ್ಲೆಯಿಂದ ಆಗಮಿಸಿದ ಎಲ್ಲ ಸದ್ಭಕ್ತರೊಂದಿಗೆ ಅತ್ಯಂತ ಸಡಗರ ಸಂಭ್ರಮದಿಂದ , ಫಾತಿಮಾ ದೇವಿ ಕೃಪೆ ಆಶೀರ್ವಾದದಿಂದ ಜಾತ್ರಾ ಮಹೋತ್ಸವ ಜರಗಿತು, ಪ್ರತಿ ವರ್ಷ 20ರಿಂದ 25 ಕ್ವಿಂಟಲ್ ಅನ್ನಪ್ರಸಾದ ಸೇವನೆ ಜರುತ್ತಿತ್ತು.ಈ ವರ್ಷ 35 ಕ್ವಿಂಟಲ್ ಅನ್ನಪ್ರಸಾದ ಸೇವೆಗೆ ನೀಡಿದ್ದಾರೆ.ಯಾವುದೇ ಘಟನೆ ಸಂಭವಿಸಿದೆ ಸದ್ಭಕ್ತರು ಸಹಕರಿಸಿದ್ದಾರೆ ಎಂದು ಧನ್ಯವಾದಗಳನ್ನು ಹೇಳಿದರು””
ಶ್ರೀ ಜಗದೀಶ್ ಸುನಗದ ಗ್ರಾಮದ ಯುವಕ
