
ಉದಯವಾಹಿನಿ ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡಿನ ವ್ಯಾಪ್ತಿಗೆ ಬರುವ ಅಬ್ಬಿಗೆರೆ ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸೂರಜ್ ಫೌಂಡೇಶನ್ ಸಂಸ್ಥಾಪಕಿ ಅಧ್ಯಕ್ಷೆ ಹಾಗೂ ಕ್ಷೇತ್ರದ ಬಿಜೆಪಿ ಹಿರಿಯ ನಾಯಕಿ ಶ್ರೀಮತಿ ಸುಜಾತ ಮುನಿರಾಜು ಅವರ ನೇತೃತ್ವದಲ್ಲಿ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಮುನಿರಾಜು ಅವರು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಉಚಿತ ನೀಡಿ ಮಕ್ಕಳಿಗೆ ಗುರುಗಳು ಹೇಳಿದ ಪಾಠ ಪ್ರವಚನ ಅಂದೆ ಓದಿ ಶಾಲೆ ನಿಮ್ಮ ಶಿಕ್ಷಕ ಶಿಕ್ಷಕಿಯರಿಗೆ ಮತ್ತು ತಂದೆ ತಾಯಿಯರಿಗೆ ಕೀರ್ತಿ ತರಬೇಕು ಎಂದು ಮಕ್ಕಳಿಗೆ ಶುಭ ಕೋರಿ ಶಾಸಕ ಎಸ್ ಮುನಿರಾಜು ಮಾತನಾಡಿದರು.
ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕ್ಷೇತ್ರದ ಬಿಜೆಪಿ ಪ್ರಭಾವಿ ಹಿರಿಯ ಮುಖಂಡ ಜಿ.ಮರಿಸ್ವಾಮಿ,ಶಾಲಾ ಎಸ್.ಡಿ.ಸಿ ಅಧ್ಯಕ್ಷ ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವೀರ ಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ ಜಿ ರಾಜೇಂದ್ರ, ಕ್ಷೇತ್ರದ ಬಿಜೆಪಿ ಮಾಜಿ ಅಧ್ಯಕ್ಷ ಅಬ್ಬಿಗೆರೆ ಲೋಕೇಶ್, ಬಿಜೆಪಿ ಮುಖಂಡರಾದ ಹನಶ್ರೀ ಮಂಜುನಾಥ್, ಪ್ರದಾನ ಕಾರ್ಯದರ್ಶಿ ವಿನೋದ್ ಗೌಡ,ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕ ಶಿಕ್ಷಕಿಯರು ಸಿಬ್ಬಂದಿ ವರ್ಗದವರು ಪೋಷಕರು ಅಬ್ಬಿಗೆರೆ ಸಮಸ್ತ ನಾಗರಿಕರು ಇದ್ದರು.
