
ಉದಯವಾಹಿನಿ ಮಸ್ಕಿ: ಕ್ರೀಡಾಪಟುಗಳು ಸೋಲು-ಗೆಲುವು ಲೆಕ್ಕಿಸದೆ ಕ್ರೀಡಾ ಮನೋಭಾವದಿಂದ ಆಟವಾಡಬೇಕು ಎಂದು ಸಿ ಆರ್ ಪಿ ರಾಮಸ್ವಾಮಿ ಹೇಳಿದರು.
ಪಟ್ಟಣದ ಬಿ ಎಂ ಎಲ್ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಸ್ಕಿ ಬಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ದೈಹಿಕ ಸದೃಢತೆಗೆ ಕ್ರೀಡಾಕೂಟಗಳು ಅವಶ್ಯವಿದ್ದು, ಸೋಲು ಗೆಲುವು ಲೆಕ್ಕಸದೆ ಕ್ರೀಡೆಯಲ್ಲಿ ಭಾಗವಹಿಸಬೇಕು. ನಿರ್ಣಾಯಕರ ನಿರ್ಧಾರ ಸರಿಯಾಗಿದ್ದರೆ ಮಾತ್ರ ಅರ್ಹ ಕ್ರೀಡಾಪಟುಗಳು ಬೆಳೆಯಲು ಸಾಧ್ಯವಾಗುತ್ತದೆ ಎಂದರು. ಕ್ರೀಡಾಕೂಟದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಯಾನಂದ ಜೋಗಿನ್ ಮಾತನಾಡಿ, ಗ್ರಾಮೀಣ ಪ್ರತಿಭೆಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಶಾಲಾ ಹಂತದ ಕ್ರೀಡಾಕೂಟಗಳು ಬುನಾದಿ ಹಾಕುತ್ತವೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕಿದೆ ಎಂದರು. ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ದಯಾನಂದ ಜೋಗಿನ್, ಪುರಸಭೆ ಮುಖ್ಯ ಅಧಿಕಾರಿ ನರಸರೆಡ್ಡಿ, ಪ್ರಬಾರಿ ಶಿಕ್ಷಣ ಅಧಿಕಾರಿ ಬಸಪ್ಪ ತನಿಖೆ ದಾರ, ತಾಲೂಕ ದೈಹಿಕ ಶಿಕ್ಷಣ ಪರಿಕ್ಷಕ ಮಲ್ಲಿಕಾರ್ಜುನ್ ಮೇಟಿ, ಸಿ ಆರ್ ಪಿ ರಾಮಸ್ವಾಮಿ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಸ್ವಾಮಿ, ಜೋಗಿನಾ ರಾಮಣ್ಣ ಪ್ರೌಢಶಾಲೆಯ ಮುಖ್ಯ ಗುರುಗಳು ಸಿದ್ದರೆಡ್ಡಿ, ರಾಷ್ಟ್ರೀಯ ಪದವಿ ಪೂರ್ವ ಪ್ರಾಚಾರ್ಯರಾದ ವೀರೇಶ ಹೂಗಾರ, ಬಿಎಂಎಲ್, ಜೋಗಿನ ರಾಮಣ್ಣ ಸ್ಮಾರಕ ಪ್ರೌಢಶಾಲೆ, ರಾಷ್ಟ್ರೀಯ ಪದವಿಪೂರ್ವ ಕಾಲೇಜ್ ಆಡಳಿತ ಮಂಡಳಿಯವರು ಮತ್ತು ಸಿಬ್ಬಂದಿ ವರ್ಗದವರು, ತಾಲೂಕ ದೈಹಿಕ ಶಿಕ್ಷಣ ಶಿಕ್ಷಕರು, ವಿವಿಧ ಶಾಲೆ ಶಿಕ್ಷಕರು ಇದ್ದರು.
