ಉದಯವಾಹಿನಿ,ಕಾರಟಗಿ: ಗಂಗಾವತಿಯನ್ನು ಜಿಲ್ಲಾ ಕೇಂದ್ರವನ್ನಾಗಿ ರೂಪಿಸುವ ಸಂಬ0ಧ ಹೋರಾಟಕ್ಕೆ ಸರ್ವ ಸಿದ್ಧತೆಗಳು ರೂಪುಗೊಂಡಿವೆ. ಉದ್ದೇಶಿತ (ಕಿಷ್ಕಿಂದಾ ಜಿಲ್ಲಾ) ಹೋರಾಟಕ್ಕೆ ಎಲ್ಲಾ ತಾಲೂಕಾಗಳ ಜನರು, ಜನಪ್ರತಿನಿಧಿಗಳು, ಸಂಘ-ಸ0ಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆಗಳನ್ನು ಆಯೋಜಿಸುತ್ತಿದ್ದೆವೆ ಎಂದು ಸಾಹಿತಿ ಪನಕಕುಮಾರ್ ಗುಂಡೂರು ಹೇಳಿದರು.
ಪಟ್ಟಣದ ವಾಸವಿ ನಗರದ ಶ್ರೀ ವಾಸವಿ ದೇವಸ್ಥಾನದಲ್ಲಿ ಕಿಷ್ಕಿಂದೆ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರಟಗಿ ತಾಲೂಕಿನ ಸಮಾನ ಮನಸ್ಕರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು ಕಾರಟಗಿ ಪಟ್ಟಣದ ಪ್ರಮುಖರು ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಕೊಪ್ಪಳ ಜಿಲ್ಲೆಯಿಂದ ಗಂಗಾವತಿ, ಕನಕಗಿರಿ, ಕಾರಟಗಿ ತಾಲೂಕುಗಳು ಸೇರಿದಂತೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಹಾಗೂ ತಾವರಗೇರಾದ ಪ್ರಮುಖರು ಕೂಡಾ ಗಂಗಾವತಿ ಜಿಲ್ಲಾ ಕೇಂದ್ರವಾದರೆ ನಾವು ಕೂಡಾ ನೂತನ ಕಿಷ್ಕಿಂದೆ ಜಿಲ್ಲೆಗೆ ಸೇರ್ಪಡೆಗೊಳ್ಳುವುದಾಗಿ ಹೇಳಿದ್ದಾರೆ. ಈ ಕುರಿತು ಚರ್ಚೆಗಳಾಗುತ್ತಿವೆ ಎಂದರು
ನ0ತರ ಕಿಷ್ಕಿಂದಾ ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ಸಂತೋಷ ಕೆಲೋಜಿ ಮಾತನಾಡಿ ಹನುಮಂತನ ಜನ್ಮಸ್ಥಳ ಎನ್ನಲಾದ ಕಿಷ್ಕಿಂದೆಗೆ ತಡವಾಗಿ ಮಹತ್ವ ಬಂದಿದೆ. ಇದೀಗ ಕಿಷ್ಕಿಂದಾ ಜಿಲ್ಲಾ ಹೋರಾಟ ಸಮಿತಿ ರೂಪಿಸುವ ಸಂಬ0ಧ ಸಂಬ0ಧಿಸಿದ ಎಲ್ಲಾ ತಾಲೂಕಾ ಕೇಂದ್ರಗಳಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಲಾಗುತ್ತಿದ್ದು ಇಂದು ಕಾರಟಗಿ ಪಟ್ಟಣಕ್ಕೆ ಆಗಮಿಸಿರುವುದಾಗಿ ಸಭೆಗೆ ತಿಳಿಸಿದರು.
ಕಾರಟಗಿ ಪಟ್ಟಣದ ಪ್ರಮುಖರು ಮಾತನಾಡಿ ಸುಗಮ ಆಡಳಿತಕ್ಕೆ, ಜನಸಾಮಾನ್ಯರಿಗೆ ಸರ್ಕಾರಿ ಸೌಲಭ್ಯಗಳು, ಸೇವೆಗಳು ಸುಲಭವಾಗಿ ಸಿಗಬೇಕೆಂದರೆ ಅಧಿಕಾರ ವಿಕೇಂದ್ರಕರಣವಾಗಬೇಕೆAದು ಸರ್ಕಾರಗಳ ಮೂಲ ದೃಷ್ಠಿಕೋನವಾಗಿದೆ. ಈ ನಿಟ್ಟಿನಲ್ಲಿ ನಾವು ನೀವೆಲ್ಲ ಸೇರಿ ಸಂಘಟಿತ ಹೋರಾಟ ಮತ್ತು ರಾಜಕೀಯ ಇಚ್ಛಾಶಕ್ತಿಯಿಂದ, ಬದ್ಧತೆಯಿಂದ ಹೋರಾಟ ಮಾಡಿದರೆ ಕಿಷ್ಕಿಂದೆ ನೂತನ ಜಿಲ್ಲೆ ರೂಪುಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.ಎ0ದರು. ಇದಕ್ಕೂ ಮುಂಚೆ ಗಂಗಾವತಿಯ ಪತ್ರಕರ್ತ ಎಂಜೆ ಶ್ರೀನಿವಾಸ್ ಪ್ರಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗಂಗಾವತಿ ಜಿಲ್ಲಾ ಹೋರಾಟ ಸಮಿತಿಯ ಪ್ರಮುಖರು ಸೇರಿದಂತೆ ಕಾರಟಗಿ ಪಟ್ಟಣದ ಪ್ರಮುಖರು ಇದ್ದರು.
