ಉದಯವಾಹಿನಿ,ಕಾರಟಗಿ: ತಾಲೂಕಿನ ಚಳ್ಳೂರ ಗ್ರಾಮದ ಬ್ರಹ್ಮನ್ಮಠದಲ್ಲಿ ಮಂಗಳವಾರ ಅಧಿಕ ಶ್ರಾವಣ ಮಂಗಳವಾರದ ನಿಮಿತ್ಯ 151. ಮುತೈದೆಯರಿಗೆ ಹುಡಿ ತುಂಬುವ ಕಾರ್ಯಕ್ರಮ ನಡೆಯಿತು.ಇದಕ್ಕೂ ಮುಂಚೆ ಗ್ರಾಮ ದೇವತೆ ದುರ್ಗಾದೇವಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧಧಾರ್ಮಿಕ ಪೂಜಾಕೈಂಕರ್ಯಗಳೊ0ದಿಗೆ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಸಲಾಯಿತು. ನಂತರ ಬ್ರಹನ್ಮಠದಲ್ಲಿ 151 ಮುತೈದೆಯರಿಗೆ ಉಡಿ ಉತುಂಬುವ ಕಾರ್ಯಕ್ರಮ ಸಂಭ್ರಮದಿಮದ ನಡೆಯಿತು.
ಅಧಿಕ ಶ್ರಾವಣ ಮಂಗಳವಾರದ ನಿಮಿತ್ಯ ಬೆ. ಬ್ರಹನ್ಮಠದಲ್ಲಿ ವಿಶೇಷ ಪೂಜಾಕಾರ್ಯಕ್ರಮದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ವೇ.ಮೂ. ಸರ್ವಜ್ಞಸ್ವಾಮಿ ನೇತ್ರತ್ವದಲ್ಲಿ ಸಾಂಘವಾಗಿ ಜರುಗಿದವು. ಚಂದ್ರಶೇಖರಯ್ಯ ಸ್ವಾಮಿ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಂತರ ಭಕ್ತ ಸಮೂಹಕ್ಕೆ ಅನ್ನ ಸಂತರ್ಪಣೆ ನಡೆಯಿತು.
ಈ ಕುರಿತು ವೇ.ಮೂ.ಸರ್ವಜ್ಞಸ್ವಾಮಿ ಚಳ್ಳೂರ ಮಾತನಾಡಿ ಅಧಿಕ ಮಾಸದಲ್ಲಿ ನಡೆಸುವ ದೇವರ ಧಾರ್ಮಿಕ ಕಾರ್ಯಗಳು ಬಹಳಷ್ಟು ಫಲ ನೀಡುತ್ತವೆ. ಭಕ್ತ ಸಮೂಹದ ಆಶೋತ್ತರಗಳು ಫಲಿಸುತ್ತವೆ. ಅಲ್ಲದೆ ಅಧಿಕ ಮಾಸದಲ್ಲಿ ದೇವರ ದರ್ಶನ ಮಾಡಿದರೆ ಬಹಳಷ್ಟು ಸಿದ್ಧಿ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಇದೆ. ಅಲ್ಲದೆ ಅಧಿಕ ಶ್ರಾವಣ ಮಾಸದ ಮಂಗಳವಾರ ದಿವಸ ಗ್ರಾಮದೇವತೆಗೆ ಉಡಿ ತುಂಬುವ ಮೂಲಕ ಶ್ರೀಮಠದಲ್ಲಿ 151 ಮುತೈದೇಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಸಿದ್ದೆವೆ. ಮಹಾಮಯಿ ಶ್ರೀ ದುರ್ಗಾದೇವಿ ಸಕಲರಿಗೆ ಒಳ್ಳೆಯ ಆರೋಗ್ಯ ಐಶ್ವರ್ಯ ನೀಡಿ ಜೀವನದಲ್ಲಿ ಸದಾಸಮೃದ್ದಿಯನ್ನು ತರಲಿ ಎಂದು ಬೇಡುತ್ತೆನೆ ಎಂದರು. ಈ ಸಂದರ್ಭದಲ್ಲಿ ಜ್ಞಾನೇಶ್ವರ ಸ್ವಾಮಿ ಹಿರೇಮಠ, ಶಿವಕುಮಾರ ಪಾಟೀಲ್, ಶ್ರೀಶೈಲ್ ಗೌಡ ಪಾಟೀಲ್, ನಾಗಯ್ಯ ಸ್ವಾಮಿ ಕಂಬಾಳಿ ಮಠ, ಚಂದ್ರಶೇಖರ ದೇಸಾಯಿ, ಪಂಪಾಪತಿ ರ‍್ಯಾವಳದ, ವೀರುಪಾಕ್ಷಿ ಚಿರ್ಚನಗುಡ್ಡ ಸೇರಿದಂತೆ ಚಳ್ಳೂರ ಗ್ರಾಮದ ಬ್ರಹ್ನö್ಮಠದ ಮಹಿಳಾ ಸದ್ಭಕ್ತರು ಇತರರು ಇದ್ದರು.
