ಉದಯವಾಹಿನಿ ಮಸ್ಕಿ: ಸಾರ್ವಜನಿಕರ ಬಳಿ ತೆರಿಗೆ ಸಂಗ್ರಹಿಸಿರುವ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಹಾಲಪುರ ಗ್ರಾಪಂ ಪಿಡಿಒ ಅವರನ್ನು ಅಮಾನತ್ತು ಮಾಡಬೇಕೆಂದು ದಲಿತ ಸಂರಕ್ಷ ಸಮಿತಿ ಜಿಲ್ಲಾ ಸಮಿತಿ ಅಧ್ಯಕ್ಷ ಬಾಲಸ್ವಾಮಿ ಜಿನ್ನಾಪೂರ ಅವರು ಒತ್ತಾಯಿಸಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಹಾಲಪೂರ ಗ್ರಾಪಂನಲ್ಲಿ ೧೫ನೇ ಹಣಕಾಸು ಯೋಜನೆಯಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಚಾರ ನಡೆದಿದ್ದು, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಾನವ ದಿನಗಳನ್ನು ಸೃಷ್ಟಿಸಿ ಅನೇಕ ಅಕ್ರಮ ಕೆಲಸ ಮಾಡಿದ್ದು, ಸ್ಥಳಗಳಿಗೆ ಬೇಟಿ ನೀಡಿದರೆ ಕೆಲಸ ಮಾಡಿರುವುದಿಲ್ಲ ಬೋಗಸ್ ಬಿಲ್ಲು ಎತ್ತುವಳಿ ಮಾಡಿದ್ದಾರೆ. ನರೇಗಾ ಯೋಜನೆಯಲ್ಲಿ ಧನದ ಶೆಡ್, ಇಂಗುಗು0ಡಿ, ನಿರ್ಮಾಣ ಮಾಡದೇ ಬಿಒಸಿ ಹಣವನ್ನು ಎತ್ತಿದ್ದಾರೆ. ಇನ್ನೂ ಮಾಡಿರುವ ಕಾಮಗಾರಿಗಳಲ್ಲಿ ಕಳಪೆ ಮಟ್ಟದಿಂದ ಕೂಡಿದೆ. ಸ್ವಚ್ಚ ಭಾರತ ಮಿಷನ್, ಕುಡಿಯುವ ನೀರಿನ ಅನುದಾನ, ಗ್ರಾಪಂ ಸ್ವಂತ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿದ್ದು, ಗ್ರಾಪಂ ಸದಸ್ಯರ ಗಮನಕ್ಕೆ ತರದೇ ಕುಡಿಯುವ ನೀರಿನ ರಿಪೇರಿ ಎಂದು ಎಲೆಕ್ಟಿçಕ್ ಅಂಗಡಿಯವರ ಜೊತೆ ಶಾಮಿಲಾಗಿ ತೆರಿಗೆ ಹಣವನ್ನು ಲೂಟಿ ಮಾಡಿದ್ದಾರೆ. ಚೆಕ್ ಡ್ಯಾಂ ಕಾಮಗಾರಿ ನಿರ್ಮಾಣ ಮಾಡುವ ವೇಳೆ ಇಂಜಿನಿಯರ್ ಕಾಮಗಾರಿ ಪರಿಶೀಲನೆ ಮಾಡಿಲ್ಲ, ನಿರ್ಲಕ್ಷö್ಯ ವಹಿಸಿದ್ದರಿಂದ ಗುತ್ತೆದಾರರು ಕಾಮಗಾರಿಯನ್ನು ಕಳಪೆ ಮಾಡಿದ್ದಾರೆ, ಹೀಗಾಗಿ ಕಾಮಗಾರಿ ಬಿಲ್ಲನ್ನು ತಡೆಹಿಡಿದು ಗುತ್ತೆದಾರ ಹಾಗೂ ಇಂಜಿನಿಯರ್ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಡಿಎಸ್‌ಎಸ್ ಮುಖಂಡ ಭೀಮರಾಯ ಬಳಗಾನೂರು, ಮೌನೇಶ ಬಳಗಾನೂರು, ಸಿದ್ದಪ್ಪ ಹೂವಿನಭಾವಿ, ಮರಿಸ್ವಾಮಿ ಬೆನಕನಾಳ, ಅಮರಪ್ಪ ಡಬ್ಬೇರಮಡು ಉಪಸ್ಥಿತಿರಿದ್ದರು.
