ಉದಯವಾಹಿನಿ,ಶಿಡ್ಲಘಟ್ಟ: ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆಯನ್ನು ಬುಧವಾರ ಚುನಾವಣೆ ನಡೆಯಿತು.
ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ನಿಗದಿಯಾಗಿತ್ತು. ಗ್ರಾಮ ಪಂಚಾಯಿತಿಯ ಒಟ್ಟು 14 ಸದಸ್ಯರನ್ನು ಹೊಂದಿದ್ದು, ಅಧ್ಯಕ್ಷ ಸ್ಥಾನಕ್ಕೆ ಎಡಿಎಸ್ ಬೆಂಬಲಿತ ಶ್ರೀಲತಾ, ಹಾಗೂ ಕಾಂಗ್ರೆಸ್ ಬೆಂಬಲಿತ ಮುನಿರತ್ನಮ್ಮ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ರತ್ನಮ್ಮ ಹಾಗೂ ಜೆಡಿಎಸ್ ಬೆಂಬಲಿತ ವೆಂಕಟೇಶಪ್ಪ ನಾಮಪತ್ರ ಸಲ್ಲಿಸಿದ್ದರು.ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ತಲಾ ಎರಡು ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದರು ಯಾವುದೇ ನಾಮಪತ್ರ ಹಿಂಪಡೆಯದಿದ್ದರಿಂದ ಚುನಾವಣೆ ನಡೆಸಲಾಯಿತು. ಚುನಾವಣೆಯಲ್ಲಿ ಶ್ರೀಲತಾ ಅವರು 8 ಮತಗಳು ಪಡೆದುಕೊಂಡು ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾಗಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ರತ್ನಮ್ಮ ಅವರು 8 ಮತಗಳು ಪಡೆದುಕೊಂಡು ಜಯಗಳಿಸಿದ್ದಾರೆ ಎಂದು ಚುನಾವಣಾ ಅಧಿಕಾರಿ ಇಓ ಮುನಿರಾಜು ಘೋಷಣೆ ಮಾಡಿದರು.ನೂತನ ಅಧ್ಯಕ್ಷೆ ಮಾತನಾಡಿ ಸದಸ್ಯರ ಒಮ್ಮತದಿಂದ ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಪಂಚಾಯತಿ ಮಟ್ಟದ ಮೂಲಭೂತ ಸೌಕರ್ಯಗಳಾದ ನೀರು ಸ್ವಚ್ಛತೆ ಬೀದಿ ದೀಪ ನೈರ್ಮಲ್ಯವನ್ನು ಕಾಪಾಡುವುದರೊಂದಿಗೆ ಸಾರ್ವಜನಿಕರಿಗೆ ಸಮಗ್ರ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತೇನೆ ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಪ್ರಭಾರಿ ಪಿಡಿಒ ಗೋಪಾಲ್, ಕಾರ್ಯದರ್ಶಿ ವೆಂಕಟರೋಣಪ್ಪ,ಕಾಂಗ್ರೆಸ್ ಮುಖಂಡ ರಾಜೀವ್ ಗೌಡ,ಸಹನಾ ರಾಜೀವ್ ಗೌಡ,ಅನಪ್ಪನಹಳ್ಳಿ ಕೃಷ್ಣಾರೆಡ್ಡಿ, ಡಿಸಿಸಿ,ಬ್ಯಾಂಕ್ ಉಪಾಧ್ಯಕ್ಷ ನಾಗರಾಜು, ಕೆ. ಆನಂದ್, ಡಿ.ವಿ. ಶ್ರೀರಂಗಪ್ಪ, ಶಿವಾರೆಡ್ಡಿ, ಟಿ.ಕೆ ಅರುಣ್ ಕುಮಾರ್, ಟಿ.ಕೆ ಹರೀಶ್, ಎನ್. ಮುನಿಯಪ್ಪ, ಗ್ರಾ ಪಂ ಸದಸ್ಯರಾದ ಪ್ರಭಾವತಮ್ಮ, ದ್ಯಾವಪ್ಪ, ಕೃಷ್ಣಪ್ಪ, ರಾಜಣ್ಣ, ಗಂಗರತ್ನಮ್ಮ, ಭಾಗ್ಯಮ್ಮ, ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *

error: Content is protected !!