
ಉದಯವಾಹಿನಿ ರಾಮನಗರ: ರಾಜ್ಯದಲ್ಲಿ ಪ್ರಥಮ ಬಾರಿಗೆ ತ್ಯಾಜ್ಯ ಇಂಧನ ಘಟಕವನ್ನು ಬಿಡದಿಯಲ್ಲಿ ಆರಂಭಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ತಿಳಿಸಿದರು. ಬಿಡದಿ ಬಳಿಯ ಕೆಪಿಸಿಎಲ್ ಘಟಕಕ್ಕೆ ಬುಧವಾರ ಭೇಟಿ ನೀಡಿ ತ್ಯಾಜ್ಯ ಇಂಧನ ಘಟಕ ಪರಿಶೀಲಿಸಿ ಮಾತನಾಡಿದರು.ಪ್ರಥಮ ಬಾರಿಗೆ ರಾಜ್ಯದಲ್ಲಿ ತಾಜ್ಯ ಇಂಧನ ಘಟಕ ಬಿಡದಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಿರ್ಮಾಣವಾಗುತ್ತಿದೆ.ಅಕ್ಟೋಬರ್ ತಿಂಗಳಲ್ಲಿ ಕಾರ್ಯಾರಂಭ ಆಗಲಿದೆ ಎಂದರು.15 ಎಕರೆ ವಿಸ್ತೀರ್ಣ ದಲ್ಲಿ ನಿರ್ಮಾಣಗೊಳ್ಳುತ್ತಿದೆ.ಇದು ಸುಮಾರು 280 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. 600 ಟನ್ ಸಾಮರ್ಥ್ಯ ಇರೋ ಇಂಧನ ಘಟಕ ಇದಾಗಿದೆ. ಇಲ್ಲಿ 11.5 ಮೆಗಾ ವ್ಯಾಟ್ ಪವರ್ ಉತ್ಪಾದನೆಯಾಗುತ್ತದೆ ಎಂದು ತಿಳಿಸಿದರು.ಪ್ರತಿ ದಿನ ಬೆಂಗಳೂರಿನಲ್ಲಿ 6 ಸಾವಿರ ಟನ್ ಕಸ ಉತ್ಪಾದನೆಯಾಗುತ್ತದೆ.ಏಳು ಪ್ಲಾಂಟ್ ನಲ್ಲಿ ಹಸಿ ಕಸವನ್ನು ಕಂಪ್ರೆಸ್ ಮಾಡಲಾಗುತ್ತಿದೆ.ಬಂಡೂರು, ಟೆರಾಫಾರಂನಲ್ಲಿ ಅವೈಜ್ಞಾನಿಕವಾಗಿ ಕಸ ಸುರಿಯಲಾಗುತ್ತಿತು ಎಂದರು.
ಹಿಂದೆ ನಾನು ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿದ್ದ ವೇಳೆ ಈ ಬಗ್ಗೆ ಚಿಂತಿಸಲಾಗಿತ್ತು.ನಂತರ ವಿದೇಶಿ ಪ್ರವಾಸ ಮಾಡಿ ಅಲ್ಲಿನ ರಾಜ್ಯ ಇಂಧನ ಘಟಕಗಳನ್ನು ಪರಿಶೀಲಿಸಲಾಗಿತು.ಬಿಬಿಎಂ, ಕೆಪಿಟಿಸಿಎಲ್ ಸಹೋಯೋಗದೊಂದಿಗೆ ಸ್ಥಾವರ ನಿರ್ಮಿಸುತ್ತಿದ್ದೆವೆ. ವಿದೇಶಿ ತ್ಯಾಜ್ಯ ವಿದ್ಯುತ್ ಘಟಕಕ್ಕಿಂತಲೂ ಇನ್ನು ಚೆನ್ನಾಗಿ ಘಟಕವನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಇಲ್ಲಿ ಕಸದ ವಾಸನೆ ಬರುವುದಿಲ್ಲ.ಪ್ರಾಯೋಗಿಕವಾಗಿ ಒಂದು ಸ್ಥಾವರಕ್ಕೆ ಆರಂಭವಾಗಲಿದೆ.ವಿದ್ಯುತ್ ಉತ್ಪಾದನಾ ಸಾಮರ್ಥ್ಯ ತಿಳಿದು ಮತ್ತಷ್ಟು ಸ್ಥಾವರ ನಿರ್ಮಾಣ ಮಾಡುವ ಯೋಜನೆ ಇದೆ.
ಎಲ್ಲ ಜಿಲ್ಲೆಯ ಕಸದ ಸಮಸ್ಯೆಯನ್ನು ಈ ರೀತಿ ನಿವಾರಣೆ ಆಗುತ್ತದೆ ಎಂದು ತಿಳಿಸಿದರು.ಪ್ರತಿ ಯುನಿಟ್ ಗೆ 8 ರೂ ಖರ್ಚಾಗಲಿದೆ. ,ಪ್ರತಿದಿನ 2.76 ಲಕ್ಷ ಯೂನಿಟ್ ಉತ್ಪಾದನೆಯಾಗಲಿದೆ.
ಇದು ಪೈಲೆಟ್ ಪ್ರಾಜೆಕ್ಟ್ ಆಗಿ ಮಾಡಿದ್ದಾರೆ. ಸ್ಥಳೀಯ ಕಸಕ್ಕೂ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಪಂಕಜ್ ಕುಮಾರ್ ಪಾಂಡೆ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ರಾಮನಗರ ಬೆಸ್ಕಾಂ ಮುಖ್ಯ ಅಧ್ಯಕ್ಷರಾದ ಶಿವಪ್ಪ ಹಾಗೂ ಮುಂತಾದ ಅಧಿಕಾರಿಗಳು ಹಾಜರಿದ್ದರು.
