
ಉದಯವಾಹಿನಿ ಕೆ.ಆರ್.ಪೇಟೆ: ಕಾಯಕವೇ ಕೈಲಾಸ ಎಂಬ0ತೆ ಆರೋಗ್ಯ ಇಲಾಖೆಯಲ್ಲಿ ಸುಧೀರ್ಘವಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಅನುಸೂಯ ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅಭಿಪ್ರಾಯಪಟ್ಟರು. ಅವರು ಪಟ್ಟಣದ ದುಂಡಶೆಟ್ಟಿಲಕ್ಷö್ಮಮ್ಮ ಸಾರ್ವಜನಿಕ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳೊಂದಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ನಿವೃತ್ತರಾಗುತ್ತಿರುವ ಅನುಸೂಯರವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದರು. ಸರ್ಕಾರಿ ನೌಕರ ತಾನು ಸೇವೆಯಲ್ಲಿ ಇರುವ ಸಮಯದಲ್ಲಿ ತನಗೆ ವಹಿಸಿದ ಕೆಲಸಗಳನ್ನು ನಿಷ್ಠೆಯಿಂದ ಹಾಗೂ ಪ್ರಾಮಾಣಿಕತೆಯಿಂದ ಮಾಡಿದಾಗ ಮೇಲಿನ ಅಧಿಕಾರಿಗಳಿಗೆ ಹಾಗೂ ತಾನು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಕ್ಕೂ ಉತ್ತಮ ಹೆಸರು ಬರುತ್ತದೆ. ಒಬ್ಬ ಒಳ್ಳೆಯ ಕೆಲಸಗಾರ ಅನುಭವಿ ಆಡಳಿತಗಾರನಿದ್ದಂತೆ. ಆದ್ದರಿಂದ ನೌಕರರು ಕೆಲಸದಲ್ಲಿ ಶ್ರದ್ದೆ, ಆಸಕ್ತಿ, ಸಮಯಪಾಲನೆ ಮುಂತಾದುವುಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಕೋವಿಡ್ ಸಮಯದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿ ಸಂತೇಬಾಚಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡ ಡಾ,ಮಧೂಸೂಧನ್ ರವರನ್ನು ಹಾಗೂ ನೂತನ ತಾಲ್ಲೂಕು ಆರೋಗ್ಯಾಧಿಕಾರಿ ನೇಮಕವಾಗಿರುವ ಡಾ.ಅಜಿತ್‌ರವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಶಿಧರ್, ತಜ್ಞ ವೈದ್ಯರುಗಳಾದ ಡಾ.ರವಿ. ಡಾ.ಶ್ರೀಕಾಂತ್, ಡಾ.ಗಿರೀಶ್, ಡಾ.ಪುಟ್ಟಸ್ವಾಮಿ, ಡಾ.ದರ್ಶನ್, ಡಾ.ರಾಧ, ಡಾ.ಕೋಮಲ್, ಫಾರ್ಮಸಿ ಅಧಿಕಾರಿಗಳಾದ ಸರ್ಮದ್ ಗಫಾರಿ, ಸತೀಶ್‌ಬಾಬು, ಶುಶ್ರೂಶ್ರಕ ಕಿಶೋರ್, ಶೋಭ, ಕಲ್ಪನ, ಮಂಗಳ, ಅಶ್ವಿನಿ, ಆದಿಲ್, ಸೇರಿದಂತೆ ಹಲವರಿದ್ದರು.
