
ಉದಯವಾಹಿನಿ ಮುದ್ದೇಬಿಹಾಳ ; ಮುದ್ದೇಬಿಹಾಳ ತಾಲ್ಲೂಕಿನ ಹರಿಂದ್ರಾಳದಿಂದ ಯರಝರಿ ಕಡಗೆ ಹೋಗುವ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆ ಒಡೆದ ಪರಿಣಾಮ ರೈತರ ಜಮೀನಿಗೆ ನೀರು ನುಗ್ಗಿದ ಘಟನೆ ಬುಧವಾರ ನಡೆದಿದೆ, ಹರಿಂದ್ರಾಳ ರೈತ ಸಾಬಣ್ಣ ಬಿರಾದಾರ ಬೆಳೆದ ಸಜ್ಜೆ ಬೆಳೆ ಸಂಪೂರ್ಣ ಕೊಚ್ಚಿಕೊಂಡು ಹಾನಿಯಾಗಿದೆ, ಹರಿಂದ್ರಾಳ ಗ್ರಾಮದಿಂದ 26.4ರಲ್ಲಿ ಬರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಈ ಎಡದಂಡೆ ಕಾಲುವೆ ನಿರ್ಮಾಣ ಮಾಡಿ 25 ವರ್ಷವಾಗಿದೆ ಈ ಕಾಲುವೆ ನವೀಕರಣ ಕ್ಕೆ ಹಿಂದಿನ ಸರಕಾರ ಟೆಂಡರ್ ಕರೆದು ಗುತ್ತಿಗೆದಾರರಿಗೆ ಕೆಲಸವನ್ನು ವಹಿಸಿಕೂಟ್ಟಿದ್ದು ತ್ವರಿತವಾಗಿ ನವೀಕರಣ ಕಾರ್ಯ ಮಾಡದ ಕಾರಣ ಕಾಲುವೆ ಒಡೆದು ನಮ್ಮ ಜಮೀನಗೆ ನೀರು ನುಗ್ಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆರೈತರಾದ ತಾಪಂ ಮಾಜಿ ಸದಸ್ಯ ಯಮನಪ್ಪ ಹಾಲವಾರ,ಕಾಮೇಶ ನಾಗರಬೆಟ್ಟಸಂಗಪ್ಪ ಬಿರಾದಾರ, ಬಸನಗೌಡ ಪಾಟೀಲ್, ನಾಗಯ್ಯ ಹಿರೇಮಠ ಮಾತನಾಡಿ ಕಾಲುವೆ ನವೀಕರಣ ಮಾಡದೆ ಇರುವುದೆ ಕಾಲುವೆ ಒಡೆಯಲು ಕಾರಣವಾಗಿದೆ ಕಾಲುವೆ ನೀರು ಜಮೀನು ಗೆ ನುಗ್ಗಿದ ಪರಿಣಾಮ ಬೆಳೆ ಪರಿಹಾರಕ್ಕೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ, ಹರಿಂದ್ರಾಳ ಭಾಗದ ರೈತರಾದ ಸಂಗಪ್ಪ ಚಂಡಕಿ,ಕಮಲಪ್ಪ ವಾಲಿಕಾರ,ಶಂಕ್ರಪ್ಪ ವಾಲಿಕಾರ ಅವರ ಹೊಲಗಳಿಗೆ ಸಹ ನೀರು ನುಗ್ಗಿ ಬೆಳೆದ ಹಾನಿಯಾಗಿದೆಈ ಕುರಿತು ಗ್ರಾಮ ಲೈಕ್ಕಾಧಿಕಾರಿ ಜೈನಾಬಿ ಕಮತಗಿ ತಾಲೂಕ ಆಡಳಿತಕ್ಕೆ ಹರಿಂದ್ರಾಳ ಗ್ರಾಮದಿಂದ ಯರಝರಿ ಗೆ ಹೋಗುವ ಕಾಲುವೆ ಒಡೆದ ಪರಿಣಾಮ ಅಂದಾಜು 40 ಎಕರೆ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ ಎಂದು ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದಾರೆ
ಕಾಲುವೆ ತಾತ್ಕಾಲಿಕ ದುರಸ್ತಿ; ಕಾಲುವೆ ಒಡೆದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕೃಷ್ಣ ಭಾಗ್ಯ ಜಲ ನಿಗಮದ ಇಇ ಆರ್ ಎಲ್ ಹಳ್ಳೂರ,ಎಇಇ ಅಶೋಕ ಬಿರಾದಾರ, ಅಬೂಬಕರ್ ಬಾಗವಾನ,ಸ್ಥಳಕ್ಕೆ ತೆರಳಿ ತಕ್ಷಣ ತಾತ್ಕಾಲಿಕವಾಗಿ ಮಣ್ಣು ಕಲ್ಲು ಹಾಕಿ ಜಮೀನುಗಳಿಗೆ ನೀರು ಹರಿಯುವಿಕೆಯನ್ನು ತಡೆಯಲು ಕ್ರಮ ಕೈಗೂಂಡಿದ್ದಾರೆ
ಸದ್ಯಕ್ಕೆ ಕಾಲುವೆಯ ನೀರಿನ ಹರಿವು ಸ್ಥಗಿತಗೂಳಿಸಲಾಗಿದ್ದು ಒಡೆದಿರುವ ಕಾಲುವೆ ದುರಸ್ತಿ ಮಾಡಲಾಗುತ್ತದೆ, ಕಾಲುವೆಯ ರೀಮಾಡಲಿಂಗ್ ಕಾರ್ಯ ನೀರು ಹರಿಸುವಿಕೆ ಸ್ಥಗಿತಗೂಳಿಸಿದ ನಂತರ ನಿರ್ವಹಣೆ ಮಾಡಲಾಗುತ್ತದೆ ; ಅಶೋಕ ಬಿರಾದಾರ ಕೆಬಿಜೆಎನ್ಎಲ್ ,ಎಎಲ್ಬಿಸಿಎಇಇ.
ಘಟನೆಗೆ ಸಂಬಂಧಿಸಿದಂತೆ ಕೃಷ್ಣ ಭಾಗ್ಯಜಲನಿಗಮದ ಇಇ ಆರ್ ಎಲ್ ಹಳ್ಳೂರ ಎಂಬ್ಯಾಂಕ್ ಮೆಂಟ್ ( ಎರಿ ಕಾಲುವೆ) ಕಾಲುವೆಯಿಂದ ಜಮೀನಿಗೆ ನೀರು ಹರಿಸಲು ರೈತರು ಪೈಪ್ ಹಾಕಿದ ಕಾರಣದಿಂದಾಗಿ ಈ ಘಟನೆ ಸಂಭವಿಸಿದೆ ಪೈಪ್ ಹಾಕುಲ ಮಣ್ಣಿನಿಂದ ಆವೃತವಾದ ಎಂಬ್ಯಾಕ್ ಮೆಂಟ್ ಕಾಲುವೆ ಅಗೆದು ಪೈಪುಗಳು ಹಾಕಲಾಗಿ ನೀರು ಸತತವಾಗಿ ಸೂರಿದ ಪರಿಣಾಮ ಕಾಲುವೆ ಒಡೆದು ಹೋಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ ಅವರು ಸದ್ಯ ತಾತ್ಕಾಲಿಕ ಕಾಲುವೆ ದುರಸ್ತಿ ಮಾಡಲಾಗಿದೆ ಕಾಲುವೆ ನವೀಕರಣ ಕಾರ್ಯ ಸಹ ಕಾಲುವೆಗೆ ನೀರು ಸ್ಥಗಿತ ನಂತರ ಮಾಡಲಾಗುತ್ತದೆ ಎಂದರು ರೈತರ ಬೆಳೆ ಪರಿಹಾರದ ಕುರಿತು ಅವರು ಉತ್ತರವನ್ನು ನೀಡಲಿಲ್ಲ , ಕಾಲುವೆಗೆ ಮೇಲೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ತಿರುಗಾಡುತ್ತಿರಬೇಕು ಕಾಲುವೆಯ ಸ್ಥಿತಿ ಹಾಗೂ ಎಲ್ಲಿ ಎಂಬ್ಯಾಕ್ ಮೆಂಟ್ ಕಾಲುವೆ ಇದೆ ಆ ಭಾಗದಲ್ಲಿ ರೈತರು ಪೈಪ್ ಹಾಕದಂತೆ ಎಚ್ಚರಿಕೆ ನೀಡಬೇಕು ಮತ್ತು ಸೂಚನಾ ಫಲಕಗಳನ್ನು ಸಹ ಹಾಕಬೇಕು.
