ಉದಯವಾಹಿನಿ,ಹೈದರಾಬಾದ್: ಮಧ್ಯರಾತ್ರಿ ತನ್ನ ಗೆಳತಿಯ ಮನೆಗೆ ರಹಸ್ಯವಾಗಿ ಬಂದು ಟೆರೇಸ್ ಮೇಲೆ ಕುಳಿತು ಪಿಜ್ಜಾ ತಿನ್ನುತ್ತಿದ್ದ ಯುವಕನೊಬ್ಬ ಕಟ್ಟಡದಿಂದ ಹಾರಿ ಸಾವನ್ನಪ್ಪಿದ ಘಟನೆ ಹೈದರಾಬಾದ್‌ನ ಬೋರಬಂಡಾದಲ್ಲಿ ನಡೆದಿದೆ. ಮೃತರನ್ನು ಬೇಕರಿ ಕೆಲಸಗಾರ ಮುಹಮ್ಮದ್ ಶುಹೈಬ್ (೧೯) ಎಂದು ಗುರುತಿಸಲಾಗಿದೆ. ಶುಹೈಬ್ ಮತ್ತು ಯುವತಿ ಕಳೆದ ಕೆಲವು ತಿಂಗಳಿಂದ ಸ್ನೇಹಿತರಾಗಿದ್ದರು. ಶುಹೈಬ್ ಬೇಕರಿ ಕೆಲಸಗಾರನಾಗಿದ್ದರಿಂದ ಗೆಳತಿ ಶುಹೈಬ್ ಗೆ ಪಿಜ್ಜಾ ತರುವಂತೆ ಒತ್ತಾಯಿಸಿದ್ದಳು.
ಗೆಳತಿಯ ಕೋರಿಕೆಯಂತೆ ಶುಹೈಬ್ ಪಿಜ್ಜಾ ತಂದಿದ್ದ ಶುಹೈಬ್ ಮತ್ತು ಬಾಲಕಿ ಟೆರೇಸ್ ಮೇಲೆ ಕುಳಿತು ಪಿಜ್ಜಾ ತಿನ್ನುತ್ತಿದ್ದರು. ಆಗ ಅಚಾನಕ್ ಗೆಳತಿಯ ತಂದೆ ಟೆರೇಸ್‌ಗೆ ಬಂದಾಗ ಗಾಬರಿಗೊಂಡ ಶುಹೈಬ್ ಅವರಿಂದ ಬಜಾವ ಆಗಲು ನಾಲ್ಕು ಅಂತಸ್ತಿನ ಕಟ್ಟಡದ ಮೇಲಿಂದ ಕೆಳಗೆ ಹಾರಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಕಂಡು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಬದುಕಿಸಲು ಪ್ರಯತ್ನಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
ಈ ಘಟನೆ ಕುರಿತು ಶುಹೈಬ್ ತಂದೆ ಶೌಕತ್ ಅಲಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
