
ಉದಯವಾಹಿನಿ ಇಂಡಿ : ಇಂಡಿ ತಾಲೂಕಿನ 38 ಗ್ರಾ.ಪಂ ಗಳಲ್ಲಿ ನನ್ನ ಮಣ್ಣು – ನನ್ನ ದೇಶ ಅಭಿಯಾನ ಯಶಸ್ವಿಗೊಳಿಸಲು ಪಿಡಿಒ ಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಾ.ಪಂ ಇಒ ಸುನೀಲ ಮುದ್ದೀನ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿ ಗ್ರಾ.ಪಂ ಗಳಿಂದ ಮಣ್ಣು ಸಂಗ್ರಹಿಸಿ ಅಗಸ್ಟ ೧೫ ರೊಳಗೆ ಇಂಡಿ ತಾ.ಪಂ ಗೆ ತರಬೇಕು. ಇಲ್ಲಿಂದ ಜಿಲ್ಲೆಗೆ ಕಳುಹಿಸಿ ಕೊಡಲಾಗುವದು.ಕಳಶದಲ್ಲಿ ತಂದಿರುವ ಮಣ್ಣನ್ನು ರಾಜ್ಯದ ಮೂಲಕ ದಿಲ್ಲಿಗೆ ಕಳುಹಿಸಿ ಕೊಡುವ ವ್ಯವಸ್ಥೆ ಜಿಲ್ಲಾ ಮಟ್ಟದಲ್ಲಿ ಮಾಡಿದ್ದಾರೆ ಎಂದರು.
ಶಿಲಾಫಲಕ, ಸಮರ್ಪಣೆ, ಮಕ್ಕಳಿಗೆ ನಾನಾ ಸ್ಪರ್ಧೆಗಳು, ವೀರರಿಗೆ ಗೌರವ ಸಮರ್ಪಣೆ, ರಾಷ್ಟç ಧ್ವಜ ವಂದನೆ ಸೇರಿದಂತೆ ನಾನಾ ಕಾರ್ಯಕ್ರಮಗಳು ಪ್ರತಿ ಗ್ರಾ.ಪಂ ಗಳಲ್ಲಿ ನಡೆಯುತ್ತದೆ.
ವಸುಧಾ ಕಾರ್ಯಕ್ರಮದ ಅಡಿಯಲ್ಲಿ ಎಲ್ಲ ಗ್ರಾ.ಪಂ ಅಡಿಯಲ್ಲಿ 100 ಸಸಿಗಳನ್ನು ನೆಟ್ಟು ಪೋಷಿಸಲು ಕ್ರಮ ವಹಿಸಲಾಗಿದೆ. ಅಮೃತ ಸರೋವರ ಗ್ರಾ.ಪಂ,ಗ್ರಾ.ಪo ಕಾರ್ಯಾಲಯ ಆವರಣ, ಸರಕಾರಿ ಶಾಲೆ ಆವರಣದಲ್ಲಿ ಕಾರ್ಯಕ್ರಮ ನಡೆಸಲಾಗುವದು ಎಂದರು.
ನಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ಜೀವ ವೈವಿದ್ಯ ಹಾಗೂ ಔಷದೀಯ ಗುಣವುಳ್ಳ ೭೫ ಸಸಿಗಳನ್ನು ಅಮೃತ ಸರೋವರ ಸ್ಥಳಗಳಲ್ಲಿ ನೆಟ್ಟು ಅಮೃತ ವಾಟಿಕೆಯನ್ನು ಅಭಿವೃದ್ಧಿ ಪಡಿಸುವದು, ಮತ್ತು ಮಾತೃ ಭೂಮಿಗೆ ಗೌರವ ಸಲ್ಲಿಸಲಾಗುವದು.ಸಿದರಾಯ ಬಿರಾದಾರ ಪಿಡಿಒ ಬಬಲಾದ
ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವದಾಗಿ ಪ್ರಮಾಣ, ದೇಶದ ಏಕತೆ ಮತ್ತು ಒಕ್ಕಟ್ಟಿಗಾಗಿ ಶ್ರಮಿಸುವ ಪ್ರಮಾಣ ಮಾಡುವದಾಗಿ ಶಪಥ ಮಾಡಿಸುತ್ತೇವೆ.ಸಿ.ಜಿ.ಪಾರೆ ಪಿಡಿಒ ಚವಡಿಹಾಳ
ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮವನ್ನು ಯಶಸ್ವುಗೊಳಿಸಲು ಗ್ರಾ.ಪಂ ಗಳು ಮಹಾತ್ಮಾಗಾಂಧಿ ನರೇಗಾ ಯೋಜನೆ, ರಾಷ್ಟಿಯ ಜೀವನೋಪಾಯ ಯೋಜನೆ,ರಾಷ್ಟಿಯ ತೋಟಗಾರಿಕೆ ಯೋ ಜನೆ ಹಾಗು ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತ ಇಲಾಖೆ,ಯುವ ಜನ ಸೇವಾ ಯೋಜನೆ,ರಾಷ್ಟಿಯ ಸೇವಾ ಯೋಜನೆ,ನೆಹರು ಯುವಕ ಕೇಂದ್ರ ಸಹಯೋಗದಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕ್ರಮ ವಹಿಸಲಾಗಿದೆ.
ರಾಹುಲ್ ಶಿಂಧೆ ಸಿಇಒ ವಿಜಯಪುರ
ಅ. 15 ರಂದು ಸ್ವಾತಂತ್ಯೋತ್ಸದ ಕಾರ್ಯಕ್ರಮದಲ್ಲಿ ಗ್ರಾ.ಪಂ ವ್ಯಾಪ್ತಿಯಲ್ಲಿ ಮಡಿದ ವೀರ ಸೇನಾನಿಗಳ ಕುಟುಂಬದವರು, ಬದುಕಿರುವ ಸೇನಾನಿಗಳು, ಸ್ವಾತಂತ್ರö್ಯ ಹೋರಾಟಗಾರರು,ನಿವೃತ್ತ ರಕ್ಷಣಾ ಸಿಬ್ಬಂದಿ ಗಣ್ಯರಿಂದ ಧ್ವಜಾರೋಹಣ ಮಾಡಿಸಲು ಗ್ರಾ.ಪಂ ಗೆ ತಿಳಿಸಲಾಗಿದೆ.ಸುನೀಲ ಮದ್ದೀನ ಇಒ ಇಂಡಿ.
