ಉದಯವಾಹಿನಿ,ಇಂಫಾಲ: ಈಶಾನ್ಯ ರಾಜ್ಯ ಮಣಿಪುರದಲ್ಲಿ ಸರ್ಕಾರ ಯೋಜಿಸಿರುವ ಸ್ವಾತಂತ್ರ್ಯ ದಿನಾಚರಣೆ ಬಹಿಷ್ಕರಿಸುವಂತೆ ಉಗ್ರರು ಕರೆ ನೀಡಿರುವ ಹಿನ್ನೆಲೆಯಲ್ಲಿ ೫ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ.
ಹಿಂಸಾಚಾರ ಪೀಡಿತ ಮಣಿಪುರದ ಐದು ಜಿಲ್ಲೆಗಳಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭದ್ರತಾ ಪಡೆಯ ಮೂಲಗಳು ತಿಳಿಸಿವೆ.
ವಾರಾಂತ್ಯದಲ್ಲಿ ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ತೌಬಾಲ್, ಬಿಷ್ಣುಪುರ್ ಮತ್ತು ಚುರಾಚಂದ್‌ಪುರ ಜಿಲ್ಲೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಪಡೆಗಳು ನಡೆಸಿದ ಜಂಟಿ ದಾಳಿಯಲ್ಲಿ ೧೨ ಶಸ್ತ್ರಾಸ್ತ್ರಗಳು ಮತ್ತು ಕೆಲವು ಮದ್ದುಗುಂಡುಗಳು ಮತ್ತು ಎಂಟು ಸ್ಫೋಟಕಗಳು ದೊರೆತಿವೆ ಎಂದು ಮಣಿಪುರ ಪೊಲೀಸರು ತನ್ನ ಅಧಿಕೃತ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಈ ಆಯುಧಗಳು ರಾಜ್ಯ ಪಡೆಗಳ ಶಸ್ತ್ರಾಸ್ತ್ರಗಳಿಂದ ಜನಸಮೂಹ ಲೂಟಿಯ ಭಾಗವಾಗಿದೆಯೇ ಎಂಬ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಮಣಿಪುರದ ಪ್ರಮುಖ ಶಸ್ತ್ರಸಜ್ಜಿತ ಉಗ್ರಗಾಮಿ ಗುಂಪುಗಳ ಸಂಘಟಿತವಾಗಿ ಸಾರ್ವತ್ರಿಕ ಮುಷ್ಕರ ಮತ್ತು ಎಲ್ಲಾ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಬಹಿಷ್ಕರಿಸಲು ವಾಡಿಕೆಯಂತೆ ಕರೆ ನೀಡಿದೆ.
ಈ ಹಿನ್ನೆಲೆಯಲ್ಲಿ ಸಾರ್ವತ್ರಿಕ ಮುಷ್ಕರ ಆಗಸ್ಟ್ ೧೫ ರಂದು ಬೆಳಿಗ್ಗೆ ೧ ರಿಂದ ಸಂಜೆ ೬.೩೦ ರವರೆಗೆ ಇರುತ್ತದೆ, ವೈದ್ಯಕೀಯ, ವಿದ್ಯುತ್, ನೀರು ಸರಬರಾಜು, ಅಗ್ನಿಶಾಮಕ ಸೇವೆ, ಮಾಧ್ಯಮ ಮತ್ತು ಧಾರ್ಮಿಕ ಆಚರಣೆಗಳಂತಹ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಅರೆಸೇನಾ ಪಡೆಗಳು ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿಯೊಂದಿಗೆ ಇಂಫಾಲ್‌ನಲ್ಲಿ ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆಯ ಪರೇಡ್‌ನ ಭಾಗವಾಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಕಳೆದ ನಾಲ್ಕೈದು ದಿನಗಳಿಂದ ಮಣಿಪುರ ಶಾಂತಿಯುತವಾಗಿವೆ, ಆದರೆ ಕೆಲವು ಗುಂಪುಗಳು ಇತರ ಜನಾಂಗೀಯ ಗುಂಪುಗಳ ಪ್ರದೇಶಗಳಿಗೆ ದಾಳಿ ಮಾಡಲು ಸ್ವಾತಂತ್ರ್ಯ ದಿನಾಚಾರಣೆಗ ಮುಂಚಿತವಾಗಿ ಪ್ರಯತ್ನ ನಡೆಸಬಹುದು ಎನ್ನುವ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕಾಂಗ್ಪೋಕ್ಪಿ, ಚುರಾಚಂದ್‌ಪುರ, ಬಿಷ್ಣುಪುರ್ ಮತ್ತು ಇಂಫಾಲ್‌ನಲ್ಲಿ ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ.
“ಬಫರ್ ಝೋನ್” ನಲ್ಲಿ, ಭದ್ರತಾ ಪಡೆಗಳು ಪರಸ್ಪರರ ಪ್ರದೇಶ ಅತಿಕ್ರಮಿಸಲು ಪ್ರಯತ್ನಿಸಬಹುದಾದ ಗುಂಪುಗಳ ಮೇಲೆ ಗಿಡುಗ ಕಣ್ಣಿಟ್ಟಿವೆ.ಶಾಂತಿಯುತ ಜಿಲ್ಲೆಗಳಲ್ಲಿ, ಹಿಂದಿನ ವರ್ಷಗಳಂತೆ ೨೨ ತುಕಡಿಗಳು ಸ್ವಾತಂತ್ರ್ಯ ದಿನಾಚರಣೆಯ ಪೂರ್ವಾಭ್ಯಾಸದಲ್ಲಿ ಭಾಗವಹಿಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!