ಉದಯವಾಹಿನಿ ಕುಶಾಲನಗರ : ಸಮಾಜದಲ್ಲಿ ಜನರಿಗೆ ಮೌಢ್ಯ ಬಿತ್ತುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು, ಇದನ್ನು ತಡೆಯಬೇಕಾದರೆ ವೈಜ್ಞಾನಿಕ ಮನೋಭಾವನೆ ಮತ್ತು ಮೌಢ್ಯಾಚರಣೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೆಸರಾಂತ ವಿಚಾರವಾದಿಯೂ ಆದ ಅಖಿಲ ಭಾರತ ವಿಚಾರವಾದಿ ಒಕ್ಕೂಟದ ಅಧ್ಯಕ್ಷ ಪ್ರೊ|| ನರೇಂದ್ರನಾಯಕ್ ಹೇಳಿದರು.ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಹಾಗೂ ಅಖಿಲ ಭಾರತ ವಿಚಾರವಾದಿ ಒಕ್ಕೂಟ. ಸುಂಟಿಕೊಪ್ಪ ಜೆಸಿಐ, ಕುಶಾಲನಗರ ಕಾವೇರಿ ಜೆಸಿಐ ಹಾಗೂ  “ಮೌಢ್ಯದ ವಿರುದ್ಧ ವಿಜ್ಞಾನ  ನಡಿಗೆ” ಎಂಬ  ಕಾರ್ಯಕ್ರಮದಡಿ ವೈಜ್ಞಾನಿಕ ಮನೋಭಾವನೆ ಕುರಿತು ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮ ದಲ್ಲಿ ಮಾತನಾಡಿದರು. ಸಮಾಜದಲ್ಲಿ ಹೆಚ್ಚುತ್ತಿರುವ ಕೋಮುವಾದ ಹಾಗೂ ಮೌಢ್ಯತೆಯನ್ನು ಹತ್ತಿಕ್ಕಬೇಕಾದಲ್ಲಿ ಯುವ ಜನರು ಮುಂದೆ ಬಂದು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಅಂಗೈಯಲ್ಲಿ ಮತ್ತು ಬಾಯಿಯೊಳಗೆ ಕರ್ಪೂರ ಉರಿಸುವುದು,
ಶೂನ್ಯದಿಂದ ಬೂದಿ ಸೃಷ್ಠಿಸುವುದು,  ಬರಿಗೈಯಿಂದ ಚಿನ್ನದ ಉಂಗುರ ಮತ್ತು ಹೊಸ ನೋಟು ಸೃಷ್ಠಿಸುವುದು ಮತ್ತಿತರ ಪ್ರಾತ್ಯಕ್ಷಿಕೆಗಳ ಮೂಲಕ ವಿವಿಧ  ಪವಾಡವನ್ನು ಬಿಡಿಸಿ ಅದರ ಹಿಂದಿರುವ ರಹಸ್ಯ ಬಯಲಿಗೆಳೆಯುವ ಕಾರ್ಯ ಮಾಡಿದರು. ಅಧ್ಯಕ್ಷತೆ ವಹಿಸಿದ್ದಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್  ವೈಜ್ಞಾನಿಕ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ವಿಜ್ಞಾನ ಪರಿಷತ್ತು ವತಿಯಿಂದ ಇಂತಹ  ವೈಜ್ಞಾನಿಕ ಪ್ರಜ್ಞೆ ಬೆಳೆಸುವ ವೈವಿಧ್ಯ ಕಾರ್ಯಕ್ರಮ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಹೋಟೆಲ್ ಮತ್ತು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಎನ್.ನಾಗೇಂದ್ರಪ್ರಸಾದ್ ಮಾತನಾಡಿದರು.ಜಿಲ್ಲಾ ವಿಜ್ಞಾನ ಪರಿಷತ್ ಸಮಿತಿಯ ನಿರ್ದೇಶಕ ಎಂ.ಎನ್.ವೆಂಕಟನಾಯಕ್ , ಪವಾಡಗಳ ಹಿಂದಿರುವ ವೈಜ್ಞಾನಿಕ ಕಾರಣಗಳ ಕುರಿತು ವಿವರಿಸಿದರು.
ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್, ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಕೆ.ಎಸ್.ನಾಗೇಶ್, ಜಿಲ್ಲಾ ವಿಜ್ಞಾನ ಪರಿಷತ್ತಿನ ಸಹ ಕಾರ್ಯದರ್ಶಿ ಜಿ.ಶ್ರೀಹರ್ಷ, ವಿಜ್ಞಾನ ಪರಿಷತ್ ಸದಸ್ಯರಾದ ಕೆ.ಎಸ್.ಮಹೇಶ್,  ಎನ್.ಕೆ.ಮಾಲಾದೇವಿ, ಮಂಗಳೂರಿನ ವಿಚಾರವಾದಿ ಮಯೂರಶೆಟ್ಟಿ,ಅಮೇರಿಕಾದ ವೈಚಾರಿಕ ಚಿಂತಕ ಆಸ್ಟಿನ್ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!