
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ಜೇಸ್ಕಾಂ ಗ್ರಾಹಕರ ಕುಂದುಕೊರತೆ ನಿವಾರಿಸುವ ಸಭೆ ಅ.19ರಂದ್ದು ಬೆಳಿಗ್ಗೆ 11ಗಂಟೆಗೆ ಪಟ್ಟಣದ ಜೇಸ್ಕಾಂ ಕಛೇರಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು ಗ್ರಾಹಕರು ಸಭೆಗೆ ಆಗಮಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಜೇಸ್ಕಾಂ ಎಇಇ ಸುರೇಶ ಬಾಬು ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು,ಕುಂದುಕೊರತೆ ಸಭೆ ಹಾಗೂ ಕಾರ್ಯಕ್ಷಮತೆಯ ಗುಣಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮ ಮತ್ತು ಪ್ರಚಾರವನ್ನು ಸೇಡಂ ಜೇಸ್ಕಾಂ ಇಇ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದೆ ಎಂದು ತಿಳಿಸಿದ್ದಾರೆ.
