
ಉದಯವಾಹಿನಿ ಕುಶಾಲನಗರ:- ಕೊಡಗು ಜಿಲ್ಲಾ ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಅವರ ಮನೆಯ ಮೇಲೆ ಬೆಳಿಗ್ಗೆ ನಾಲ್ಕು ಗಂಟೆಗೆ SP ಸುರೇಶ್ ಬಾಬು, ಲೋಕಾಯುಕ್ತ DYSP ಎಂಎಸ್ ಪವನ್ ಕುಮಾರ್, ಇನ್ಸ್‌ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆ ಸಲಾಯಿತು. ಈ ಸಂದರ್ಭ ಇವರ ಮನೆಯಲ್ಲಿ 11.5 ಲಕ್ಷ ನಗದು ಮತ್ತು 385 ಗ್ರಾಂ ಚಿನ್ನಾಭರಣ ಹಾಗೂ 350 ಗ್ರಾಂ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ. ಜಿಲ್ಲಾಧಿಕಾರಿ ಮನೆಯ ಸಮೀಪವಿರುವ ಎಂ.ಡಿ.ಸಿ. ನಂಜುಂಡೇಗೌಡರ ಮನೆಯಲ್ಲಿ ಇನ್ನೂ ಶೋಧ ಕಾರ್ಯನಡೆಯುತ್ತಿದ್ದು. ಪಿರಿಯಾಪಟ್ಟಣ ತಾಲೂಕಿನ ಮಾಕನಳ್ಳಿಯಲ್ಲಿ ರುವ ಮಾವನ ಮನೆ ಮೈಸೂರಿನಲ್ಲಿರೋ ಭಾವ ಮೈದನ ಮನೆಯಲ್ಲೂ ಶೋಧ ಕಾರ್ಯ ನಡೆಯುತ್ತಿದೆ.
