ಉದಯವಾಹಿನಿ,ದೇವದುರ್ಗ: ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜನ ಜೌಷಧ್ಯ ಅಂಗಡಿ ಮುಂಚಿ ಎರಡು ತಿಂಗಳವಾಗಿದೆ. ಕೊಡಲೇ ತೆಗೆಯುವಂತೆ ಪ್ರಗತಿಪರ ಸಂಘಟನೆ ಪದಾಧಿಕಾರಿಗಳು ಗುರುವಾರ ಮುಖ್ಯಾವೈದ್ಯಧಿಕಾರಿ ಡಾ.ಶಿವಾನಂದ ಅವರಿಗೆ ಮನವಿ ಸಲ್ಲಿಸಿದರು. ಒಂದೂವರೆ ತಿಂಗಳಿಂದ ಮುಚ್ಚಲಾಗಿದೆ. ಇದರಿಂದಾಗಿ ಆಸ್ಪತ್ರೆಗೆ ಬರುವ ಬಡರೋಗಿಗಳಿಗೆ ಕಡಿಮೆ ದರದಲ್ಲಿ ಜೌಷಧ್ಯ ಸಿಗದಂತಾಗಿದೆ. ಇಂತಹ ವಾತಾವರಣ ನಿರ್ಮಾಣವಾದ್ದರಿಂದ ಕೆಲ ವೈದ್ಯರು ಖಾಸಗಿ ಅಂಗಡಿಗಳಿಗೆ ಜೌಷಧ್ಯ ಬರೆಯಲಾಗುತ್ತಿದೆ. ದುಬಾರಿ ಹಣ ಕೊಟ್ಟು ಬಡರೋಗಿಗಳು ಜೌಷಧ್ಯ ಖರೀದಿಸಬೇಕಾದಂತ ಪರಿಸ್ಥತಿ ನಿರ್ಮಾಣವಾಗಿದೆ. ಸರಕಾರ ಬಡರೋಗಿಗಳಿಗೆ ಕಡುವೆ ದರದಲ್ಲಿ ಜೌಷಧ್ಯ ಸೌಲಭ್ಯ ಕಲ್ಪಿಸಿದ್ದು, ಇಲ್ಲಿನ ಆಡಳಿತ ವ್ಯವಸ್ಥೆ ಸರಿಯಿಲ್ಲದ ಕಾರಣ ನಿರ್ವಹಣೆ ಕೊರತೆ ಹಿನ್ನೆಲೆ ಜನ ಜೌಷಧ್ಯ ಅಂಗಡಿ ಮುಂಚಲಾಗಿದೆ ಎಂದು ದೂರಿದರು. ಇಲ್ಲಿನ ಸರಕಾರಿ ಆಸ್ಪತ್ರೆಗೆ ತಾಂಡಾ, ದೊಡ್ಡಿ ಸೇರಿ ಸ್ಲಂ ನಿವಾಸಿಗಳು ಅವಲಂಭಿತವಾಗಿದ್ದಾರೆ. ಆಸ್ಪತ್ರೆಯಲ್ಲಿ ಜೌಷಧ್ಯ ಲಭ್ಯವಿಲ್ಲದಾಗ, ವೈದ್ಯರು ಬರೆಯುವ ಜೌಷಧ್ಯ ದುಬಾರಿ ಬೆಲೆಗೆ ಖರೀದಿಸಲು ಕಣ್ಣೀರುವ ಕಪಾಳಕ್ಕೆ ಬರುತ್ತಿವೆ. ಬಡರೋಗಿಗಳಿಗೆ ಅನುಕೂಲವಾಗಿದ್ದಂತ ಜನ ಜೌಷಧ್ಯ ಅಂಗಡಿ ಬಂದಾದ್ದರಿಂದ ಹೊರಗಡೆ ಖರೀದಿಸಲು ಸಮಸ್ಯೆ ಎದುರಾಗಿದೆ. ಇಂತಹ ವಾತಾವರಣ ನಿರ್ಮಾಣವಾದ್ದರಿಂದ ಬಡರೋಗಿಗಳು ಸರಕಾರಿ ಆಸ್ಪತ್ರಗೆ ಮುಖ ಮಾಡದಂತಾಗಿದೆ. ಸರಕಾರಿ ಆಸ್ಪತ್ರೆಗಿಂತ ಖಾಸಗಿ ಆಸ್ಪತ್ರೆ ಉತ್ತಮ ಎನ್ನುವ ರೋಗಿಗಳಲ್ಲಿ ಭಾವನೆ ಮೂಡಿದ್ದರಿಂದ ಶಾಪಹಾಕುವಂತಿದೆ. ಇನ್ನಾದರೂ ಸಂಬಂಧಪಟ್ಟಂತ ಅಧಿಕಾರಿಗಳು ಮುಂಚಿರುವ ಜನ ಜೌಷಧ್ಯ ಅಂಗಡಿ ಕೊಡಲೇ ಓಪನ್ ಮಾಡಿಸುವ ಜತೆ ಬಡರೋಗಿಗಳಿಗೆ ಅನುಕೂಲ ಕಲ್ಪಿಸುವಂತೆ ಮನವಿ ಪತ್ರದಲ್ಲಿ ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಜಿ.ಬಸವರಾಜ ನಾಯಕ, ಶಿವಪ್ಪ ಬಲ್ಲಿದ್, ಪರಶುರಾಮ ಮಾಗಡಿ, ಮಹೆಬೂಬ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!