ಉದಯವಾಹಿನಿ ಮಸ್ಕಿ: ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಸಂಘದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಆಯ್ಕೆಯಾದ ಪದಾಧಿಕಾರಿಗಳು ಸಂಘದ ತತ್ವ ಸಿದ್ದಾಂತಗಳಿಗೆ ಬದ್ಧರಾಗಿ ಸಂಘದ ಬಲವರ್ಧನೆಗೆ ಶ್ರಮಿಸಬೇಕೆಂದು ತಾಲೂಕ ಘಟ ಅಧ್ಯಕ್ಷ ಆರ್.ಕೆ ನಾಯಕ ಆವರು ಹೇಳಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿರಿಯ ಮುಖಂಡ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ ಹಾಗೂ ಜಿಲ್ಲಾ ಅಧ್ಯಕ್ಷ ಹನುಮೇಶ ನಾಯಕ ಸಾದಾಪೂರ ಅವರ ಶಿಫಾರಸ್ಸಿನ ಮೇರೆಗೆ ತಾಲೂಕ ಘಟಕ ವ್ಯಾಪ್ತಿಗೆ ಒಳಪಟ್ಟ ಗುಡದೂರು, ಮೆದಿಕಿನಾಳ, ಸಂತೆಕೆಲ್ಲೂರು, ತೋರಣದಿನ್ನಿ, ಪಾಮನಕೆಲ್ಲೂರು ಈ ಐದು ಜಿಪಂ ವ್ಯಾಪ್ತಿಯಲ್ಲಿ ಪದಾಧಿಕಾರಿಗಳನ್ನು ಹಾಗೂ ಮಸ್ಕಿ ನಗರ ಘಟಕದ ನೂತನ ಪದಾಧಿಕಾರಿಗಳನ್ನು ಈಗಾಗಲೇ ನೇಮಕ ಮಾಡಲಾಗಿದೆ, ಎಲ್ಲಾರು ಸಂಘದ ತತ್ವ ಸಿದ್ದಾಂತಕ್ಕೆ ಬದ್ಧರಾಗಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಬಲವರ್ಧನೆಗೆ ಶ್ರಮಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ವೆಂಕಟೇಶ ಬೊಮ್ಮನಾಳ, ಹನುಮನಗೌಡ ಬೊಮ್ಮನಾಳ, ಹನುಮಂತಪ್ಪ ನಾಯಕ, ನಾಗರಾಜ ಚಿಗರಿ ಸೇರಿದಂತೆ ಇನ್ನಿತರಿದ್ದರು.
