ಉದಯವಾಹಿನಿ ಕೆ.ಆರ್.ಪೇಟೆ: ನಗರ ನಿರ್ಮಾಣದ ಅಭೂತಪೂರ್ವ ಚಿಂತನೆಯ ನಾಡಪ್ರಭು ಕೆಂಪೇಗೌಡರ ಭಾವಚಿತ್ರಗಳನ್ನು ಶಿಕ್ಷಕ ಬಿ.ಆರ್.ರಮೇಶ್ ವಿತರಿಸುತ್ತಿರುವುದು ಸ್ವಾಗತಾರ್ಹ ಎಂದು ಶಿಕ್ಷಣ ಸಂಯೋಜಕಿ ನೀಲಾಮಣಿ ತಿಳಿಸಿದರು.ಅವರು ತಾಲ್ಲೂಕಿನ ಕಸಬಾ ಹೋಬಳಿಯ ಹರಿಹರಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹರಿಹರಪುರ ಸಮೂಹ ಸಂಪನ್ಮೂಲ ಕೇಂಧ್ರದ ಎಲ್ಲಾ ಶಾಲೆಗಳಿಗೆ ನಾಡಪ್ರಭು ಕೆಂಪೇಗೌಡರ ಭಾವಚಿತ್ರಗಳನ್ನು ವಿತರಿಸಿ ಮಾತನಾಡಿದರು.ಇತ್ತೀಚಿನ ವರ್ಷಗಳಲ್ಲಿ ನಾಡಪ್ರಭು ಜಯಂತಿಯನ್ನು ಸರ್ಕಾರ ಎಲ್ಲಾ ಶಾಲೆಗಳಲ್ಲಿ ಹಾಗೂ ಕಛೇರಿಗಳಲ್ಲಿ ಆಚರಿಸಬೇಕು ಎನ್ನುವ ಕಡ್ಡಾಯವಾದ ಆದೇಶದ ಹಿನ್ನೆಲೆಯಲ್ಲಿ ಕೆಂಪೇಗೌಡರ ಭಾವಚಿತ್ರಗಳು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಇಲ್ಲದಿರುವುದನ್ನು ಗಮನಿಸಿದ ಶಿಕ್ಷಕ ಹಾಗೂ ಕೆಂಪೇಗೌಡ ಪ್ರಶಸ್ತಿವಿಜೇತ ಬಿ.ಆರ್.ರಮೇಶ್ ಹರಿಹರಪುರ ಸಮೂಹ ಸಂಪನ್ಮೂಲ ಕೇಂಧ್ರದ ಎಲ್ಲಾ ಶಾಲೆಗಳಿಗೆ ಕೆಂಪೇಗೌಡರ ಭಾವಚಿತ್ರಗಳನ್ನು ವಿತರಿಸಲು ಕ್ರಮ ಕೈಗೊಂಡಿರುವ ಅವರ ಕಾರ್ಯ ಅಭಿನಂದನಾರ್ಹ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ಎಂ.ಎನ್.ದೇವರಾಜು, ಹರಿಹರಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜೆ.ಬಿ.ನಾಗರಾಜು, ಶಿಕ್ಷಕರಾದ ರಾಮಚಂದ್ರ, ಕುಮಾರಿ, ಬಸವರಾಜು, ಮಂಜುನಾಥ, ಅನಿತ ಸೇರಿದಂತೆ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರುಗಳು ಹಾಜರಿದ್ದರು.
