ಉದಯವಾಹಿನಿ, ಔರಾದ್ :ಜಾತಿ,ಪ್ರದೇಶ,ಧರ್ಮ,ಭಾಷೆ ಹಾಗೂ ಭಾವನಾತ್ಮಕ ಭಾರತ ದೇಶದ ಜನರನ್ನು ಏಕತೆ ಮಾಡುವುದರಲ್ಲಿ ಭಾರತದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಶ್ರಮಿಸಿದ್ದಾರೆ ಯುವಕರಿಗೆ ಉದ್ಯೋಗ ನೀಡಲು ಜವಾಹರ ರೋಜಗಾರ ಯೋಜನೆ ಪ್ರಾರಂಭಿಸಿ ಬಡವರ ಹಸಿವು ನಿಗಿಸಲು ಶ್ರಮಿಸುವ ಮೂಲಕ ಯುವ ಜನತೆಯ ಅಭಿವೃದ್ಧಿಗೆ ಶ್ರಮಿಸದ್ದಾರೆ ಎಂದು ಔರಾದ ಪಟ್ಟಣ ಪಂಚಾಯತ ಸದಸ್ಯರಾದ ಬಂಟಿ ದರ್ಬಾರೆ ಹೇಳಿದರು.ತಾಲ್ಲೂಕಿನ ಸಂತಪೂರ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ ಬೀದರ್ ಮತ್ತು ಸುಭಾಷ್ ಚಂದ್ರ ಬೋಸ್ ಯುವಕರ ಸಂಘ,ಔರಾದ ಇವರ ಸಂಯುಕ್ತಾಶ್ರಯದಲ್ಲಿ ಭಾರತದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಜೀವ ಗಾಂಧಿ ಅವರ ಜನಪ್ರಿಯ ಆಡಳಿತ ದೇಶದ ಪ್ರತಿಯೊಬ್ಬ ನಾಗರಿಕರ ಮನದಲ್ಲಿ ಅಚ್ಚಳಿಯದಂದತೆ ಹೆಸರುವಾಸಿಯಾಗಿದೆ ಎಂದು ಹೇಳಿದರು. ಸುಭಾಷ್ ಚಂದ್ರ ಬೋಸ್ ಯುವಕರ ಸಂಘದ ಅಧ್ಯಕ್ಷ ರತ್ನದೀಪ ಕಸ್ತೂರೆ ಮಾತನಾಡಿ, ಭಾರತದ ಯುವ ಪ್ರಧಾನಿ ರಾಜೀವ್ ಗಾಂಧಿ ಆಗಿದ್ದವರು, ಯುವ ಶಕ್ತಿಯನ್ನು ಬಲವಾಗಿ ಪ್ರೋತ್ಸಾಹಿಸಿದ ಅವರು ದೇಶದ ಯುವ ಜನತೆಯ ಜಾಗೃತಿಯಿಂದ ಮಾತ್ರ ದೇಶದ ಅಭಿವೃದ್ಧಿ ಅವಲಂಬತಿವಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ವೀಲಕುಮಾರ ಉತ್ಕಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ಎಎಸ್ಐ ಅಶೋಕ್ ಜುಲ್ಫೆ, ಪೊಲೀಸ್ ಸಿಬ್ಬಂದಿ ಸೂರ್ಯಕಾಂತ ದೇಶಮುಖ್, ರಾಮಶೆಟ್ಟಿ, ಉಪನ್ಯಾಸಕರಾದ ಶಿವಪುತ್ರ ಧರಣಿ, ಕಲ್ಲಪ್ಪ ಬುಟ್ಟೆ, ಸಿದ್ದಾರೂಢ ಪಂಚಾಳ, ಅಂಬಿಕಾ ವಿಶ್ವಕರ್ಮ, ಮೀರಾತಾಯಿ ಕಾಂಬಳೆ, ಈರಮ್ಮ ಕಟಗಿ, ಸುಧಾ ಕೌಟಿಗೆ, ವನದೇವಿ ಎಕ್ಕಳೆ ಇದ್ದರು.

Leave a Reply

Your email address will not be published. Required fields are marked *

error: Content is protected !!