
ಉದಯವಾಹಿನಿ ದೇವರಹಿಪ್ಪರಗಿ: ಅಂಗನವಾಡಿಗಳಿಂದ ಫಲಾನುಭವಿಗಳಿಗೆ ಸಿಗುವಂತಹ ಸೌಲಭ್ಯಗಳು, ಅದರಲ್ಲೂ ಮುಖ್ಯವಾಗಿ 3 ರಿಂದ 6 ವರ್ಷದ ಮಕ್ಕಳಿಗೆ ಅತಿ ಅವಶ್ಯವಾಗಿರುವ ಶಾಲಾ ಪೂರ್ವ ಶಿಕ್ಷಣದಿಂದ ಮಕ್ಕಳಲ್ಲಿ ಆಗುವ ಬದಲಾವಣೆಗಳು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಶಾಲಾ ಪೂರ್ವ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಉಜ್ವಲ ಸಂಸ್ಥೆ ಶಾಲಾ ಪೂರ್ವ ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾದ ಶಶಿಕಾಂತ ಸುಂಗಠಾಣ ಹೇಳಿದರು.ತಾಲೂಕಿನ ಕೋರವಾರ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ 07ರಲ್ಲಿ ಪಾಲಕರ ಹಾಗೂ ಪೋಷಕರ ಸಭೆಯನ್ನು ಗ್ರಾಮ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಜ್ವಲ ಸಂಸ್ಥೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.ಶಾಲಾ ಪೂರ್ವ ಶಿಕ್ಷಣ ಅನುಷ್ಠಾನಗೊಳ್ಳಲು ಅವಶ್ಯವಿರುವ ಸಾಮಗ್ರಿಗಳು ಮತ್ತು ಮಕ್ಕಳ ಸಮವಸ್ತ್ರ ಬೇಕೆಂದು ತಮ್ಮ ಮಾತಿನಲ್ಲಿ ವಿನಂತಿಸಿಕೊಂಡರು. ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ರಾಜಶೇಖರ ಛಾಯಗೋಳ ಮಾತನಾಡುತ್ತಾ ಶಾಲಾ ಪೂರ್ವ ಶಿಕ್ಷಣಕ್ಕೆ ಬೇಕಾಗುವ ಸಾಮಾಗ್ರಿಗಳ ಖರ್ಚುನ್ನು ವ್ಯಯಕ್ತಿಕವಾಗಿ 10 ಸಾವಿರ ನೀಡುವುದಾಗಿ ಹೇಳಿದ್ದರು.
ಗ್ರಾಮ ಪಂಚಾಯತ ಸದಸ್ಯರಾದ ಭೀಮನಗೌಡ ಕುಳೇಕುಮಟಗಿ ಇವರು ಮಾತನಾಡುತ್ತಾ ಅಂಗನವಾಡಿಗಳು ಉತ್ತಮವಾಗಿ ಕಲಿಕಾ ಕೇಂದ್ರಗಳಾಗಿ ಪರಿವರ್ತನೆ ಆದರೆ ಮಕ್ಕಳು ಉತ್ತಮ ರೀತಿಯಲ್ಲಿ ಬೇಳೆಯುತ್ತಾರೆ, ಕಲಿಕೆ ಮಗುವಿಗೆ ಅವಶ್ಯಕತೆ ಆಗಿದೆ.ನನ್ನ ವ್ಯಯಕ್ತಿಕವಾಗಿ ಅಂಗನವಾಡಿಯಲ್ಲಿ ದಾಖಲಿರುವ ಎಲ್ಲಾ ಮಕ್ಕಳಿಗೂ ಸಮವಸ್ತ್ರ ಕೊಡಿಸುತ್ತೇನೆಂದು ಹೇಳಿದ್ದರು ಇದೇ ತರನಾಗಿ ಅಂಗನವಾಡಿ ಗುರುಮಾತೆಯರಾದ ಎನ್ ಐ ಕುಳೇಕುಮಟಗಿ ಅವರು ಮಾತನಾಡುತ್ತಾ ಊರಿನ ಸಹಾಯ ಸಹಕಾರ ಇದ್ದರೆ ಉತ್ತಮ ಅಂಗನವಾಡಿಯನ್ನಾಗಿ ಹಗಲಿರಳು ಸೇವೆ ಮಾಡುತ್ತೇನೆ. ತಮ್ಮ ಇಲಾಖೆಯಿಂದ ಮಹಿಳೆ ಮತ್ತು ಮಕ್ಕಳಿಗಾಗಿ ಇರುವ ಸೌಲಭ್ಯಗಳನ್ನು ಪಾಲಕರು ಪಡೆದುಕೊಳ್ಳಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳ ಪಾಲಕರು ಮಕ್ಕಳ ಆರೋಗ್ಯ ಮತ್ತು ಕಲಿಕೆಯಲ್ಲಿ ಆದ ಬದಲಾವಣೆಗಳನ್ನು ಸಭೆಯ ಮುಂದೆ ಹೇಳಿದರು.ವೇದಿಕೆ ಮೇಲೆ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶಿವಪ್ಪ ತಾಳಿಕೋಟಿ, ಉಪಾಧ್ಯಕ್ಷರಾದ ಮಹಾದೇವ ರಾಮನಳ್ಳಿ, ಸದಸ್ಯರಾದ ದಯಾನಂದ ಗುತ್ತರಗಿಮಠ, ತಾಲೂಕು ರೈತ ಸಂಘದ ಅಧ್ಯಕ್ಷರಾದ ಈರಣ್ಣ ಕುಳೆಕುಮಟಗಿ, ಸಭೆಯ ಅಧ್ಯಕ್ಷತೆ ವಹಿಸಿದ ಬಾಲ ವಿಕಾಸ ಸಮಿತಿ ಅಧ್ಯಕ್ಷರಾದ ರೀಯಾನ್ ಬೇಗಂ ಕಂದಗಲ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು, ಊರಿನ ಪ್ರಮುಖರು, ಮಕ್ಕಳ ಪಾಲಕರು ಬಾಗವಹಿಸಿದ್ದರು.ಸ್ವಾಗತ ಅಂಗನವಾಡಿ ಸಹಾಯಕಿ ಗೀತಾ ಘಾಟಗೆ, ವಂಧನಾರ್ಪಣೆಯನ್ನು ರೇಣುಕಾ ಬಿರಾದಾರ ಮಾಡಿದ್ದರು.
