ಉದಯವಾಹಿನಿ ದೇವರಹಿಪ್ಪರಗಿ: ಯೋಧರನ್ನು ಗೌರವಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವೆಂದು ಗ್ರಾಮದ ಯುವಧುರಿಣ ಸೋಮು ಮುಕಾದಾಮ ಹೇಳಿದರು. ಅವರು ಹಿಟ್ನಳ್ಳಿ ತಾಂಡಾದ ಜಯರಾಮ ನಾತು ದೊಡಮನಿ ಇವರ ಪುತ್ರ ಶಿವಕುಮಾರ ಇವರು ಬೆಂಗಳೂರಿನಲ್ಲಿ 7 ತಿಂಗಳ ತರಬೇತಿಯನ್ನು ಮುಗಿಸಿ ಸ್ವಗ್ರಾಮದಿಂದ ದೇಶದ ರಕ್ಷಣೆಗೆ ಹೋರಟಿರುವ ಸಂಧರ್ಭದಲ್ಲಿ ಸನ್ಮಾನಿಸಿ ಮಾತನಾಡಿದರು. ಶಿವಕುಮಾರ ತನ್ನ 21ನೇ ವಯಸ್ಸಿನಲ್ಲಿನಮ್ಮೆಲ್ಲರ ರಕ್ಷಣೆಗೆ ಅವರು ಧರ್ಯದಿಂದ ದೇಶದ ಗಡಿಯಲ್ಲಿ ಕೆಲಸಕ್ಕೆ ಹಾಜರಾಗಲು ಹೋರಟಿರುತ್ತಾನೆ ಅವನಿಗೆ ತಮ್ಮೆಲ್ಲರ ಪರವಾಗಿ ತುಂಬು ಹೃದಯದ ವಂದನೆಗಳನ್ನು ತಿಳಿಸಿದರು. ತಾಯಿ ಅಕ್ಕುಬಾಯಿ ಜಯರಾಮ ದೊಡಮನಿ ಇವರು ಪುತ್ರ ಶಿವಕುಮಾರ ಇವನಿಗೆ ತೀಲಕವನ್ನಿಟ್ಟು ಆರತಿಯನ್ನು ಮಾಡಿದರು. ತಂದೆ ಜಯರಾಮ ನಾತು ದೊಡಮನಿ, ಚಿಕ್ಕಪ್ಪ ಪರಶುರಾಮ ನಾತು ದೊಡಮನಿ, ಚಿಕ್ಕಮ್ಮ ದೀಪಾ ಪರಶುರಾಮ ದೊಡಮನಿ, ಅಜ್ಜಿ ರತ್ನಾಬಾಯಿ ನಾತು ದೊಡಮನಿ, ಅಕ್ಕ ಅರ್ಪಿತಾ ಗಂ. ವಿನೊದ ಜಾಧವ, ತಂಗಿ ಅಕ್ಷತಾ ಜಯರಾಮ ದೊಡಮನಿ, ಹಾಗೂ ಮಾವಂದಿರು ಮತ್ತು ಸೀನು ಜಾಧವ, ಕಸ್ತೂರಿಬಾಯಿ ಜಾಧವ, ಸರೋಜಾ ರಮೇಶ ಚವ್ಹಾಣ (ಕೆ.ಎಮ್. ಎಫ್‌ ಬಾಗಲಕೋಟ), ತ್ರಿವೇಣಿ, ಐಶ್ವರ್ಯ, ಕೆ.ಜಿ.ರಾಠೋಡ, ಬಂಜಾರಾ ಸಂಘದ ಕಾರ್ಯದರ್ಶಿಗಳು ವಿಜಯಪೂರ ಮತ್ತು ಶೇಟ್ಟಿ ತುಕಾರಾಮ ನಿಪ್ಪಾಣಿ, ವೇಣು ಮುಕಾದಾಮ , ದತ್ತಾತ್ರೆಯ ಜ ದೊಡಮನಿ

Leave a Reply

Your email address will not be published. Required fields are marked *

error: Content is protected !!