
ಉದಯವಾಹಿನಿ ಮೈಸೂರು:ಎಸ್ ಎಸ್ ಕಲಾ ಸಂಗಮ ಸಂಸ್ಥೆ ಬೆಂಗಳೂರು ಅವರಿಂದ ಪ್ರತಿ ವರ್ಷದಂತೆ 04 ನೇ ವರ್ಷದ ಆಚೀವರ್ಸ್ ಅವಾರ್ಡ್ ಕಾರ್ಯಕ್ರಮಕ್ಕೆ ರಾಜ್ಯ ಜೆಡಿಎಸ್ ಪಕ್ಷದ ಮುಖಂಡರಾದ ಬಲರಾಮ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಸ್ಮೈಲ್ ಎಂಬ ಕುಖ್ಯಾತಿ ಪಡೆದಿರುವ ಮತ್ತು ಅತೀ ಚಲನಚಿತ್ರದ ಹೆಸರು ಮಾಡಿರುವ ಶಿವು ಸ್ಮೈಲ್ ಅವರ ನೇತೃತ್ವದಲ್ಲಿ 4ನೇ ವರ್ಷದಲ್ಲಿ ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವುದರ ಜೊತೆಗೆ ಒಂದು ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದು ನಿಜಕ್ಕೂ ಶ್ಲಾಘನೀಯ ಎಂದರು ವಿಶ್ವಾದ್ಯಂತ ಸಾಂಸ್ಕೃತಿಕ ಪ್ರಸಿದ್ದವಾಗಿರುವ ಮೈಸೂರು. ಮತ್ತು ನಗರದಲ್ಲಿ ಇರುವ ಶ್ರೀ ಸದ್ದು ಗುರು ರೆಸಿಡೆನ್ಸಿ ಹೊಟೇಲ್ ನಲ್ಲಿ ನಡೆದ ಎಸ್ ಎಸ್ ಕಲಾ ಸಂಗಮ ಸಂಸ್ಥೆ ವತಿಯಿಂದ ಮಿಸ್ ಮಿಸ್ಸೆಸ್ ಅಂಡ್ ಕಿಡ್ಸ್ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಪ್ರಶಸ್ತಿ ನೀಡಿ ಗೌರವಿಸಿತ್ತಿರವುದು ಹೆಮ್ಮೆ ಪಡುವಂತೆ ಸಾಂಸ್ಕೃತಿಕ ವೇದಿಕೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ವೀರೇಶ್ ಹೊಸಳ್ಳಿ ಉದಯ ವಾಹಿನಿ ಹಾಗೂ ಸಮಾಜ ವಿಕಾಸ ತಾಲ್ಲೂಕು ವರದಿಗಾರರು ಹಾಗೂ ಉದಯ ವಾಹಿನಿ ವಾಹಿನಿ ದಿನಪತ್ರಿಕೆ ಯಾದಗಿರಿ ಜಿಲ್ಲಾ ವರದಿಗಾರರಾದ ಇಲಿಯಾಸ್ ಪಟೀಲ್ ಬಳಗಾನೂರ , ಧರ್ಮಣ್ಣ.ಟಿ ನ್ಯೂಸ್ ಹಾಗೂ ರೈತ ಮುಖಂಡರು ಎಚ್ ಆರ್ ಬಡಿಗೇರ್ ಇವರುಗಳನ್ನು ಎಸ್ಎಸ್ ಕಲಾ ಸಂಗಮ ಸಂಸ್ಥೆ ಅಧ್ಯಕ್ಷರಾದ ಸ್ಮೈಲ್ ಶಿವು ಆಚೀವರ್ಸ್ ಅವಾರ್ಡ್ಸ್ ಆಯ್ಕೆ ಮಾಡಿ ಎಲ್ಲಾರಿಗೂ ರಾಜ್ಯ ಮಟ್ಟದ ಗೌರವ ಪ್ರಶಸ್ತಿ ಸನ್ಮಾನ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ಎಸ್ ಎಸ್ ಕಲಾ ಸಂಗಮ ಮಿಸ್ ಮಿಸ್ಸೆಸ್ ಅಂಡ್ ಕಿಡ್ಸ್ ಮೈಸೂರ್ ಕರ್ನಾಟಕ 2023 ಸೀಸನ್ ಫೋರ್ ಮೈಸೂರಿನ ಗುರು ರೆಸಿಡೆನ್ಸಿ ಹೋಟೆಲ್ಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 60ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಈ ಒಂದು ಫ್ಯಾಷನ್ ಶೋ ತೀರ್ಪುಗಾರರಾಗಿ ಆಗಮಿಸಿದ ಸತ್ಯವತಿ ಬಸವರಾಜ್ ಭುವನ ಸುಂದರಿ 2022 ವಿನ್ನರ್ ಜ್ಯೋತಿ ಬಿಹಲ್ ಖ್ಯಾತ ಡಿಸೈನರ್ ವರ್ಷ ಮಿಸಸ್ ಇಂಡಿಯಾ ವಿನ್ನರ್ ಸುಪ್ರಜಾ ಮಿಸೆಸ್ ಇಂಡಿಯಾ ವಿನ್ನರ್ ಪೂರ್ಣಿಮಾ ಮಿಸಸ್ ಮೈಸೂರು ವಿನ್ನರ್ ಇತರರು ಇದ್ದರು ಮುಖ್ಯ ಅತಿಥಿಗಳಾಗಿ ಜಗದೀಶ್ ಬಿಜೆಪಿ ಲೀಡರ್ ಖ್ಯಾತ ಗಾಯಕರಾದ ಶಶಿಧರ್ ಕೋಟೆ ಬಲರಾಮ್ ಜೆಡಿಎಸ್ ಮುಖಂಡರು ಬೆಂಗಳೂರು ಡಾ ಮಾಣಿಕ್ ಟ್ಯಾಂಡಲಿ ರಾಮಪ್ಪ ಡಾಕ್ಟರ್ ಲೀಲ ಮೋಹನ್ ಚಲನಚಿತ್ರ ನಟರು ನಿರ್ಮಾಪಕರು ಕಾರ್ಯಕ್ರಮದ ಆಯೋಜಕರು ಶಿವಕುಮಾರ್ ಬಿಕೆ ಶೋಭಾ ಪಿಎನ್ ಶಿಲ್ಪ ಗಣೇಶ್. ಹಾಗೂ ಇತರರು ಸಿನಿಮಾ ನಟರು ನಿರ್ಮಾಪಕರು ಹಾಗೂ ನಿರ್ದೇಶಕರು ಮತ್ತು ಸ್ಪರ್ಧೆಗಳ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

