ಉದಯವಾಹಿನಿ ನಾಗಮಂಗಲ:  ಸಮಾಜದಲ್ಲಿನ ಹಿಂದುಳಿದ ಹಾಗೂ ಶೋಷಿತ ವರ್ಗಗಳು ಸಮಾಜ ಸೇವೆ ಮುಖಾಂತರ ಅವರುಗಳ ಮುಖ್ಯ ವಾಹಿನಿಗೆ ತರಲು ನಮ್ಮ ಗುರಿ ಒಂದೇ ಎಂದು ತಾಲೂಕು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಸಿಎನ್ ಮಂಜುನಾಥ್ ತಿಳಿಸಿದರು.ಅವರು ನಾಗಮಂಗಲ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘ 2022- 23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸುತ್ತಾ ಮಾತನಾಡಿದರು.ಸಮಾಜದಲ್ಲಿ ಅನೇಕ ಸಮುದಾಯಗಳು ಶೋಷಿತ ವರ್ಗಗಳು ಅವರ ಬೆಳವಣಿಗೆಗೆ ತಮ್ಮದೇ ಆದ ಸಂಘ ಸಂಸ್ಥೆಗಳ ಮೂಲಕ ಅವರ ಬೆಳವಣಿಗೆಗಳ ಮುಖಾಂತರ ಬಂದಿದ್ದು ಕೇವಲ ಒಂದೇ ವರ್ಗಕ್ಕೆ ಸೀಮಿತವಾಗದೆ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಾಗ ಎಲ್ಲಾ ವರ್ಗಗಳು ತುಳಿತಕ್ಕೆ ಒಳಗಾಗಿರುವ ಜನರ ಏಳಿಗೆ ಹಾಗೂ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಯಾವುದೇ ವರ್ಗಕ್ಕೆ ನಾವುಗಳು ಸೇರಿದ್ದರು ಒಂದೇ ಗುರಿ ಅದು ಸಮುದಾಯದವರುಗಳನ್ನ ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದ ಪ್ರಯತ್ನ ಎಂದು ಮಾತನಾಡಿದರು. ಸಮುದಾಯದ ಸಹಕಾರ ಬೆಳವಣಿಗೆ ಸಂಘಟನೆಗಳು ಅಭಿವೃದ್ಧಿಯತ್ತ ಸಾಗಲು ತಾಲೂಕಿನ ಎಲ್ಲಾ ಗ್ರಾಮೀಣ ಪ್ರದೇಶ ಗಳಲ್ಲಿನ ಸಮುದಾಯದವರು ಸಹಕಾರದೊಂದಿಗೆ ಸಂಘವು ಬೆಳೆದಿದ್ದು ತನ್ನದೇ ಆದ ಭವನ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ತಮ್ಮಗಳ ಸಹಕಾರದೊಂದಿಗೆ ಮಾಡುವ ಆಶಯವಿದ್ದು ತಾವುಗಳು ಸಹಕಾರ ನೀಡಬೇಕೆಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷರಾದ ಕೃಷ್ಣಚಾರ್ ರವರು ಮಾತನಾಡಿದರು.ಸಮಾರಂಭದಲ್ಲಿ ಮಂಡ್ಯ ಜಿಲ್ಲಾಧ್ಯಕ್ಷರು ರಮೇಶಣ್ಣ ಗಾಣಿಗರ ಸಮಾಜದ ಮುಖಂಡರು ಶ್ರೀನಿವಾಸ್ ವಿಶ್ವಮೂರ್ತಿ ದಿವಾಕರ್ ಲಕ್ಷ್ಮಿ ಸಾಗರ್ ಮಂಜುನಾಥ್ ಅಭಿಷೇಕ್ ರಾಜು ಸಂತೋಷ್ ಶೇಷಾಚಾರ್, ಸೋಮಚಾರ್ ಉಮೇಶ ಎನ್ ಎ ಪದಾಧಿಕಾರಿಗಳು ಸಂಘದ ಸದಸ್ಯರುಗಳು ಇನ್ನು ಮುಖಂಡರುಗಳು ಭಾಗವಹಿಸಿದರು

Leave a Reply

Your email address will not be published. Required fields are marked *

error: Content is protected !!