ಉದಯವಾಹಿನಿ ಮುದ್ದೇಬಿಹಾಳ ; ಶಾಲಾ ಮೈದಾನ ಶೈಕ್ಷಣಿಕ ಉದ್ದೇಶಕ್ಕೆ ಬಳಕೆ ಮಾಡಬೇಕು ಎಂದು ಶಿಕ್ಷಣ ಇಲಾಖೆಯ ನಿಯಮವಿದ್ದರು ಮುದ್ದೇಬಿಹಾಳ ವ್ಹಿಬಿಸಿ ಹೈಸ್ಕೂಲ್ ಮೈದಾನ ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ‌ ಮಾಡಲಾಗುತ್ತಿದೆ ಎಂದು ನ್ಯಾಯವಾದಿ ವಿರೇಶ ಹಿರೇಮಠ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ದೂರನ್ನು ನೀಡಿದ್ದಾರೆ ಶನಿವಾರ ತಹಶಿಲ್ದಾರ ಕಚೇರಿಗೆ ಆಗಮಿಸಿದ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕ ಅಹವಾಲು ನೀಡಿದ ದೂರುದಾರ ವಿರೇಶ ಹಿರೇಮಠ ಮುದ್ದೇಬಿಹಾಳ ಪಟ್ಟಣದ ಸರ್ವೆ ನಂ 84 / ಸಿ ಟಿ ಎಸ್ 2606 ಭೂಮಿಯನ್ನು ಅಕ್ರಮವಾಗಿ ಕಬ್ಜಾ ಮಾಡಿಕೊಂಡು ಶಿಕ್ಷಣ ಉದ್ದೇಶಗಳಿಗೆ ಹೊರತು ಪಡಿಸಿ ಬೇರೆ ಉದ್ದೇಶಕ್ಕೆ ಭೂಮಿ ಬಾಡಿಗೆ ನೀಡುತ್ತಿದ್ದಾರೆ.
ಈ ಜಮೀನ ಮೂಲ ಮಾಲಿಕರು ಹಿರೇಮಠ ಕುಟುಂಬಸ್ಥರು ಈ ವಿಷಯವಾಗಿ ಮುದ್ದೇಬಿಹಾಳ ದಿವಾಣಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ, ಸರಕಾರದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಭೂ ಸ್ವಾಧೀನ ಕಾಯ್ದೆ ಅಡಿ ಭೂಸ್ವಾದೀನ ಮಾಡಿಕೊಳ್ಳಲಾಗಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಶಿಕ್ಷಣಕ್ಕಾಗಿ ಬಳಸಿಕೊಳ್ಳತ್ತೇವೆ ಎಂದು ಶಿಕ್ಷಣ ಇಲಾಖೆಗೆ ಒದಗಿಸಿ ಭೂಮಿಯ ಮೂಲ ಮಾಲಿಕರಿಗೆ ಮೋಸ ಮಾಡಿದ್ದಾರೆ ಈ‌‌ ಕುರಿತು ಕ್ರಮಕ್ಕೆ ಕೈಗೊಳ್ಳಲು ಆದೇಶ ನೀಡಬೇಕು ಮತ್ತು ವಾಣಿಜ್ಯ ವ್ಯಾಪಾರದ ಮಳಿಗಗಳನ್ನು ತೆರವುಗೂಳಿಸಬೇಕೆಂದು ನ್ಯಾಯವಾದಿ ವಿರೇಶ ಹಿರೇಮಠ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!